Author: Nammur Express Admin

ಭಾರತೀಯ ಮೂಲದ ಬಾಲಕಿಯಿಂದ ಸಾಧನೆಅಮೆರಿಕಾದಲ್ಲಿ 25,000 ಡಾಲರ್ ಬಹುಮಾನ ಪಡೆದ ಬಾಲಕಿ! ಹೌಸ್ಟನ್: ಮಹಾಮಾರಿ ಕರೋನಾ ಇಡೀ ವಿಶ್ವವನ್ನೇ ಕಂಗೆಡಿಸಿದೆ. ಔಷಧ ಕಂಡುಹಿಡಿಯಲು ತಾ ಮುಂದು ಎಂದು ಎಲ್ಲಾ ದೇಶಗಳು ರೇಸ್‍ಗೆ ಬಿದ್ದಿವೆ. ವೈರಸ್‍ಗೆ ಲಸಿಕೆ ಕಂಡು ಹಿಡಿಯಲು ಜಗತ್ತಿನಾದ್ಯಂತ ಹಲವು ವಿಜ್ಞಾನಿಗಳು ಶ್ರಮಿಸುತ್ತಿರುವಾಗ ಭಾರತೀಯ ಮೂಲದ 14 ವರ್ಷದ ಅಮೆರಿಕಾ ಸಂಜಾತ ಬಾಲಕಿಯೊಬ್ಬರು ಕರೋನಾಕ್ಕೆ ಸಂಭಾವ್ಯ ಚಿಕಿತ್ಸೆ ಕಂಡುಹಿಡಿಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ. ಅಮೆರಿಕದ ಟೆಕ್ಸಾಸ್‍ನ ಫ್ರಿಸ್ಕೋನಲ್ಲಿ ನೆಲೆಸಿರುವ ಭಾರತೀಯ ಮೂಲದ ಬಾಲಕಿ ಅನಿಕಾ ಚೆಬ್ರೊಲು ಅವರು ಕೋವಿಡ್-19 ಸಂಭಾವ್ಯ ಚಿಕಿತ್ಸೆ ಒದಗಿಸುವ ಸಂಶೋಧನೆಗಾಗಿ 25,000 ಡಾಲರ್ ಬಹುಮಾನ ಹಾಗೂ 3 ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್ ಗೆದ್ದಿದ್ದಾರೆ. 3 ಎಂ ಚಾಲೆಂಜ್ ವೆಬ್‍ಸೈಟ್‍ನ ಪ್ರಕಾರ, ಕರೋನಾ ವೈರಸ್ ಸಾಂಕ್ರಾಮಿಕಕ್ಕೆ ಚಿಕಿತ್ಸೆ ಕಂಡುಹಿಡಿಯುವ ಪ್ರಯತ್ನದ ಭಾಗವಾಗಿ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಅನಿಕಾ ಸಂಶೋಧನೆ ಹೊಸ ಭರವಸೆ ಮೂಡಿಸಿದೆ.

Read More

ಕೈ ತೊಳೆಯುವುದು, ಸ್ಯಾನಿಟೈಸರ್ ಬಳಕೆಯಿಂದ ವೈರಸ್ ನಾಶನವ ದೆಹಲಿ: ಕರೋನಾ ವೈರಸ್ ನಮ್ಮ ಚರ್ಮಕ್ಕೆ ಅಂಟಿಕೊಂಡರೆ ಅನೇಕ ಗಂಟೆಗಳ ಕಾಲ ಬದುಕಿ ಇರಬಲ್ಲದು ಎಂದು ಸಂಶೋಧನೆ ಹೇಳಿದೆ. ಕೋವಿಡ್-19ಗೆ ಕಾರಣವಾಗುವ ವೈರಸ್, ಮನುಷ್ಯನ ಚರ್ಮದ ಮೇಲೆ 9 ಗಂಟೆಗಳ ಕಾಲ ಇರಬಲ್ಲದು, Flow ವೈರಸ್‍ಗಳಿಗಿಂತ ಅಧಿಕ ಗಂಟೆಗಳವರೆಗೂ ಇರಬಲ್ಲದು ಎಂದು ಅಧ್ಯಯನ ತಿಳಿಸಿದೆ. ಹೀಗಾಗಿಯೇ ಮನೆಯಿಂದ ಹೊರಗೆ ಹೋದರೆ, ಮನೆಯಲ್ಲಿ ಪದೇ ಪದೇ ಬಿಸಿ ನೀರಿನಿಂದ ಕೈಕಾಲು ಮುಖ ತೊಳೆಯಬೇಕು!.ಸಾಂಕ್ರಾಮಿಕ ರೋಗಗಳ ಕ್ಲಿನಿಕಲ್ ಜರ್ನಲ್ ನಲ್ಲಿ ಅಧ್ಯಯನ ಪ್ರಕಟಗೊಂಡಿದ್ದು, ಕೈಗಳನ್ನು ಸ್ವಚ್ಚಗೊಳಿಸುವ ಮೂಲಕ ವೈರಸ್ ವೇಗವಾಗಿ ನಿಷ್ಕ್ರೀಯಗೊಳಿಸಬಹುದು.ಕೋವಿಡ್-19 ಹರಡುವುದನ್ನು ತಡೆಗಟ್ಟಲು ಕೈ ತೊಳೆಯುವ ಅಥವಾ ಸ್ಯಾನಿಟೈಸರ್ ಬಳಸುವ ಮಹತ್ವವನ್ನು ಈ ಸಂಶೋಧನೆಯು ಒತ್ತಿಹೇಳುತ್ತದೆ.ಸ್ಟೇನ್‍ಲೆಸ್ ಸ್ಟೀಲ್, ಗಾಜುಗಳು ಮತ್ತು ಪ್ಲಾಸ್ಟಿಕ್‍ನಂತಹ ಇತರ ವಸ್ತುಗಳ ಮೇಲ್ಮೈಗಳಿಗಿಂತ ಚರ್ಮದ ಮೇಲ್ಮೈಗಳಲ್ಲಿ ಸಾರ್ಸ್- ಕೋವ್-2 ಮತ್ತು ಐಎವಿ ವೈರಸ್‍ನ್ನು ಹೆಚ್ಚು ವೇಗವಾಗಿ ನಿಷ್ಕ್ರಿಯಗೊಳಿಸಬಹುದು ಎಂಬುದನ್ನು ಅಧ್ಯಯನ ಕಂಡುಹಿಡಿದಿದೆ.

Read More

ಗುಣಮುಖರಾದವರ ಸಂಖ್ಯೆ 10 ಪಟ್ಟು ಹೆಚ್ಚಳನವದೆಹಲಿ: ದೇಶದ ಕರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡು ತಿಂಗಳ ನಂತರ ಇದೇ ಮೊದಲ ಬಾರಿಗೆ 7 ಲಕ್ಷಕ್ಕಿಂತಲೂ ಕಡಿಮೆಯಾಗಿದೆ. ಈ ಮಧ್ಯೆ ಒಟ್ಟಾರೇ ಚೇತರಿಕೆ ಸಂಖ್ಯೆ 69 ಲಕ್ಷ ದಾಟಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಗಿಂತಲೂ ಗುಣಮುಖರಾಗುವವರ ಪ್ರಮಾಣ ಸುಮಾರು 10 ಪಟ್ಟು ಹೆಚ್ಚಾಗಿದೆ. 63 ದಿನಗಳ ನಂತರ ಇದೇ ಮೊದಲ ಬಾರಿಗೆ ಇಂತಹ ಗಮನಾರ್ಹ ಬೆಳವಣಿಗೆಯಾಗಿರುವುದಾಗಿ ಸಚಿವಾಲಯ ಹೇಳಿದೆ. ಆಗಸ್ಟ್ 22ರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7 ಲಕ್ಷಕ್ಕಿಂತ ಕಡಿಮೆಯಿತ್ತು. ದಿನದಿಂದ ದಿನಕ್ಕೆ ಕೋವಿಡ್-19 ರೋಗಿಗಳ ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿರುವಂತೆಯೇ ಮರಣ ಪ್ರಮಾಣ ಕಡಿಮೆಯಾಗುತ್ತಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ ಮುಂದುವರೆದಿದೆ ಎಂದು ತಿಳಿಸಿದೆ. ಗುಣಮುಖರಾದವರ ಸಂಖ್ಯೆ 69, 48,497 ದಾಟಿದ್ದು, ಸಕ್ರಿಯ ಪ್ರಕರಣಗಳು ಸಂಖ್ಯೆ 62, 52, 988 ಆಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 73,979 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 54,…

Read More

ರೋಗ ನಿರೋಧಕ ಶಕ್ತಿ ಕಡಿಮೆ ಇರೋದ್ರಿಂದ ರೋಗ ಸಾಧ್ಯತೆಬೆಂಗಳೂರು: ಧೂಮಪಾನ ಮಾಡುವವರು ಕರೋನಾ ಸೋಂಕಿಗೆ ತುತ್ತಾಗಬಹುದಾದ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಇದು ಚಟ ತ್ಯಜಿಸಲು ಸೂಕ್ತ ಸಮಯ ಎಂದು ವರದಿ ಹೇಳಿದೆ. ಧೂಮಪಾನ ಮುಕ್ತ ನಗರ ಬೆಂಗಳೂರು ಅಭಿಯಾನದ ಯೋಜನೆಯ ಮುಖ್ಯಸ್ಥರು ಹಾಗು ರಾಜ್ಯ ಎನ್.ಸಿ.ಡಿ. ಪ್ರ್ರಿವೆನ್ಷನ್ ಟಾಸ್ಕ್ ಪೆÇೀರ್ಸ್‍ನ ಸದಸ್ಯರೂ ಆಗಿರುವ ಡಾ.ತ್ರಿವೇಣಿ ಅವರು ತಂಬಾಕು ಬಳಕೆಯು ಮಾನವನ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ ಹಾಗೂ ಕೊರೋನಾ ಸೋಂಕಿನ ಭೀತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಧೂಮಪಾನ ಮಾಡುವವರು ಕರೋನಾಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಧೂಮಪಾನವನ್ನು ತ್ಯಜಿಸಲು ಹಾಗೂ ಕೋವಿಡ್ ಸೋಂಕಿನಿಂದ ಸುರಕ್ಷಿತವಾಗಿರಲು ಇದು ಉತ್ತಮ ಸಮಯ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಪ್ರತಿ ವರ್ಷ 80 ಲಕ್ಷ ಜನರು ತಂಬಾಕಿನಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ ಇವರಲ್ಲಿ 7 ಲಕ್ಷ ಜನರು ಪ್ರತ್ಯಕ್ಷ ತಂಬಾಕು ಬಳಕೆಯಿಂದ ಹಾಗೂ 1 ಲಕ್ಷ ಜನರು ಪರೋಕ್ಷ ಧೂಮಪಾನದಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಈಗಂತೂ ಧೂಮಪಾನ…

Read More

ಆರ್ಥಿಕ ಹಿಂಜರಿತ, ಸಂತಾನೋತ್ಪತ್ತಿ ಸಾಮಥ್ರ್ಯ ಕುಸಿತ ಕಾರಣ ಲಂಡನ್: ಕರೋನಾ ಲಾಕ್ ಡೌನ್ ಪರಿಣಾಮದಿಂದಾಗಿ ಎಲ್ಲರೂ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದರಿಂದ ಮಕ್ಕಳ ಜನನ ಹೆಚ್ಚಾಗಲಿದೆ ಎಂದು ಈ ಹಿಂದೆ ಹಲವು ಅಧ್ಯಯನ ವರದಿ ಬಂದಿತ್ತು. ಆದರೆ ಈಗ ಜರ್ನಲ್ ಸೈನ್ಸ್‍ನಲ್ಲಿ ಪ್ರಕಟಗೊಂಡಿರುವ ವರದಿ ಅಚ್ಚರಿ ಮೂಡಿಸಿದೆ. ಕೋವಿಡ್-19ನಿಂದಾಗಿ ಜಾಗತಿಕವಾಗಿ ಹೆಚ್ಚು ಆದಾಯ ಹೊಂದಿರುವ ರಾಷ್ಟ್ರಗಳಲ್ಲಿ ಮಕ್ಕಳ ಜನನ ಪ್ರಮಾಣ ಅಥವಾ ಸಂತಾನೋತ್ಪತ್ತಿ ಸಾಮಥ್ರ್ಯ ಕುಸಿತ ಕಾಣಲಿದೆ ಎಂದು ಜರ್ನಲ್ ಸೈನ್ಸ್‍ನಲ್ಲಿ ಪ್ರಕಟಗೊಂಡ ವರದಿ ಹೇಳುತ್ತಿದೆ. ಈ ಹಿಂದೆ ಎದುರಾಗಿದ್ದ ಇದೇ ಮಾದರಿಯ ಸನ್ನಿವೇಶಗಳಿಗೆ ಇಂದಿನ ಸಾಮಾಜಿಕ, ಆರ್ಥಿಕ ಹಾಗೂ ಜನಸಂಖ್ಯೆಯ ಪರಿಸ್ಥಿತಿಗಳನ್ನು ಹೋಲಿಕೆ ಮಾಡಿ ಈ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ. ಕ್ಷಾಮ ಹಾಗು ಯುದ್ಧದ ಸನ್ನಿವೇಶಗಳಲ್ಲಿ ಮರಣ ಪ್ರಮಾಣ ಹೆಚ್ಚಾಗಿದ್ದಾಗ ಅದರ ನಂತರದಲ್ಲಿ ಜನನ ಪ್ರಮಾಣಗಳು ಏರಿಕೆ ಕಂಡ ನಿದರ್ಶನಗಳಿವೆ. ಸ್ಪ್ಯಾನಿμï ಫ್ಲೂ ಸಂದರ್ಭದಲ್ಲಿ ಜನನದ ಏರಿಕೆ ಕಾಣುವುದಕ್ಕೂ ಮುನ್ನ ತಾತ್ಕಾಲಿಕವಾಗಿ ಸಂತಾನೋತ್ಪತ್ತಿ ಪ್ರಮಾಣ ಕುಸಿದಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ಕೋವಿಡ್-19…

Read More

ನವ ದೆಹಲಿಯ ಆಸ್ಪತ್ರೆಯಲ್ಲಿ ದಾಖಲು: ಚಿಕಿತ್ಸೆಭಾರತಕ್ಕೆ ಮೊದಲ ವಿಶ್ವಕಪ್ ತಂದುಕೊಟ್ಟ ಸರದಾರ! ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್‍ಗೆ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. 1983ರಲ್ಲಿ ಭಾರತಕ್ಕೆ ಮೊಟ್ಟ ಮೊದಲ ಕ್ರಿಕೆಟ್ ವಿಶ್ವಕಪ್ ಗೆದ್ದು ಕೊಟ್ಟ ಕಪಿಲ್ ದೇವ್ ನವ ದೆಹಲಿಯ ಆಸ್ಪತ್ರೆಯಲ್ಲಿ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಘಟನೆ ಬಳಿಕ ಲಕ್ಷಾಂತರ ಅಭಿಮಾನಿಗಳು ಕಪಿಲ್ ದೇವ್ ಅವರ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥಿಸಿದ್ದಾರೆ.ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರಲ್ಲಿ ಕಪಿಲ್ ದೇವ್ ಕ್ರಿಕೆಟ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ಸಾಕಷ್ಟು ಸಕ್ರಿಯರಾಗಿದ್ದರು. ಭಾರತದ ಮಾಜಿ ನಾಯಕ ಮಧುಮೇಹ ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನೂ ಹೊಂದಿದ್ದು ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.ಭಾರತದ ಕ್ರಿಕೆಟ್ ದೇವರು!: ಲಾಡ್ರ್ಸ್‍ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಶ್ರೇಷ್ಠ ಆಲ್‍ರೌಂಡರ್‍ಗಳಲ್ಲಿ ಒಬ್ಬರಾದ ಕಪಿಲ್ ದೇವ್ 1983ರಲ್ಲಿ ಭಾರತ ವಿಶ್ವಕಪ್ ಗೆಲ್ಲುವುದಕ್ಕೆ ಕಾರಣವಾಗಿದ್ದರು. ಕಪಿಲ್ ದೇವ್ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ಬರಬೇಕಿದ್ದು,…

Read More

ಪಂದ್ಯವೊಂದರಲ್ಲಿ ಎರಡು ಮೇಡಿನ್ ಓವರ್ಆರ್‍ಸಿಬಿಯ ಮೊಹಮ್ಮದ್ ಸಿರಾಜ್ ದಾಖಲೆ ದುಬೈ: ಐಪಿಎಲ್ ಪಂದ್ಯವೊಂದರಲ್ಲಿ ಎರಡು ಮೇಡಿನ್ ಓವರ್ ಮಾಡಿದ ಹೊಸ ದಾಖಲೆಯನ್ನು ಆರ್ ಸಿಬಿಯ ಮೊಹಮ್ಮದ್ ಸಿರಾಜ್ ಬರೆದಿದ್ದಾರೆ. ಐಪಿಎಲ್ ಪಂದ್ಯದಲ್ಲಿ ಇದೇ ಮೊದಲ ದಾಖಲೆ ಇದಾಗಿದೆ.ಅಷ್ಟಕ್ಕೂ ಹೈದರಾಬಾದ್‍ನ ಬಡ ಆಟೋ ಚಾಲಕನ ಪುತ್ರ ಇದೀಗ ಹೊಸ ಭರವಸೆ ಮೂಡಿಸಿದ್ದಾರೆ. ಐಪಿಎಲ್-2020ಯ 39ನೇ ಪಂದ್ಯದಲ್ಲಿ ಕೆಕೆಆರ್-ಆರ್‍ಸಿಬಿ ನಡುವಿನ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಈ ಸಾಧನೆ ಮಾಡಿದ್ದು, ಮೊದಲ ಎರಡು ಓವರ್‍ಗಳಲ್ಲಿ ಯಾವುದೇ ರನ್ ನೀಡದೇ ಮೂರು ವಿಕೆಟ್ ಪಡೆದಿದ್ದಾರೆ. ತಮ್ಮ ಮೊದಲ ನಾಲ್ಕು ಓವರ್‍ಗಳಲ್ಲಿ ಕೆಕೆಆರ್ ತಂಡವನ್ನು ಬಿಡದೇ ಕಾಡಿದ ಸಿರಾಜ್ 30 ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದಾರೆ.

Read More

ಬಿಜೆಪಿ ಹಿರಿಯ ನಾಯಕನ ಮಗನಿಗೆ ಒಲಿದ ಕುರ್ಚಿ ನವ ದೆಹಲಿ: ಮಾಜಿ ಕೇಂದ್ರ ಸಚಿವ ದಿವಂಗತ ಅರುಣ್ ಜೇಟ್ಲಿಯವರ ಪುತ್ರ ರೋಹನ್ ಜೇಟ್ಲಿ ಅವರು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ದೆಹಲಿ ರಾಜಕೀಯಕ್ಕೆ ಜೇಟ್ಲಿ ಮಗ ರೋಹನ್ ಎಂಟ್ರಿಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ರೋಹನ್ ಜೇಟ್ಲಿ ವಿರುದ್ಧ ನಾಮಪತ್ರ ಸಲ್ಲಿಸಿದ್ದ ವಕೀಲ ಸುನಿಲ್ ಕುಮಾರ್ ಗೋಯೆಲ್ ಅವರು ನಿರೀಕ್ಷೆಯಂತೆ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡರು.ನಂತರ ಅಧ್ಯಕ್ಷ ಹುದ್ದೆಗೆ ಒಬ್ಬ ಅಭ್ಯರ್ಥಿ ಮಾತ್ರ ಇರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಚುನಾವಣೆ ಇರುವುದಿಲ್ಲ ಎಂದು ರಿಟನಿರ್ಂಗ್ ಅಧಿಕಾರಿ ತಿಳಿಸಿದ್ದಾರೆ. ಖಜಾಂಚಿ ಮತ್ತು ನಾಲ್ಕು ನಿರ್ದೇಶಕರ ಹುದ್ದೆಗಳಿಗೆ ನವೆಂಬರ್ 5ರಿಂದ 8ರವರೆಗೆ ಚುನಾವಣೆ ನಡೆಯಲಿದೆ. ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ನಿಧನದ ಬಳಿಕ ಅವರ ಪುತ್ರರ ಎಂಟ್ರಿ ರಾಜಕೀಯದಲ್ಲೂ ಕುತೂಹಲ ಮೂಡಿದೆ.

Read More

ತಿಂಗಳಾಂತ್ಯದವರೆಗೆ ಸರಣಿ ರಜೆ ಬೆಂಗಳೂರು: ನವರಾತ್ರಿ ಈ ಸಲ ಕರೋನಾ ಕಾರಣದಿಂದ ಕಳೆಗುಂದಿದೆ. ಈ ನಡುವೆ ಅಕ್ಟೋಬರ್ 24ರಿಂದ ಸಾಲು ಸಾಲು ಸರ್ಕಾರ ರಜೆ ಇರುವ ಹಿನ್ನಲೆಯಲ್ಲಿ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಹಬ್ಬದ ಪ್ರಯುಕ್ತ ಬ್ಯಾಂಕ್‍ಗಳಿಗೆ ಸಾಲು ಸಾಲು ರಜೆ ಇದ್ದು ಬ್ಯಾಂಕ್ ವ್ಯವಹಾರಗಳಿದ್ದರೆ ಇನ್ನೆರಡು ದಿನದಲ್ಲಿ ಮುಗಿಸಿಕೊಳ್ಳುವುದು ಉತ್ತಮ.ಶನಿವಾರದಿಂದ ಬ್ಯಾಂಕ್‍ಗಳಿಗೆ ನಿರಂತರ ರಜೆ ಇರಲಿದ್ದು, ಸಾಲು ಸಾಲು ರಜೆ ಹಿನ್ನೆಲೆ ಬ್ಯಾಂಕ್ ವ್ಯವಹಾರಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಹಬ್ಬ ವಾರಾಂತ್ಯ ರಜೆಗಳ ಕಾರಣ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದ್ದು, ಕ್ಯಾಶ್ ವಿತ್ ಡ್ರಾ, ಠೇವಣಿ, ಚೆಕ್ ಮೊದಲಾದ ವ್ಯವಹಾರಗಳನ್ನು ಇನ್ನೆರಡು ದಿನಗಳಲ್ಲಿ ನಿಮ್ಮ ಬ್ಯಾಂಕಿಂಗ್ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಿ.ರಜೆ ಏನು?: ಅಕ್ಟೋಬರ್ 24ರಂದು 4ನೇ ಶನಿವಾರದ ರಜೆಯಾಗಿದ್ದು, ಅಕ್ಟೋಬರ್ 25 ಭಾನುವಾರ ಮತ್ತು ಆಯುಧ ಪೂಜೆ ರಜೆ ಇರಲಿದೆ. ಅಕ್ಟೋಬರ್ 26 ಸೋಮವಾರ ವಿಜಯದಶಮಿ ಹಬ್ಬದ ನಿಮಿತ್ತ ರಜೆ ಇರಲಿದೆ. ಅಂತೆಯೇ ಅಕ್ಟೋಬರ್ 30 ಶುಕ್ರವಾರದಂದು ಈದ್ ಮಿಲಾದ್ ಇದ್ದು, ಅಕ್ಟೋಬರ್…

Read More

ಅಕ್ಟೋಬರ್ 25ರಿಂದ ಸೇವೆ ಪ್ರಾರಂಭಕ್ಕೆ ಸಿದ್ಧತೆ ಮೈಸೂರು: ಮಂಗಳೂರಿನಿಂದ ಮೈಸೂರಿಗೆ ವಿಮಾನ ಸೇವೆ ಪ್ರಾರಂಭಿಸಲು ಏರ್ ಇಂಡಿಯಾ ನಿರ್ಧರಿಸಿದೆ.ಟ್ರಯಲ್ ರನ್ ನಂತರ ಕಾರ್ಯಸಾಧ್ಯತಾ ವರದಿಯನ್ನು ಆಧರಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಅಕ್ಟೋಬರ್ 25ರಿಂದ ಸೇವೆ ಪ್ರಾರಂಭವಾಗುವ ಸಾಧ್ಯತೆ ಇದೆ.ಈಗ ರಸ್ತೆ ಮತ್ತು ರೈಲು ಮೂಲಕ ಸಂಪರ್ಕ ಹೊಂದಿರುವ ಈ ಎರಡು ನಗರಗಳ ನಡುವೆ ವಿಮಾನ ಸೇವೆ ಪ್ರಾರಂಭಿಸುವಂತೆ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಮತ್ತುಕೆಲವು ಕೈಗಾರಿಕೋದ್ಯಮಿಗಳು ವೈಮಾನಿಕ ಸಂಸ್ಥೆಗೆ ಮನವಿ ಮಾಡಿದ್ದರು. ಏರ್ ಇಂಡಿಯಾ ಬೆಂಗಳೂರಿನಿಂದ ಮಂಗಳುರಿಗೆ ಬೆಳಿಗ್ಗೆ 6.50ಕ್ಕೆ ಬರುವ ವಿಮಾನವನ್ನೇ ಮೈಸೂರಿನ ಕಡೆ ತಿರುಗಿಸುವ ಸೂಚನೆ ಇದೆ. ಈ ವಿಮಾನ ಬೆಳಿಗ್ಗೆ 7.55ಕ್ಕೆ ಮೈಸೂರಿನಿಂದ ಹೊರಟು ಬೆಳಿಗ್ಗೆ 8.50ಕ್ಕೆ ಮಂಗಳೂರು ತಲುಪಲಿದೆ ಎಂದು ಹೇಳಲಾಗಿದೆ.

Read More