ವೃದ್ಧರು, ಮಹಿಳೆಯರೇ ಈ ಗ್ಯಾಂಗ್ ಟಾರ್ಗೆಟ್ಉಡುಪಿಯಲ್ಲಿ ಇರಾನಿ ಗ್ಯಾಂಗ್ ಸೆರೆ ಉಡುಪಿ: ಪೊಲೀಸರ ಎಂದು ಹೇಳಿ ಜನರಿಗೆ ನಂಬಿಸಿ ವಂಚನೆ ಮಾಡುತ್ತಿದ್ದುದಲ್ಲದೇ, ವೃದ್ಧರು ಮತ್ತು ಮಹಿಳೆಯರನ್ನು ಟಾರ್ಗೆಟ್ ಮಾಡಿ ದೋಚುತ್ತಿದ್ದ ನಾಲ್ವರು ಇರಾನಿ ಗ್ಯಾಂಗ್ ನ ಕಳ್ಳರನ್ನು ಉಡುಪಿ ಪೆÇಲೀಸರು ಬಂಧಿಸಿದ್ದಾರೆ. ಜಾಕೀರ್ ಹುಸೇನ್ (26), ಕಂಬರ್ ರಹೀಂ ಮಿರ್ಜಾ (32 ), ಅಕ್ಷಯ್ ಸಂಜಯ್ ಗೋಸ್ವಾಮಿ (22), ಶಾಹರುಖ್ ಬಂದೆನವಾಜ್ ಶೇಖ್ (24) ಬಂಧಿತ ಆರೋಪಿಗಳಾಗಿದ್ದಾರೆ. ನಾಲ್ವರು ಆರೋಪಿಗಳು ದೆಹಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ವಯಸ್ಸಾದ ಒಂಟಿ ಮಹಿಳೆಯರು, ಗಂಡಸರನ್ನು ಟಾರ್ಗೆಟ್ ಮಾಡಿ ದೋಚುತ್ತಿದ್ದರು. ನಾವು ಪೆÇಲೀಸರು, ಮುಂದೆ ಗಲಾಟೆ ಆಗಿದೆ, ಚಿನ್ನಾಭರಣ ಬ್ಯಾಗಿನಲ್ಲಿ ಹಾಕಿಕೊಂಡು ಹೋಗಿ ಎಂದು ಹೇಳಿ ಅವರಲ್ಲಿದ್ದ ಚಿನ್ನಾಭರಣಗಳನ್ನು ತೆಗೆದು ಬ್ಯಾಗಿನಲ್ಲಿ ಹಾಕಿಕೊಡುವುದಾಗಿ ನಂಬಿಸಿ, ಅವರಿಗೆ ತಿಳಿಯದಂತೆ ಚಿನ್ನಾಭರಣವನ್ನು ಮೋಸದಿಂದ ಲಪಟಾಯಿಸುತ್ತಿದ್ದರು ಎನ್ನಲಾಗಿದೆ. ಈ ಎಲ್ಲ ಆರೋಪಿಗಳ ವಿರುದ್ಧ ಉಡುಪಿ, ಕುಂದಾಪುರ, ವಿಜಯಪುರ, ಚಿಕ್ಕಮಗಳೂರು, ಬಂಟ್ವಾಳ, ಮಂಗಳೂರು ಸಹಿತ ಹಲವೆಡೆ ವಂಚನೆ…
Author: Nammur Express Admin
ಬೆಳಗಾವಿ ಸಿಎಆರ್, ಡಿಎಆರ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಘಟನೆ ವರದಿ: ಕೀರ್ತಿಬೆಳಗಾವಿ: ಮಾಸ್ಕ್ ಧರಿಸಿದರೆ ಅಭ್ಯರ್ಥಿಗಳ ಮುಖ ಗೊತ್ತಾಗಲ್ಲ ಎಂದು ಸಿಎಆರ್, ಡಿಎಆರ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದ ಇಬ್ಬರು ನಕಲಿ ವಿದ್ಯಾರ್ಥಿಗಳು ಪೊಲೀಸರು ಕೈಗೆ ಸಿಕ್ಕಿ ಬಿದ್ದಿದ್ದಾರೆ.ನಕಲಿ ವಿದ್ಯಾರ್ಥಿಗಳು ಮತ್ತು ಪರೀಕ್ಷೆ ಬರೆಯಲು ನಕಲಿ ವಿದ್ಯಾರ್ಥಿಗಳನ್ನು ಕಳುಹಿಸಿದ ಅಭ್ಯರ್ಥಿಗಳನ್ನೂ ಪೆÇಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಭಾನುವಾರ ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸಿಎಆರ್, ಡಿಎಆರ್ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆದಿದ್ದವು.ಬೆಳಗಾವಿಯ ಜೈನ್ ಕಾಲೇಜು ಮತ್ತು ವಸಂತ ರಾವ್ ಪೆÇೀತದಾರ್ ಪಾಲಿಟೆಕ್ನಿಕ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಬಂದ ಇಬ್ಬರು ನಕಲಿ ಅಭ್ಯರ್ಥಿಗಳನ್ನು ಮೇಲ್ವಿಚಾರಕರು ಪತ್ತೆ ಮಾಡಿದ್ದಾರೆ. ತಕ್ಷಣ ಅವರನ್ನು ಪೆÇಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಗೋಕಾಕ್ನ ರೋಹನ್ ಎನ್ನುವ ಅಭ್ಯರ್ಥಿಯ ಹೆಸರಿನಲ್ಲಿ ಕೃಷ್ಣ ಎನ್ನುವ ಯುವಕ ಪರೀಕ್ಷೆ ಬರೆಯಲು ಬಂದಿದ್ದ ಎಂದು ಪೆÇಲೀಸರು ತಿಳಿಸಿದ್ದಾರೆ. ಮತ್ತೊಬ್ಬ ನಕಲಿ ಅಭ್ಯರ್ಥಿಯ ವಿಚಾರಣೆ ನಡೆಯುತ್ತಿದೆ. ಮಾಸ್ಕ್ ಇರುವುದರಿಂದ ಪತ್ತೆ ಮಾಡಲು…
ನಟ ವಿನೋದ್ ಪ್ರಭಾಕರ್ ಮನೆಗೆ ಡಿಕೆಶಿ ಭೇಟಿಒಂದು ಗಂಟೆಗೂ ಅಧಿಕ ಸಮಯ ಮಾತುಕತೆ ಬೆಂಗಳೂರು: ಕನ್ನಡ ಸಿನಿಮಾ ರಂಗದ ಮೇರುನಟರಲ್ಲಿ ಒಬ್ಬರಾದ ಟೈಗರ್ ಪ್ರಭಾಕರ್ ಅವರ ಮಗ ಕಾಂಗ್ರೆಸ್ ಪ್ರಚಾರಕ್ಕೆ ಬರಲಿದ್ದಾರೆಯೇ..?. ಹೌದು ಎನ್ನುತ್ತಿವೆ ಮೂಲಗಳು. ನಟ ವಿನೋದ್ ಪ್ರಭಾಕರ್ ಮನೆಗೆ ಶುಕ್ರವಾರ ಡಿಕೆಶಿ ಭೇಟಿ ನೀಡಿಸುಮಾರು ಒಂದು ಗಂಟೆಗೂ ಅಧಿಕ ಸಮಯ ಮಾತುಕತೆ ನಡೆಸಿದ್ದಾರೆ.ಬೆಂಗಳೂರಿನ ಆರ್.ಆರ್ ನಗರದ ಮನೆಯಲ್ಲಿ ಭೇಟಿ ಮಾಡಿದ್ದು,ರಾಜ ರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಶಿವಕುಮಾರ್ ಅವರು ಭೇಟಿ ಮಾಡಿದ್ದಾರೆ ಎನ್ನಲಾಗಿದ್ದು, ಎಲೆಕ್ಷನ್ ಪ್ರಚಾರಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದೇ ವೇಳೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲೂ ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ಮಾಡಲಾಗಿದೆ ಎನ್ನಲಾಗಿದೆ. ಡಿಕೆಶಿ ಆಹ್ವಾನದ ಮೇರೆಗೆ ವಿನೋದ್ ಪ್ರಭಾಕರ್ ಅವರು ಅವರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ವಿನೋದ್ ಪ್ರಭಾಕರ್ ಅವರೊಂದಿಗೆ ಸುಮಾರು ಒಂದು ಗಂಟೆಗೂ ಅಧಿಕ ಸಮಯ ಮಾತುಕಥೆ ನಡೆಸಿದ ಡಿಕೆ…
ಅಭಿಮಾನಿಗಳಿಂದ ಚಿತ್ರತಂಡಕ್ಕೆ ಬೇಡಿಕೆ: ಶೀಘ್ರ ರಿಲೀಸ್..! ಬೆಂಗಳೂರು: ದೇಶದ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದ ಕೆಜಿಎಫ್ ಈಗ ಕೆಜಿಎಫ್-2 ಚಿತ್ರಕ್ಕೆ ಪ್ರೇರಣೆ ನೀಡಿದೆ. ಬಿಗ್ ಬಜೆಟ್ಟಿನಲ್ಲಿ ಇದೀಗ ಸಿನಿಮಾ ತಯಾರಾಗುತ್ತಿದೆ. ಭಾರತ ಚಿತ್ರರಂಗದ ಮಾಸ್ ತಾರೆಯರು ಯಶ್ ಜತೆ ಬಣ್ಣ ಹಚ್ಚಲಿದ್ದಾರೆ. ಈ ನಡುವೆ ಸದ್ಯ ಅಭಿಮಾನಿಗಳ ಬೇಡಿಕೆಯೊಂದು ಟ್ವಿಟ್ಟರ್‍ನಲ್ಲಿ ಭಾರೀ ಟ್ರೆಂಡ್ ಆಗಿದೆ.ಕೆಜಿಎಫ್-2 ಸಿನಿಮಾದ ಟೀಸರ್ ಬಿಡುಗಡೆ ಮಾಡುವಂತೆ ಟ್ವಿಟ್ಟರ್ ಮೂಲಕವಾಗಿ ಅಭಿಮಾನಿಗಳು ಸಿನಿಮಾ ತಂಡದ ಮುಂದೆ ಬೇಡಿಕೆ ಇಡುತ್ತಿದ್ದಾರೆ. ‘ವೀ ನೀಡ್ ಕೆಜಿಎಫ್2 ಟೀಸರ್’ ಹ್ಯಾಶ್ಟ್ಯಾಗ್ನೊಂದಿಗೆ ಟ್ವೀಟ್‍ಸುರಿಮಳೆ ಗೈದಿದ್ದಾರೆ. ಬೆಳಗ್ಗಿನಿಂದಲೇ ಈ ವಿಚಾರ ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿದೆ. ಚಾಪ್ಟರ್-2 ಅಕ್ಟೋಬರ್ 23ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಕೋವಿಡ್ 19 ಸಾಂಕ್ರಾಮಿಕ ರೋಗ ಇರುವುದರಿಂದ 2021ಕ್ಕೆ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಹೀಗಾಗಿ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ಕಾರ್ತಿಕ್ ಗೌಡ ಅವರಿಗೆ ಕೆಜಿಎಫ್-2 ಟೀಸರ್ ಕುರಿತು ಅಪ್ಡೇಟ್ಸ್ ನೀಡುವಂತೆ ಅಭಿಮಾನಿಗಳು ಕೇಳುತ್ತಿದ್ದಾರೆ. ಮತ್ತೆ ಕರೋನಾದಿಂದ ಕಂಗೆಟ್ಟಿರುವ…
ಜೇಮ್ಸ್ ಚಿತ್ರೀಕರಣದ ವೇಳೆ ಪುನೀತ್ ಕರೋನಾ ಜಾಗೃತಿನೆಚ್ಚಿನ ನಟನ ಕಂಡು ಖುಷಿಪಟ್ಟ ಕೊಪ್ಪಳ ಅಭಿಮಾನಿಗಳು… ಕೊಪ್ಪಳ: ಸ್ಯಾಂಡಲ್‍ವುಡ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಭಾರೀ ಭರವಸೆ ಮೂಡಿಸಿರುವ ಚಿತ್ರ ಇದೀಗ ಸದ್ದು ಮಾಡುತ್ತಿದೆ. ಈ ನಡುವೆ ಪುನೀತ್ ಕರೋನಾ ಜಾಗೃತಿಯನ್ನು ಸಹ ಮೂಡಿಸಿದ್ದಾರೆ.ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಬಳಿ ಬೃಹತ್ ಸೆಟ್ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಹೀಗಾಗಿ ಇನ್ನೂ ಕೆಲ ದಿನಗಳ ಕಾಲ ಚಿತ್ರ ತಂಡ ಗಂಗಾವತಿಯಲ್ಲಿಯೇ ಬೀಡು ಬಿಡಲಿದೆ.ಇದೇ ವೇಳೆ ಸದಾ ಸಾಮಾಜಿಕ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಪುನೀತ್ ಗಂಗಾವತಿ ಗ್ರಾಮೀಣ ಪೆÇಲೀಸ್ ಠಾಣೆಯಿಂದ ಆಯೋಜಿಸಿದ್ದ ಕರೋನಾ ಜಾಥಾದಲ್ಲಿ ಭಾಗವಹಿಸಿ ಜಾಗೃತಿ ಮೂಡಿಸಿದ್ದಾರೆ. ಈ ಮೂಲಕ ಎಲ್ಲಾ ತಾರೆಯರಿಗೆ ಮಾದರಿಯಾಗಿದ್ದಾರೆ.ಪುನೀತ್ ಅಭಿನಯದ ಜೇಮ್ಸ್ ಚಿತ್ರೀಕರಣ ನಡೆಯುತ್ತಿರುವುದನ್ನು ಅರಿತ ಪೆÇಲೀಸರು ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. “ಇದು ಕೂಡ ನನ್ನ ಕರ್ತವ್ಯ ಎಂದು ಓಕೆ ಎಂದ ಪುನೀತ್ ಕರೋನಾದಿಂದ ಸುರಕ್ಷಿತರಾಗಿರಿ, ಸ್ವಾಸ್ಥ್ಯ ಕಾಪಾಡಿಕೊಳ್ಳಿ, ಮಾಸ್ಕ್…
ಗಂಡು ಮಗುವಲ್ಲಿ ಚಿರು ನೋಡುತ್ತಿರುವ ಕುಟುಂಬಚಿರು ಅಭಿಮಾನಿಗಳು, ಸಿನಿಮಾ ರಂಗದ ಸಂತಸ ಬೆಂಗಳೂರು: ಕನ್ನಡ ಚಿತ್ರರಂಗದ ಯುವ ನಟ ಚಿರು ಸರ್ಜಾ ಅಕಾಲಿಕ ಮರಣದಿಂದ ನೊಂದಿದ್ದ ಕುಟುಂಬ ಮತ್ತು ಚಿತ್ರರಂಗ ಅವರ ಪತ್ನಿ, ನಟಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದರಿಂದ ಮಗುವಲ್ಲಿ ಚಿರು ನೋಡುತ್ತಿದೆ.ಮೇಘನಾ ಗುರುವಾರ ಬೆಳಗ್ಗೆ 11 ಗಂಟೆ 7 ನಿಮಿಷಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ನವರಾತ್ರಿ ಹಬ್ಬದ ದಿನ ನಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಮಗು ನೋಡಲು ಚಿರುವಿನಂತೆ ಇದೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಕುಟುಂಬ ಸಂತೋಷ ವ್ಯಕ್ತಪಡಿಸಿದೆ.”ನನಗೆ ನನ್ನ ಪತ್ನಿಗೆ ಅಜ್ಜಿ ತಾತನಾಗಿರುವ ಖುಷಿ ಒಂದೆಡೆಯಾದರೆ ಅರ್ಜುನ್ ಸರ್ಜಾ ಮತ್ತು ಅವರ ತಾಯಿಗೆ ಮರಿ ಮೊಮ್ಮಗನನ್ನು ನೋಡಿದ ಸಂತೋಷ. ಎರಡು ಕುಟುಂಬಕ್ಕೆ ಆಗಿರುವ ಖುಷಿಗಿಂತ ಮಿಗಿಲಾದದ್ದು ಕರ್ನಾಟಕ ಜನತೆ, ಪ್ರತಿಯೊಬ್ಬ ಹೆಣ್ಣು ಮಗಳು ಸಂಭ್ರಮಿಸುವ ದಿನವಾಗಿದೆ. ಎಲ್ಲಾ ತಂದೆ ತಾಯಿಯರ ಆಶಿರ್ವಾದ ನಮಗೆ ಬೇಕು ಎಂದು ಮೇಘನಾ ರಾಜ್…
ಜೈಲಿಗೆ ಯಾರೂ ಭೇಟಿ ನೀಡಿಲ್ಲ: ಅಧಿಕಾರಿಗಳ ಮಾಹಿತಿಕರೋನಾ ಭಯ, ಇನ್ನೊಂದ್ ಕಡೆ ಡ್ರಗ್ಸ್ ಲಿಂಕ್ ಭಯ! ಬೆಂಗಳೂರು: ರಾಜ್ಯದ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಂಜನಾ ಮತ್ತು ರಾಗಿಣಿ ಬಂಧನಕ್ಕೆ ಒಳಗಾಗಿದ್ದಾರೆ. ಈವರೆಗೆ ಅವರನ್ನು ಭೇಟಿಯಾಗಲು ಪರಪ್ಪನ ಅಗ್ರಹಾರಕ್ಕೆ ಯಾರೂ ಭೇಟಿ ನೀಡಿಲ್ಲ. ಮನೆಯವರನ್ನು ಬಿಟ್ಟು ಇತರರು ಭೇಟಿ ನೀಡಿಲ್ಲ ಎನ್ನಲಾಗಿದೆ. ಡ್ರಗ್ಸ್ ರಾಣಿಯರ ಭೇಟಿಗೆ ಯಾರಿಗೂ ಮನಸ್ಸಿಲ್ಲ..? ಎಂಬುದಕ್ಕಿಂತ ಮುಖ್ಯ ಇಲ್ಲಿಒಂದು ಕಡೆ ಕರೋನಾ ಭಯ, ಇನ್ನೊಂದ್ ಕಡೆ ಡ್ರಗ್ಸ್ ಲಿಂಕ್ ಭಯ!. ಈ ನಟಿಯರನ್ನು ಭೇಟಿ ಮಾಡಿದರೆ ಎಲ್ಲಿ ತಾವು ತಗಲಾಕಿಕೊಳ್ಳುತ್ತೇವೋ ಎಂಬ ಭಯ ಈಗ ಎಲ್ಲರನ್ನೂ ಕಾಡಿದೆ.ನಟಿಯರ ಭೇಟಿಗೆ ಯಾರೆಲ್ಲ ಭೇಟಿ ನೀಡಿದ್ದಾರೆ ಎಂಬ ಮಾಹಿತಿಯನ್ನು ಕೋರಿ ಟಿ.ನರಸಿಂಹಮೂರ್ತಿ ಎಂಬುವವರು ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಉತ್ತರ ನೀಡಿರುವ ಜೈಲು ಅಧಿಕಾರಿಗಳು, ಈವರೆಗೆ ರಾಗಿಣಿ ಮತ್ತು ಸಂಜನಾರನ್ನು ಯಾರೂ ಭೇಟಿ ಆಗಿಲ್ಲ ಎಂದು ತಿಳಿಸಿದ್ದಾರೆ. ಎಲ್ಲೆಡೆ ಕರೋನಾ ವೈರಸ್ ಹಾವಳಿ ಹೆಚ್ಚಾಗಿದೆ. ಜೈಲಿನಂತಹ ಜಾಗದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕಾಗಿರುವುದು ಅಗತ್ಯ.…
ಸಿನಿಮಾ ರಿಲೀಸ್ ಮಾಡಿದ್ರೆ ಹಣ ಯಾರ್ ಕೊಡ್ತಾರೆ..?ಧೂಳು ಹಿಡಿದ ಚಿತ್ರಮಂದಿರಗಳು!: ಸರ್ಕಾರದಿಂದಲೂ ಮೋಸ? ಬೆಂಗಳೂರು: ಕರೋನಾ ಮಹಾಮಾರಿ ಎಲ್ಲಾ ಕ್ಷೇತ್ರದ ಮೇಲೂ ಬಲವಾದ ಪೆಟ್ಟು ನೀಡಿದೆ. ಎಷ್ಟರ ಮಟ್ಟಿಗೆ ಎಂದರೆ ಈವರೆಗೆ ಜಗತ್ತು ನೋಡದಷ್ಟು.!. ಅದರಲ್ಲೂ ಮನೋರಂಜನ ಕ್ಷೇತ್ರವಂತೂ ಇನ್ನು ಏಳೋದು ದೊಡ್ಡ ಸಾಹಸವೇ. ಕಳೆದ ಏಳು ತಿಂಗಳ ಬಳಿಕ ಅ.15ರಂದು ಚಿತ್ರಮಂದಿರಗಳು ಓಪನ್ ಆಗಿವೆ. ಇದು ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಸಣ್ಣಪುಟ್ಟ ಸಿನಿಮಾಗಳು ತೆರೆಕಾಣುತ್ತಿವೆ. ಮಲ್ಟಿಪ್ಲೆಕ್ಸ್ಗಳು ಸೇರಿದಂತೆ ಒಂದಷ್ಟು ಸಿನಿಮಾ ಮಂದಿರಗಳು ಪ್ರದರ್ಶನವನ್ನು ಆರಂಭಿಸಿವೆಯಾದರೂ ಮಾಲೀಕರು ನಿರೀಕ್ಷೆ ಮಾಡಿದಷ್ಟು ಜನ ಚಿತ್ರಮಂದಿರದತ್ತ ಬಂದಿಲ್ಲ. ಎಲ್ಲಾ ಶೋಗಳಲ್ಲೂ ಕುರ್ಚಿ ಖಾಲಿ ಖಾಲಿಯಾಗಿವೆ. ಹಾಗಿದ್ದರೂ ಚಿತ್ರ ಪ್ರದರ್ಶಕರು ದೀಪಾವಳಿಯ ಹೊತ್ತಿಗೆ ಎಲ್ಲವೂ ಸರಿ ಹೋಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. ಜೊತೆಗೆ ಚಿತ್ರಮಂದಿರಗಳ ಮಾಲಿಕರು ಅದೇ ಭರವಸೆಯಲ್ಲಿದ್ದಾರೆ.ಕರ್ನಾಟಕದ 600 ಸಿಂಗಲ್ ಸ್ಕ್ರೀನ್ಗಳಿಗೆ ಸಿನಿಮಾಗಳ ಸಮಸ್ಯೆ ಎದುರಾಗಿದೆ. ಯಾವುದೇ ನಿರ್ಮಾಪಕರು ಹೊಸ ಸಿನಿಮಾ ರಿಲೀಸ್ ಮಾಡಲು ಮುಂದೆ ಬರುತ್ತಿಲ್ಲ. ಇದರಿಂದಾಗಿ ಸದ್ಯದ ಮಾಹಿತಿ ಪ್ರಕಾರ ಕರ್ನಾಟಕದಾದ್ಯಂತ…
ಪಿಕಾಬೂ ಆಪ್ ಕಂಡು ಹಿಡಿದ ದೆಹಲಿ ಬಾಲಕಿಶಿಕ್ಷಣದ ಜತೆಗೆ ಕೌಶಲ್ಯದಲ್ಲಿ ಹೊಸ ಸಾಧನೆ ನವ ದೆಹಲಿ: 8 ವರ್ಷದ ಬಾಲಕಿ ಈಗ ದೇಶದ ಸಾಧಕಿಪಟ್ಟ ಗಳಿಸಿದ್ದಾಳೆ. ಕರೋನಾ ಸಮಯದಲ್ಲಿ ಲಕ್ಷಾಂತರ ಮಕ್ಕಳು ಮೊಬೈಲ್ ಆಟಕ್ಕೆ ಸೀಮಿತವಾದರೆ, ಈಕೆ ಮಕ್ಕಳಿಗೆ ಬೇಕಾಗುವ ಪಿಕಾಬೂ ಆಪ್ ಕಂಡು ಹಿಡಿದು ಸೈ ಎನಿಸಿಕೊಂಡಿದ್ದಾಳೆ.ಹೊಸ ಆಟಿಕೆಗಳು, ಹೊಸ ಪದಗಳು, ಹೊಸ ಆಹಾರಗಳು , ಹೊಸ ಪ್ರಾಣಿಗಳನ್ನು ಗುರುತಿಸುವುಕೆಗೆ ಪೆÇ್ರೀತ್ಸಾಹಿಸುವ ಮೂಲಕ ಅಂಬೆಗಾಲಿಡುವ ಮಕ್ಕಳ ಮನಸ್ಸನ್ನು ಕದಿಯಬಹುದು. ಇಂತಹಾ ಒಂದು ಹಂತದಲ್ಲಿ ವಸ್ತು, ಪ್ರಾಣಿ, ಆಹಾರಗಳನ್ನು ಗುರುತಿಸಲು ಮಕ್ಕಳಿಗೆ ನೆರವಾಗಲು 8 ವರ್ಷದ ಮಾನ್ಯ ಸಿಂಘಾಲ್ ಎಂಬ ಬಾಲಕಿ ಮೊಬೈಲ್ ಅಪ್ಲಿಕೇಶನ್ ಒಂದನ್ನು ವಿನ್ಯಾಸಗೊಳಿಸಿದ್ದಾಳೆ. ಪಿಕಾಬೂ (Pickaboo) ಎಂಬ ಹೆಸರಿನ ಈ ಅಪ್ಲಿಕೇಷನ್ ಸುತ್ತ ಮುತ್ತಲ ವಸ್ತುಗಳ ಸ್ಕ್ಯಾನ್ ಮಾಡಿ ಅದರ ಹೆಸರನ್ನು ಹೇಳಲು ಮಕ್ಕಳಿಗೆ ನೆರವಾಗುತ್ತದೆ. ಇದೀಗ ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಲಭ್ಯವಿದೆ.ಏನಿದು ಸ್ಟೋರಿ?: ಗುರುಗ್ರಾಮದ ಸನ್ ಸಿಟಿ ಶಾಲೆಯಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಮಾನ್ಯ ತನ್ನ…
ಆದಾಯ ತೆರಿಗೆ ಪಾವತಿ ಏನು..? ಎತ್ತ..? ಆದಾಯ ತೆರಿಗೆ ಪಾವತಿ ಎನ್ನುವುದು ನಮ್ಮ ಪ್ರಮುಖ ಜವಾಬ್ದಾರಿಗಳಲ್ಲಿ ಒಂದು. ಪ್ರತಿ ಹಣಕಾಸು ವರ್ಷದಲ್ಲಿ ಈ ಬಗ್ಗೆ ಆದಾಯ ತೆರಿಗೆ ಮತ್ತು ಹಣಕಾಸು ಸಚಿವಾಲಯ ಸೂಚನೆ ನೀಡುತ್ತಲೇ ಇರುತ್ತದೆ. ಜತೆಗೆ ಆದಾಯ ತೆರಿಗೆ ಪಾವತಿ ದಿನಾಂಕ ವಿಸ್ತರಣೆ ಕುರಿತು ಕೂಡ ಮಾಹಿತಿ ನೀಡುತ್ತದೆ. ಅಲ್ಲದೆ, ಆದಾಯ ತೆರಿಗೆ ಮರುಪಾವತಿ ಮಾಡುವುದು ಹೇಗೆ? ಬೇಕಾದ ದಾಖಲೆಗಳು ಹಾಗೂ ಅಗತ್ಯ ವಿವರ ಕುರಿತು ಕೂಡ ವಿವಿಧ ಮಾಧ್ಯಮದ ಮೂಲಕ ತಿಳಿಸುತ್ತದೆ. ಈ ಬಾರಿ ಕೋವಿಡ್ 19 ಹಾವಳಿಯಿಂದಾಗಿ ಲಾಕ್ಡೌನ್ ಸಂಕಷ್ಟ ಮತ್ತಿತರ ಕಾರಣಗಳಿಂದಾಗಿ, 2019-20ನೇ ಸಾಲಿನ ಆದಾಯ ತೆರಿಗೆ ಮರುಪಾವತಿ ಕೊನೆಯ ದಿನಾಂಕವನ್ನು ನ.30ರವರೆಗೆ ಮುಂದೂಡಿದೆ. ಹೀಗಾಗಿ ನೀವು ಈವರೆಗೆ ಪ್ರಸಕ್ತ ಸಾಲಿನ ಆದಾಯ ತೆರಿಗೆ ಮರುಪಾವತಿ ಮಾಡಿಲ್ಲ ಎಂದಾದರೆ, ಇಲ್ಲಿ ಹೇಳಿರುವ ಸುಲಭ ಆನ್ಲೈನ್ ವಿಧಾನ ಬಳಸಿಕೊಂಡು ಮಾಡಬಹುದು. ಇನ್ಕಂ ಟ್ಯಾಕ್ಸ್ ರಿಟನ್ರ್ಸ್ ಆನ್ಲೈನ್ ಮೂಲಕ ಪಾವತಿ ಮಾಡಲು, https://incometaxindiaefiling.gov.in ವೆಬ್ಸೈಟ್ ಅನ್ನು ನಿಮ್ಮ ಕಂಪ್ಯೂಟರ್/ಲ್ಯಾಪ್ಟಾಪ್ನಲ್ಲಿ…