ತಮಿಳುನಾಡಲ್ಲೊಂದು ಹಾಲಿವುಡ್ ಸಿನಿಮಾ ಮಾದರಿ ಕೇಸ್15 ಕೋಟಿ ಮೌಲ್ಯದ ರೆಡ್ ಮಿ ಮೊಬೈಲ್ ದರೋಡೆ ಕೃಷ್ಣಗಿರಿ: ಸಿನಿಮಾ ಮಾದರಿಯ ದರೋಡೆ ಘಟನೆಯೊಂದು ತಮಿಳುನಾಡು ಕೃಷ್ಣಗಿರಿ ಹೈವೇಯಲ್ಲಿ ನಡೆದಿದೆ. ಹೈವೇಯಲ್ಲಿ ಸಾಗುತ್ತಿದ್ದ ಟ್ರಕ್ ಒಂದನ್ನು ಹೈಜಾಕ್ ಮಾಡಿ 15 ಕೋಟಿ ರೂಪಾಯಿ ಮೌಲ್ಯದ 14,500 ಮೊಬೈಲ್ ಫೆÇೀನ್‍ಗಳನ್ನ ಲೂಟಿ ಮಾಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಹಾಲಿವುಡ್, ಬಾಲಿವುಡ್ ಸಿನಿಮಾ ಮೀರಿಸುವಂತಿದೆ.ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಚೆನ್ನೈನಿಂದ ಮುಂಬೈಗೆ ಟ್ರಕ್‍ವೊಂದು ಬುಧವಾರ ರಾತ್ರಿ ಮೊಬೈಲ್ ಫೆÇೀನ್‍ಗಳನ್ನು ಹೊತ್ತು ಸಾಗುತ್ತಿತ್ತು. ಸೂಲಗಿರಿ ಮತ್ತು ಕೃಷ್ಣಗಿರಿ ನಡುವೆ ಮೇಲುಮಲೈ ಎಂಬಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅಪರಿಚಿತ ಕಾರ್ ಒಂದು ಲಾರಿಯನ್ನು ಓವರ್ ಟೇಕ್ ಮಾಡಿದೆ. ನಂತರ ಟ್ರಕ್ ಅಡ್ಡಗಟ್ಟಿದ ಗ್ಯಾಂಗ್ ಟ್ರಕ್ ಡ್ರೈವರ್ ಮತ್ತು ಕ್ಲೀನರ್ ಇಬ್ಬರನ್ನೂ ಹಗ್ಗದಿಂದ ಕಟ್ಟಿ ಹಾಕಿದ್ದಲ್ಲದೇ ಅವರನ್ನು ಸ್ವಲ್ಪ ದೂರ ಕಾರಿನಲ್ಲಿ ಕರೆದೊಯ್ದು ರಸ್ತೆ ಬದಿಯಲ್ಲಿ ಬಿಟ್ಟಿದ್ದಾರೆ. ಇನ್ನು ಮೊಬೈಲ್ ಫೆÇೀನ್‍ಗಳು ತುಂಬಿದ್ದ ಲಾರಿಯನ್ನು 15…
Author: Nammur Express Admin
ಭಾರತಕ್ಕೆ ಭೇಟಿ ನೀಡಲು ಅವಕಾಶಕರೋನಾ ನಿಯಮ ಪಾಲನೆ ಮಾತ್ರ ಕಡ್ಡಾಯ ನವದೆಹಲಿ: ವೀಸಾ ಹಾಗೂ ಪ್ರಯಾಣದ ಮೇಲೆ ಹೇರಲಾಗಿದ್ದ ನಿಬರ್ಂಧವನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಕರೋನಾ ಹಿನ್ನೆಲೆ ಕಳೆದ ಮಾರ್ಚ್‍ನಿಂದ ಭಾರತದ ಸಾಗರೋತ್ತರ ನಾಗರಿಕರು, ಭಾರತ ಮೂಲದ ವ್ಯಕ್ತಿಗಳು ಹಾಗೂ ವಿದೇಶಿ ಪ್ರಜೆಗಳು ಪ್ರವಾಸಿ ವೀಸಾ ಹೊರತಾಗಿ ಬೇರೆ ಉದ್ದೇಶಗಳಿಗೆ ಭಾರತಕ್ಕೆ ಭೇಟಿ ನೀಡಲು ಅವಕಾಶ ನೀಡಿದೆ. ಈ ಮೂಲಕ ವಿದೇಶಯಾನ ಇನ್ಮುಂದೆ ಸುಲಭವಾಗಲಿದೆ.ವಿಮಾನಯಾನವನ್ನ ಯಥಾಸ್ಥಿತಿಗೆ ಮರಳಿಸುವ ಉದ್ದೇಶದಿಂದ ಸರ್ಕಾರ ಈ ಪ್ರಮುಖ ನಿರ್ಣಯವನ್ನ ಕೈಗೊಂಡಿದ್ದು, ಅಸ್ತಿತ್ವದಲ್ಲಿರುವ ಎಲ್ಲಾ ವೀಸಾಗಳ ವ್ಯಾಲಿಡಿಟಿಯನ್ನ ಮರುಸ್ಥಾಪಿಸಿದೆ. ಭಾರತಕ್ಕೆ ಬರಲು ಅಥವಾ ಇಲ್ಲಿಂದ ಹೊರಹೋಗಲು ಬಯಸುವ ವಿದೇಶಿ ಪ್ರಜೆಗಳು ಮತ್ತು ಭಾರತೀಯ ಪ್ರಜೆಗಳಿಗೆ ವೀಸಾ ಮತ್ತು ಪ್ರಯಾಣ ನಿಬರ್ಂಧಗಳಲ್ಲಿ ಹಂತಹಂತವಾಗಿ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.ಪ್ರವಾಸಿ ವೀಸಾ ಹೊರತುಪಡಿಸಿ ಯಾವುದೇ ಉದ್ದೇಶಕ್ಕಾಗಿ ಭಾರತಕ್ಕೆ ಭೇಟಿ ನೀಡಲು ಬಯಸುವವರು ಅಧಿಕೃತ ವಿಮಾನ ನಿಲ್ದಾಣಗಳ ಮೂಲಕ ಅಥವಾ ಬಂದರು ಚೆಕ್…
ನವರಾತ್ರಿ ಹಬ್ಬವೂ ಉದ್ಯಮ ಕೊಡಲಿಲ್ಲದೇಶೀಯ ಉತ್ಪನ್ನ ತಯಾರಿಕೆಗೆ ಸಕಾಲ ದೆಹಲಿ: ಗಡಿಯಲ್ಲಿ ಚೀನಾ ಕಿರಿಕಿರಿ, ಕರೋನಾ ಚೂ ಬಿಟ್ಟ ಕಳಂಕದ ಪರಿಣಾಮ ಚೀನಾದಿಂದ ಆಮದಾಗುವ ಉತ್ಪನ್ನಗಳ ಮೇಲೆ ಭಾರಿ ಪ್ರಮಾಣದ ಅಬಕಾರಿ ಸುಂಕ ವಿಧಿಸಲಾಯಿತು. ಅನೇಕ ಸ್ಥಳೀಯ ಉದ್ಯಮಿಗಳು ಚೀನಿ ವಸ್ತು ಆಮದು ನಿರಾಕರಿಸಲು ಆರಂಭಿಸಿದ ಬೆನ್ನಲ್ಲೇ ಚೀನಾದ ಬಹು ದೊಡ್ಡ ಮಾರುಕಟ್ಟೆ ಇದೀಗ ತಣ್ಣಗಾಗಿದೆ.1 ರೂ,ವಸ್ತುವಿನಿಂದ ಹಿಡಿದು ಲಕ್ಷ ಮೌಲ್ಯದ ವಸ್ತುವೂ ಚೀನಾದ್ದೇ ಆಗಬೇಕಿತ್ತು. ಆದರೆ ಇದೀಗ ಚೀನಾ ವಸ್ತು ಕಡಿಮೆ ಆಗಿದೆ. ಅದರಲ್ಲೂ ಭಾರತದ ಹಬ್ಬಗಳ ಮೇಲೆ ಚೀನಾದ ಅನೇಕ ಉತ್ಪದನಾ ಸಂಸ್ಥೆಗಳು ಅವಲಂಬಿತವಾಗಿದ್ದವು. ಈಗ ಚೀನಿ ವಸ್ತುಗಳ ಮೇಲಿನ ನಿಬರ್ಂಧ, ನಿಷೇಧಕ್ಕೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಮುಂದಾಗಿದ್ದು, ಇದರಿಂದ ಚೀನಾ ಭಾರಿ ನಷ್ಟ ಅನುಭವಿಸಲಿದೆ.ಭಾರತದ ಒಟ್ಟು ಆಮದು ಪ್ರಮಾಣದಲ್ಲಿ ಚೀನಾ ಶೇ 14ರಷ್ಟು ಪಾಲು ಹೊಂದಿದೆ. ಏಪ್ರಿಲ್ 2019ರಿಂದ ಫೆಬ್ರವರಿ 2020ರ ಅವಧಿಯಲ್ಲಿ ಭಾರತವು ಸುಮಾರು 62.4 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು…
ಗ್ರಾಹಕರ ಖಾತೆ ಮರು ಸೇರ್ಪಡೆ ಪ್ರಕ್ರಿಯೆ ಪೂರ್ಣತಂತ್ರಜ್ಞಾನ ಸಹಕಾರ ನೀಡಿದ ಆಕ್ಸೆಂಚರ್! ಬೆಂಗಳೂರು: ಆಕ್ಸೆಂಚರ್ ಮತ್ತು ಬ್ಯಾಂಕ್ ಆಫ್ ಬರೋಡಾ ಯಶಸ್ವಿಯಾಗಿ ಹಿಂದಿನ ವಿಜಯ ಬ್ಯಾಂಕ್ ಶಾಖೆಗಳು ಮತ್ತು ಬ್ಯಾಂಕ್ ಆಫ್ ಬರೋಡಾ ಶಾಖೆಗಳ ತಂತ್ರಜ್ಞಾನ ಸಮನ್ವಯನ್ನು ಪೂರ್ಣಗೊಳಿಸಿವೆ. ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ತ್ರಿಮುಖ ವಿಲೀನ ಪ್ರಕ್ರಿಯೆಯ ನಂತರದ ಭಾಗವಾಗಿ ಈ ತಂತ್ರಜ್ಞಾನ ಸಮನ್ವಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಆಕ್ಸೆಂಚರ್ ಇದೀಗ ಹಿಂದಿನ ದೇನಾ ಬ್ಯಾಂಕಿನ ಐಟಿ ವ್ಯವಸ್ಥೆಯನ್ನು ಬ್ಯಾಂಕ್ ಆಫ್ ಬರೋಡಾ ಜತೆ ಜೋಡಿಸಲಿದೆ. ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಜತೆ 2019ರಲ್ಲಿ ವಿಲೀನವಾದಾಗ ದೇಶದ ಮೂರನೇ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೃಷ್ಟಿಯಾಗಿತ್ತು. ಇದು ಪೂರ್ಣಗೊಂಡ ಬಳಿಕ, ಕ್ರೋಢೀಕೃತ ತಂತ್ರಜ್ಞಾನ ಕಂಪನಿಯಾಗಿ ಆಕ್ಸೆಂಚರ್ ಕಾರ್ಯ ನಿರ್ವಹಿಸುವ ಮೂಲಕ ದೇಶವ್ಯಾಪಿ ಗ್ರಾಹಕ ಸೇವೆಗಳನ್ನು ಮತ್ತು ಸುಮಾರು 9000 ಬ್ಯಾಂಕ್ ಶಾಖೆಗಳು ಹಾಗೂ 12000ಕ್ಕೂ ಅದಿವಿಜಯಾ ಬ್ಯಾಂಕ್‍ನ 1900ಕ್ಕೂ ಅಧಿಕ ಶಾಖೆಗಳ ಸುಮಾರು 21 ದಶಲಕ್ಷ…
12ನೇ ವರ್ಷಾಚರಣೆ ಅಂಗವಾಗಿ ವಿಶೇಷ ಅಫರ್, ವಿವಿಧ ಗಿಫ್ಟ್ಗ್ರಾಹಕರಿಗೆ 10 ಲಕ್ಷ ರೂ.,ಮೌಲ್ಯದ ಚಿನ್ನಾಭರಣ ಉಡುಗೊರೆತೀರ್ಥಹಳ್ಳಿಯ ಶೋ ರೂಂನಲ್ಲಿ “ಸರಳ ಕಾರ್ಯಕ್ರಮದ ರಂಗು” ತೀರ್ಥಹಳ್ಳಿ: ಮಲೆನಾಡಿನ ಹೆಸರಾಂತ ಚಿನ್ನದ ಮಳಿಗೆ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್ ತನ್ನ 12ನೇ ವರ್ಷದ ವರ್ಷಾಚರಣೆ ಹಾಗೂ ವಿಜಯ ದಶಮಿ, ದಸರಾ ಅಂಗವಾಗಿ ಗ್ರಾಹಕರಿಗೆ 10 ಲಕ್ಷ ಮೌಲ್ಯದ ಚಿನ್ನಾಭರಣ ಉಡುಗೊರೆ ಮತ್ತು ಗೃಹೋಪಯೋಗಿ ವಸ್ತುಗಳ ಗಿಫ್ಟ್ ನೀಡುತ್ತಿದೆ.ಪ್ರತಿ ತಿಂಗಳು 25ರಂದು ತಿಂಗಳ ಬಂಪರ್ ಡ್ರಾ ನಡೆಯಲಿದ್ದು, ಒಂದು ಲಕ್ಷ, 50 ಸಾವಿರ, 25 ಸಾವಿರ ಮೌಲ್ಯದ ಚಿನ್ನಾಭರಣ ಸಿಗಲಿದೆ. ಡಿಸೆಂಬರ್ 25ರ ವಾರ್ಷಿಕ ಬಂಪರ್ ಡ್ರಾನಲ್ಲಿ 3 ಲಕ್ಷ ಮೌಲ್ಯದ ಚಿನ್ನಾಭರಣ ಸಿಗಲಿದೆ. ಮೊದಲ ಬಹುಮಾನ 1.5 ಲಕ್ಷದ ಚಿನ್ನಾಭರಣ, ದ್ವಿತೀಯ 75 ಸಾವಿರ ಮೌಲ್ಯದ ಚಿನ್ನಾಭರಣ, ತೃತೀಯ 50 ಸಾವಿರದ ಚಿನ್ನಾಭರಣ, 25 ಸಾವಿರ ಮೌಲ್ಯದ ಚಿನ್ನಾಭರಣದ ಸಮಾಧಾನಕರ ಬಹುಮಾನ ಕೂಡ ಇರಲಿದೆ. ಪ್ರತಿ ಖರೀದಿಗೂ ಆಕರ್ಷಕ ಗೃಹೋಪಯೋಗಿ ವಸ್ತು ಉಚಿತವಾಗಿ ಸಿಗಲಿದೆ.…
ಅಡಿಕೆ ಗೊನೆ ಕುಯ್ಯುವ, ಔಷಧಿ ಹೊಡೆಯುವ ದೋಟಿ ಲಭ್ಯಒಂದೇ ಸೂರಲ್ಲಿ ಎಲ್ಲಾ ಯಂತ್ರೋಪಕರಣಮಲೆನಾಡು: ಅಡಿಕೆ ಗೊನೆ ಕುಯ್ಯುವ ಮತ್ತು ಔಷಧಿ ಹೊಡೆಯುವ ದೋಟಿ ಇದೀಗ ರೈತರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ತೀರ್ಥಹಳ್ಳಿ ಮೂಲದ ಕೃಷಿ ಉಪಕಾರ್ ಸಂಸ್ಥೆ ಮಾಡುತ್ತಿದೆ. ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಗೆ ನಿರಂತರವಾದ ಮಳೆಯಿಂದಾಗಿ ಕೊಳೆ ರೋಗ ಭಾರಿ ನಷ್ಟವನ್ನುವುಂಟುಮಾಡಿದೆಮಲೆನಾಡಿನಲ್ಲಿ ಮಳೆಯಿಂದಾಗಿ ಎರಡು ಮೂರು ಕೆಲವೊಮ್ಮೆ ನಾಲ್ಕು ಬಾರಿ ಶಿಲಿಂದ್ರ ನಾಶಕ ಸಿಂಪಡನೆ ಅನಿವಾರ್ಯವಾಗಿದೆ.ಹಾಗೆಯೇ ಸಕಾಲದಲ್ಲಿ ಮರ ಏರುವವರು ಸಿಗದೇ ಏನು ಮಾಡಲಾಗದ ಹತಾಶ ಸ್ಥಿತಿ ಬೆಳೆಗಾರರದ್ದಾಗಿದೆ. ಹೀಗಿರುವಾಗಮಳೆಗಾಲದಲ್ಲಿ ಪಾಚಿ ಕಟ್ಟಿದ ಜಾರುವ ಮರವನ್ನು ಏರುವುದು ಕಷ್ಟ ಸಾಧ್ಯ, ಹಾಗೆಯೇ ಅಷ್ಟೆ ಅಪಾಯಕಾರಿ ಕೂಡ.ಇನ್ನು ಪಸಲು ಕೂಯ್ಲು ಮಾಡುವುದಕ್ಕೂ ಮರವನ್ನು ಏರಿ ಕೆಲಸಮಾಡುವುದು ದುಬಾರಿಯ ಜೊತೆಗೆ ಅಪಾಯವು ಆಗಿರುವುದರಿಂದ ಇವೆಲ್ಲಾ ಸಮಸ್ಯೆಗೆ ಪರಿಹಾರವಾಗಿ ಇನ್ನೋ ಮೆಕ್ ಟೆಕ್ನಾಲಜೀಸ್ ಅವರಿಂದ ಸಂಶೋಧಿಸಿದ ದೋಟಿ ಅಥವಾ ಗಳ ವನ್ನು ಬಳಸಿ ಎಲ್ಲಾ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ ಸಂಪರ್ಕಿಸಿ: ನಕುಲ್…
ಕಠಿಣ ಸೈಬರ್ ಕಾನೂನು ಮಾಡಲು ಮುಂದಾದ ಕಂಪನಿಕರೋನಾ ಬಳಿಕವೂ ವರ್ಕ್ ಫ್ರಂ ಹೋಂ ಮುಂದುವರಿಕೆ! ನವದೆಹಲಿ: ಕರೊನಾ ಹಿನ್ನೆಲೆಯಲ್ಲಿ ವರ್ಕ್ ಫ್ರಮ್ ಹೋಮ್ ಅವಕಾಶ ನೀಡಿರುವುದರಿಂದ ಬಹಳಷ್ಟು ಉದ್ಯೋಗಿಗಳಿಗೆ ಆರಾಮ್ ಎನಿಸಿದ್ದರೆ, ಹಲವಾರು ಕಂಪನಿಗಳಿಗೆ ಇದು ನಡುಕ ಉಂಟುಮಾಡಿದೆ.ಸಿಸ್ಕೋ ವರದಿ ಈ ವಿಷಯ ತಿಳಿಸಿದ್ದು, ಕಂಪನಿಯ ಆಂತರಿಕ ಭದ್ರತೆ ಮ್ತು ಸೈಬರ್ ಸೆಕ್ಯೂರಿಟಿ ಸಮಸ್ಯೆಯಾಗಲಿದೆ ಎಂದು ಹೇಳಲಾಗಿದೆ. ಭಾರತದ ಕಾಲು ಭಾಗಕ್ಕೂ ಅಧಿಕ ಕಂಪನಿಗಳಲ್ಲಿ ಸೈಬರ್ ಥ್ರೆಟ್ ಪ್ರಮಾಣ ಶೇ.25 ಅಧಿಕಗೊಂಡಿದೆ. ಮಾತ್ರವಲ್ಲ ಈ ಕಂಪನಿಗಳಿಗೆ ಸೈಬರ್ ಸೆಕ್ಯುರಿಟಿ ಸವಾಲಾಗಿ ಪರಿಣಮಿಸಿದ್ದು, ಕಂಪನಿಗಳು ಸೈಬರ್ ಸೆಕ್ಯುರಿಟಿ ಹೆಚ್ಚಿಸಿಕೊಳ್ಳುವಲ್ಲಿ ಹೆಚ್ಚಿನ ಆದ್ಯತೆ ನೀಡುವಂತಾಗಿದೆ ಎಂಬುದು ವರದಿಯಲ್ಲಿ ಉಲ್ಲೇಖಗೊಂಡಿದೆ.ಕರೊನಾ ಬಳಿಕವೂ ಭಾರತದ ಶೇ.53 ಕಂಪನಿಗಳು ಅರ್ಧಕ್ಕೂ ಹೆಚ್ಚು ಸಿಬ್ಬಂದಿಗೆ ವರ್ಕ್ ಫ್ರಮ್‍ಹೋಮ್‍ನಲ್ಲೇ ಕೆಲಸ ಮಾಡಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿವೆ. ಆದರೆ ಈ ಸಂದರ್ಭ ರಿಮೋಟ್ ಆಯಕ್ಸೆಸ್? ಕೊಡಬೇಕಾದ್ದರಿಂದ ಸೈಬರ್ ಥ್ರೆಟ್ ಹೆಚ್ಚಿರಲಿದ್ದು, ಆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಿದೆ. ಶೇ.77 ಕಂಪನಿಗಳು ಭವಿಷ್ಯದಲ್ಲಿ ತಮ್ಮ ಸೈಬರ್…
ಲಸಿಕೆ ನಂಬಿ ಕೂತರೇ ಗೋವಿಂದಾ… ಲಂಡನ್: ಕರೋನಾ ಶೀಘ್ರ ಹೋಗಲ್ಲ..ಜನರನ್ನು ಬಿಡಲ್ಲ ಎಂಬ ಬ್ರಿಟನ್ ಮೂಲದ ವಿಜ್ಞಾನಿಗಳ ಈ ಅಭಿಪ್ರಾಯ ತೀವ್ರ ಸಂಚಲನ ಸೃಷ್ಟಿಸಿದೆ. ಜಗತ್ತಿನಾದ್ಯಂತ ಕರೊನಾ ಸೋಂಕಿತರ ಸಂಖ್ಯೆ 4 ಕೋಟಿ ಗಡಿದಾಟಿದ ಬೆನ್ನಲ್ಲೇ ವಿಜ್ಞಾನಿಗಳು ಆಘಾತಕಾರಿ ಸುದ್ದಿ ಹೊರಹಾಕಿದ್ದಾರೆ. ಈಗಾಗಲೇ ಎಲ್ಲಾ ದೇಶಗಳು ಕರೋನದಿಂದ ಇಡೀ ವ್ಯವಸ್ಥೆಯನ್ನೇ ತಲೆಕೆಳಗು ಮಾಡಿಕೊಂಡಿವೆ. ಜಗತ್ತಿನಿಂದ ಕರೋನಾ ವೈರಸ್ ಅಷ್ಟು ಸುಲಭವಾಗಿ ಮರೆಯಾಗಲು ಸಾಧ್ಯವಿಲ್ಲ. ಲಸಿಕೆ ಸಂಶೋಧನೆ ಸಕ್ಸಸ್ ಕಂಡರೂ ಕೊರೊನಾ ವೈರಸ್ ನಿಯಂತ್ರಣ ಸಾಧ್ಯವಷ್ಟೇ ಆದರೆ ನಿರ್ಮೂಲನೆ ಮಾಡಲು ಆಗದು ಎಂದಿದ್ದಾರೆ ತಜ್ಞರು. ಬ್ರಿಟನ್‍ನಲ್ಲಿ ಕೊರೊನಾ ಲಸಿಕೆ ಸಂಶೋಧನೆ ಭರದಿಂದ ಸಾಗಿದೆ. ಮತ್ತೊಂದು ಕಡೆ ಚಳಿಗಾಲದ ಹಿನ್ನೆಲೆ 2ನೇ ಅಲೆಯ ಹೊಡೆತಕ್ಕೆ ಸಿಲುಕಿ ಬ್ರಿಟನ್ ಸೇರಿದಂತೆ ಯುರೋಪ್ ರಾಷ್ಟ್ರಗಳು ನಲುಗಿ ಹೋಗಿವೆ. ಈ ಸಂದಿಗ್ಧ ಸಂದರ್ಭದಲ್ಲಿ ವಿಜ್ಞಾನಿಗಳು ಶಾಕ್ ಮೇಲೆ ಶಾಕ್ ಕೊಟ್ಟಿದ್ದಾರೆ. ಈವರೆಗೂ ಯಾವುದೇ ಕೊರೊನಾ ಲಸಿಕೆಗಳು ಅಷ್ಟು ಪ್ರಮಾಣದಲ್ಲಿ ಪ್ರಭಾವ ಬೀರುತ್ತಿಲ್ಲ. ಅಕಸ್ಮಾತ್ ವ್ಯಾಕ್ಸಿನ್ ಸಕ್ಸಸ್ ಆದರೂ ಕೊರೊನಾ…
ರೋಗ ನಿರೋಧಕ ಶಕ್ತಿ ಯಾವುದರಲ್ಲಿ ಹೆಚ್ಚು..?ಹಾಗಿದ್ರೆ ಈ ಸುದ್ದಿ ಪೂರ್ಣ ಓದಿ… ಬೆಂಗಳೂರು: ಕರೋನಾ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲವು ಆಹಾರಗಳನ್ನು ಹೆಚ್ಚಾಗಿ ಸೇವಿಸಲು ಸಲಹೆ ನೀಡಿದೆ. ಈಗಾಗಲೇ ಜನತೆ ಕರೋನಾ ಭಯದಿಂದ ಆಯುರ್ವೇದ, ನೈಸರ್ಗಿಕ ಆಹಾರ ಪದ್ಧತಿಗೆ ಒಗ್ಗಿಕೊಂಡಿದ್ದಾರೆ. ಈ ನಡುವೆ ಸರ್ಕಾರ ಈ ಸಲಹೆ ನೀಡಿದೆ. ದ್ರಾಕ್ಷಿ ಹಣ್ಣು, ಕಿತ್ತಳೆ ಹಣ್ಣು,ಮೋಸಂಬಿ ಹಣ್ಣು, ನಿಂಬೆ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ವೃದ್ದಿಸಲಿದೆ. ಜೊತೆಗೆ ಕೆಂಪು ದೊಣ್ಣೆ ಮೆಣಸಿನ ಕಾಯಿ, ಗೆಡ್ಡೆ ಕೋಸು, ಬೆಳ್ಳುಳ್ಳಿ, ಶುಂಠಿ ಕೂಡಾ ಆರೋಗ್ಯದಾಯಕ ಆಹಾರಗಳಾಗಿವೆ. ಅದೇ ರೀತಿಯಲ್ಲಿ ಮೊಸರು, ಬಾದಾಮಿ, ಸೂರ್ಯಕಾಂತಿ ಬೀಜ, ನಿಂಬೆ ಕಾಯಿ, ಅರಿಶಿಣ, ಗ್ರೀನ್ ಟೀ, ಪಪ್ಪಾಯಿ ಮತ್ತು ಕಿವಿಹಣ್ಣನ್ನು ಹೆಚ್ಚಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಈಗಾಗಲೇ ಈ ಎಲ್ಲಾ ವಸ್ತುಗಳನ್ನು ಜನತೆ ಸೇವಿಸುತ್ತಿದ್ದಾರೆ.
ಮಳೆಯೋ..ಕರೋನಾವೋ..ಕೃತಕ ಅಭಾವವೋ..?ಈರುಳ್ಳಿ ಬಳಕೆಗೆ ಜನರ ಬ್ರೇಕ್..? ಬೆಂಗಳೂರು: ಕರೋನಾ, ಮಳೆ, ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನತೆಗೆ ಇದೀಗ ಈರುಳ್ಳಿ ಬೆಲೆ ಕಣ್ಣೀರು ತರಿಸಲಿದೆ.ರಾಜ್ಯದ ಬಹುತೇಕ ಕಡೆ ಈಗಾಗಲೇ ಬೆಲೆ 100-150ಕ್ಕೆ ಜಿಗಿದಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ದರ ದುಬಾರಿಯಾಗಿದೆ.ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಆದರೆ ಕಳೆದ ಕೆಲ ವಾರಗಳಿಂದ ಭಾರೀ ಮಳೆಯಾಗುತ್ತಿದ್ದು, ಬೆಳೆ ಹಾನಿಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. 150 ರೂ.ನತ್ತ ಈರುಳ್ಳಿ ಕೆಜಿ ಇದೆ. ಆದರೆ ರೈತರಿಗೆ 60-80 ರೂ ಸಿಕ್ಕರೆ ಹೆಚ್ಚು!. ಈರುಳ್ಳಿ ದರ ಹೆಚ್ಚಳದಿಂದ ಕರೋನಾ ಕಾರಣ ಹೋಟೆಲ್ ಮತ್ತು ಆಹಾರ ಪದಾರ್ಥ ತಯಾರಿಕಾ ಸಂಸ್ಥೆಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನರ ಕೈಯಲ್ಲಿಮೊದಲೇ ದುಡ್ಡಿಲ್ಲ. ಹೀಗಾಗಿ ಈರುಳ್ಳಿ ಬಳಕೆಯನ್ನೇ ಬಿಡುವ ಯೋಚನೆಯಲ್ಲಿದ್ದಾರೆ.