ಮಲೆನಾಡಿಗೂ ಬಂತು ಹೊಸ ಕಾನೂನು15 ಜಿಲ್ಲೆಗಳಲ್ಲಿ ಅನುಮತಿ ಪಡೆಯದಿದ್ದರೆ ಶಿಕ್ಷೆ ಬೆಂಗಳೂರು: ಇನ್ಮುಂದೆ ಬೋರ್‍ವೆಲ್ ಕೊರೆಯಬೇಕಾ…?. ಜಿಲ್ಲಾ ಅಂತರ್ಜಲ ಸಮಿತಿಯಿಂದ ಅನುಮತಿ ಪಡೆಯೋದು ಕಡ್ಡಾಯ!. ಒಂದು ವೇಳೆ ಅನುಮತಿ ಪಡೆಯದಿದ್ದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ.ಕರ್ನಾಟಕ ಅಂತರ್ಜಲ ಪ್ರಾಧಿಕಾರ ಈ ಮಹತ್ವದ ಅಧಿಸೂಚನೆ ಹೊರಡಿಸಿದೆ. ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಭೂಮಿ ಬರಡಾಗುತ್ತಿದೆ. ಈ ಹಿನ್ನಲೆಯಲ್ಲಿ ಬೋರ್‍ವೆಲ್ ಕೊರೆಸಲು ನಿಬಂಧನೆ ಹಾಕಲಾಗಿದೆ. ಅನುಮತಿ ಪಡೆಯದೇ ಬಾವಿ ಕೊರೆಸಿದರೆ ಅಂತವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ಆದೇಶ ಹೊರಡಿಸಲಾಗಿದೆ.ರಾಜ್ಯದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಗದಗ, ಹಾಸನ, ಕೋಲಾರ, ರಾಮನಗರ, ತುಮಕೂರು ಈ 15 ಜಿಲ್ಲೆಗಳಲ್ಲಿನ ಒಟ್ಟು 45 ತಾಲೂಕುಗಳಿಗೆ ಈ ಆದೇಶ ಅನ್ವಯವಾಗಲಿದೆ ಎಂದು ಹೇಳಲಾಗಿದೆ. ಇಲ್ಲಿ ಬೋರ್‍ವೆಲ್ ಕೊರೆಯಬೇಕಾದರೆ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ.
Author: Nammur Express Admin
ನವೆಂಬರ್ ತಿಂಗಳಲ್ಲಿ ಚುನಾವಣೆಗೆ ತಯಾರಿಅಡಕತ್ತರಿಯಲ್ಲಿ ಸಿಲುಕಿದ ರಾಜ್ಯ ಸರ್ಕಾರ ಬೆಂಗಳೂರು: ಕರೋನಾ, ಮಳೆ, ಜನರ ಆತಂಕದ ನಡುವೆ ನವೆಂಬರ್ ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆಗಳನ್ನು ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರ ಈಗ ಚುನಾವಣೆ ಬೇಡ ಎಂದು ಮನವಿ ಮಾಡಿದ್ದರೂ ಚುನಾವಣಾ ಆಯೋಗ ಹೈಕೋರ್ಟ್‍ಗೆ ಮಾಹಿತಿ ನೀಡಿದೆ. ಚುನಾವಣೆ ನಡೆಸುವಂತೆ ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಮತ್ತಿತರರು ಸಲ್ಲಿಸಿರುವ ಪಿಐಎಲ್ ವಿಚಾರಣೆ ನಡೆಸಿದ ವಿಭಾಗೀಯ ಪೀಠಕ್ಕೆ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಈ ಮಾಹಿತಿ ನೀಡಿದರು. ಚುನಾವಣಾ ಆಯೋಗ ಈಗಾಗಲೇ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದೆ. ಬಹುತೇಕ ಜಿಲ್ಲಾಧಿಕಾರಿಗಳು ಚುನಾವಣೆ ನಡೆಸಬಹುದು ಎಂಬ ನಿಲುವು ತಿಳಿಸಿದ್ದಾರೆ. ಒಂದು ತಾಲೂಕಿನಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಸಲು ಯೋಜಿಸಲಾಗಿದೆ ಎಂದು ಆಯೋಗದ ಪರ ನ್ಯಾಯಪೀಠಕ್ಕೆ ತಿಳಿಸಿದರು.
ಕರೋನಾ ಹಿನ್ನೆಲೆ ಸರಳ ಆಚರಣೆಏನೇನು ನಿಷೇಧ..ಏನೇನು ನಿಯಮ..? ಬೆಂಗಳೂರು: ಮುಸ್ಲಿಂ ಸಮುದಾಯದ ಪವಿತ್ರ ಹಬ್ಬ ಈದ್ ಮಿಲಾದ್ ಅ.30ರಂದು ನಡೆಯಲಿದೆ. ಕರೋನಾ ಎಲ್ಲೆಡೆ ಮತ್ತೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಹಬ್ಬದ ಪ್ರಯುಕ್ತ ಯಾವುದೇ ರೀತಿಯ ಸಾಮೂಹಿಕ ಮೆರವಣಿಗೆ, ತೆರೆದ ಸ್ಥಳಗಳಲ್ಲಿ ಒಂದೆಡೆ ಸೇರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮೊಹಲ್ಲಾಗಳಲ್ಲಿ ನಡೆಯುವ ಯಾವುದೇ ರೀತಿಯ ಹಗಲು ಮತ್ತು ರಾತ್ರಿಯ ಪ್ರವಚನ, ಸಾಂಸ್ಕøತಿಕ, ಕಾರ್ಯಕ್ರಮ, ಸಭೆ ಸಮಾರಂಭಗಳನ್ನು ನಿಷೇಧ ಮಾಡಲಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕ ಮತ್ತು ಡಿಜೆ ಬಳಕೆಯನ್ನು, ಖಬರಸ್ತಾನ್ ಒಳಗೊಂಡಂತೆ ಯಾವುದೇ ರೀತಿಯ ತೆರೆದ ಜಾಗದಲ್ಲಿ ಸಾಮೂಹಿಕ ಪ್ರಾರ್ಥನೆ, ಪ್ರವಚನ ಮುಂತಾದವುಗಳನ್ನು ಆಯೋಜಿಸುವುದು ಕಡ್ಡಾಯವಾಗಿ ನಿಷೇಧಿಸಿದೆ.ಏನೇನು ಮಾಡಬೇಕು?: ಮಸೀದಿ/ದರ್ಗಾಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಮಾಸ್ಕ್ ಉಪಯೋಗಿಸುವುದು, ಸ್ಯಾನಿಟೈಸರ್ ಹಾಗೂ ಸೋಪಿನಲ್ಲಿ ಕೈತೊಳೆಯುವುದು, ದೈಹಿಕ ಅಂತರ ಕಾಪಾಡುವುದು ಮತ್ತು ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ನೀಡಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಿ ಶಾಂತಿಯುತವಾಗಿ ಈದ್ ಮಿಲಾದ್ ಹಬ್ಬವನ್ನು ಆಚರಿಸಲು ವಕ್ಫ್ ಅಧಿಕಾರಿಗಳು…
ಮತ್ತೆ ಆನ್‍ಲೈನ್ ಶಿಕ್ಷಣದ ಮೊರೆ ಹೋದ ಸರ್ಕಾರಆನ್‍ಲೈನ್ ಶಿಕ್ಷಣಕ್ಕೆ ಓಕೆ ಎಂದ ಸರ್ಕಾರ ಬೆಂಗಳೂರು: ರಾಜ್ಯ ಶಿಕ್ಷಣ ಇಲಾಖೆಯ ಮಹಾತ್ವಾಕಾಂಕ್ಷಿ ವಿದ್ಯಾಗಮ ಕಾರ್ಯಕ್ರಮ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು ಮತ್ತೆ ಆನ್‍ಲೈನ್ ಶಿಕ್ಷಣದ ಮೊರೆ ಹೋಗಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಗಮ ಸ್ಥಗಿತಗೊಂಡಿರುವ ಬೆನ್ನಲ್ಲಿಯೇ ಖಾಸಗಿ ಶಾಲೆಗಳಲ್ಲಿ ಆನ್‍ಲೈನ್ ತರಗತಿಗಳು ಮುಂದುವರೆದಿವೆ.ಆದರೆ ಆನ್‍ಲೈನ್ ತರಗತಿಗಳಿಂದ ಮಕ್ಕಳ ಆರೋಗ್ಯ ಮೇಲೆ ಆಗುತ್ತಿರುವ ಪರಿಣಾಮ ನಿಧಾನವಾಗಿ ಹೆಚ್ಚಾಗುತ್ತಿದೆ. ಇದು ಶಿಕ್ಷಣ ಇಲಾಖೆಯ ಗಮನಕ್ಕೂ ಬಂದಿದೆ. ಹೀಗಾಗಿ ಆನ್‍ಲೈನ್ ಶಿಕ್ಷಣದ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಹತ್ವದ ಆದೇಶ ಮಾಡಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಆನ್‍ಲೈನ್ ಶಿಕ್ಷಣದಿಂದ ವಿದ್ಯಾರ್ಥಿಗಳ ಕಣ್ಣಿಗೆ ಹೆಚ್ಚಾಗಿ ತೊಂದರೆ ಆಗುತ್ತಿರುವುದಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿರುತ್ತದೆ.ಆನ್‍ಲೈನ್ ಶಿಕ್ಷಣ ಮಾದರಿಯನ್ನು ತಜ್ಞರು ನೀಡಿರುವ ವರದಿ ಹಾಗೂ ಸಲಹೆಗಳ ಆಧಾರದ ಮೇರೆಗೆ ಸಿದ್ಧಪಡಿಸಲಾಗಿದೆ. ಈ ವರದಿ ಆಧಾರದ ಮೇರೆಗೆ ರಾಜ್ಯದ ಎಲ್ಲಾ ಶಾಲೆಗಳು ಆನ್‍ಲೈನ್ ಶಿಕ್ಷಣ ನಡೆಸುವಂತೆ ವಿವರವಾದ ಸುತ್ತೋಲೆಯನ್ನು ಇಂದೇ ಹೊರಡಿಸಿ ಎಂದು ಶಿಕ್ಷಣ ಸಚಿವ ಎಸ್.…
ರೈಲು ಟಿಕೆಟ್‍ನಷ್ಟೆ ಹಣ ಪ್ಲಾಟ್‍ಫಾರ್ಮ್‍ಗೆ ಕೊಡಬೇಕು… ಬೆಂಗಳೂರು: ಮೂರು ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್ ಫಾರಂ ಟಿಕೆಟ್ ಶುಲ್ಕವನ್ನು ಹೆಚ್ಚಳ ಮಾಡಿದ ಒಂದು ತಿಂಗಳ ನಂತರ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ 11 ರೈಲು ನಿಲ್ದಾಣಗಳಲ್ಲಿ ಪ್ಲಾಟ್ ಫಾರಂ ಟಿಕೆಟ್ ದರ ಹೆಚ್ಚಳ ಮಾಡಿದೆ. ಕೆ.ಆರ್ ಪುರಂ, ಬಂಗಾರಪೇಟೆ, ತುಮಕೂರು, ಹೊಸೂರು, ಕೆಂಗೇರಿ, ಮಂಡ್ಯ, ಹಿಂದೂಪುರ, ಪೆನುಕೊಂಡ, ಯಲಹಂಕ, ಬಾಣಸವಾಡಿ, ಕರ್ಮೆಲರಂ ಮತ್ತು ವೈಟ್ ಫೀಲ್ಡ್ ರೈಲು ನಿಲ್ದಾಣಗಳಲ್ಲಿ ಅಕ್ಟೋಬರ್ 21ರಿಂದ ನವಂಬರ್ 10ರವರೆಗೆ 50 ರೂ. ಪ್ಲಾಟ್ ಫಾರಂ ಟಿಕೆಟ್ ಶುಲ್ಕವಿರುತ್ತದೆ ಎಂದು ಹೇಳಲಾಗಿದೆ.
ಕರೋನಾದಿಂದ ಬಂದ್ ಆಗಿದ್ದ ದೇಗುಲ ಈಗ ಓಪನ್ಕರೋನಾ ನೆಗೇಟಿವ್ ಇದ್ರೆ ಮಾತ್ರ ಅವಕಾಶ ಶಬರಿಮಲೆ: ಶಬರಿಮಲೆ ಭಕ್ತರಿಗೆ ಮುಕ್ತ ಮುಕ್ತವಾಗಿದೆ. ಕರೋನಾದಿಂದ ಬಂದ್ ಆಗಿದ್ದ ದೇಗುಲ ಈಗ ಓಪನ್ ಆಗಿದೆ. ಕರೋನಾ ಸೋಂಕಿನ ಭೀತಿಯಿಂದ ಬಂದ್ ಆಗಿದ್ದಂತ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಭಕ್ತರಿಗಾಗಿ ತೆರೆದುಕೊಂಡಿದೆ. ಭಕ್ತರ ಸಂಖ್ಯೆ ಕಡಿಮೆ ಇದ್ದರೂ ದಿನದಿಂದ ದಿನಕ್ಕೆ ಭಕ್ತರು ಹೆಚ್ಚಾಗುತ್ತಿದ್ದಾರೆ. ಭಕ್ತರು ಕಡ್ಡಾಯವಾಗಿ ಕರೋನಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಮಂಡಳಿ ಸೂಚಿಸಿದೆ. ಕರೋನಾ ನೆಗೆಟಿವ್ ವರದಿ ಇದ್ದವರಿಗೆ ಮಾತ್ರವೇ ದೇವಸ್ಥಾನಕ್ಕೆ ಭಕ್ತರಿಗೆ ಪ್ರವೇಶ ನೀಡುವುದಾಗಿಯೂ ತಿಳಿಸಿದೆ. ಹೀಗಾಗಿ ಕರೋನಾ ಲಕ್ಷಣಗಳಿರುವವರು ಕೂಡ ಆಗಮಿಸುವುದು ಸೂಕ್ತ ಅಲ್ಲ.ದೇಗುಲಕ್ಕೆ ಆಗಮಿಸುವವರಿಗೆ ಕರೋನಾ ಪರೀಕ್ಷೆ ಪತ್ರ ತರುವುದು ಕಡ್ಡಾಯವಾಗಿದೆ. ಜ.14ರಂದು ಅತೀ ಹೆಚ್ಚು ಭಕ್ತರು ಸಂಕ್ರಾಂತಿ ಜ್ಯೋತಿ ಪೂಜೆಗೆ ಆಗಮಿಸುತ್ತಾರೆ.
ಸರ್ಕಾರಿ ಕಚೇರಿಯಲ್ಲಿ ಬಿಎಸ್‍ಎನ್‍ಎಲ್ ಬಳಕೆ ಕಡ್ಡಾಯನೆಟ್‍ವರ್ಕೂ ಇಲ್ಲ…ಇಂಟರ್‍ನೆಟ್ ವೇಗ ಇಲ್ಲಜನತೆಗೆ ಮತ್ತಷ್ಟು ಸಮಸ್ಯೆ ಸಾಧ್ಯತೆ ನವದೆಹಲಿ: ಸರ್ಕಾರಗಳ ಯಡವಟ್ಟು ನಿಯಮಗಳು ಜನತೆಗೆ ಅತೀ ಹೆಚ್ಚು ತೊಂದರೆ ಕೊಡುತ್ತವೆ. ಅಂತೆಯೇ ಇಲ್ಲೊಂದು ನಿಯಮ ಇದೀಗ ಜನರ ಸಂಕಟಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರವು ಬಿಎಸ್‍ಎನ್‍ಎಲ್ ಚೇತರಿಕೆಗೆ ಹೊಸ ಪ್ಲಾನ್ ಮಾಡುತ್ತಿದೆ. ಆದರೆ ಎಲ್ಲಿಯೂ ತಂತ್ರಜ್ಞಾನ ಮತ್ತು ಸೇವೆಯಲ್ಲಿ ಅದೂ ಜಾರಿಯಾಗಿಲ್ಲ. ಈ ನಡುವೆ ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯ, ಸರ್ಕಾರಿ ಕಚೇರಿ, ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಬಿಎಸ್‍ಎನ್‍ಎಲ್ ಸೇವೆ ಬಳಕೆ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಬಿಎಸ್‍ಎನ್‍ಎಲ್ ಹಾಗೂ ಎಂಟಿಎನ್‍ಎಲ್ ಸೇವೆಗಳನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಸೂಚನೆ ನೀಡಿದೆ. ಆದರೆ ಇದು ಜನರ ಕೆಲಸಗಳಿಗೆ ಮತ್ತಷ್ಟು ತೊಂದರೆ ತಂದೊಡ್ಡುವ ಸಾಧ್ಯತೆ ಇದೆ. ಭಾರೀ ನಷ್ಟದಲ್ಲಿರುವ ಬಿಎಸ್‍ಎನ್‍ಎಲ್‍ಗೆ ಕೊಂಚ ನೆಮ್ಮದಿ ನೀಡಿದೆ. ಆದರೆ ಎಲ್ಲಾ ಕಚೇರಿಗಳಲ್ಲಿ ಈ ಸೇವೆ ಪಡೆದು ಕೆಲಸ ಮಾಡಿದರೆ ಜನ ತೊಂದರೆ ಅನುಭವಿಸುವುದು ಕಟ್ಟಿಟ್ಟ ಬುತ್ತಿ ಎಂದು…
-ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಸ್ಪಷ್ಟನೆ ನವದೆಹಲಿ: ಜನನ ಮತ್ತು ಮರಣ ನೋಂದಣಿಗೆ ಆಧಾರ್ ಒದಗಿಸುವುದು ಕಡ್ಡಾಯವಲ್ಲ ಎಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ.ಸ್ವಯಂಪ್ರೇರಣೆಯಿಂದ ಆಧಾರ್ ಒದಗಿಸಿದರೆ, ಅದನ್ನು ಯಾವುದೇ ದಾಖಲೆಯಲ್ಲಿ ಮುದ್ರಿಸಬಾರದು ಎಂದು ಆರ್‍ಟಿಐಗೆ ನೀಡಿದ ಉತ್ತರದಲ್ಲಿ ತಿಳಿಸಲಾಗಿದೆ. ವಿಶಾಖಪಟ್ಟಣಂ ಮೂಲದ ವಕೀಲ ಅನಿಲ್ ಕುಮಾರ್, ಮರಣದ ನೋಂದಣಿಗೆ ಆಧಾರ್ ಕಡ್ಡಾಯವೇ ಅಥವಾ ಇಲ್ಲವೇ ಎಂದು ಕೇಳಿ ಆರ್‍ಟಿಐ ಮನವಿ ಸಲ್ಲಿಸಿದ್ದರು. ಕಳೆದ ವಾರ ಟ್ವಿಟರ್‍ನಲ್ಲಿ ಈ ಬಗ್ಗೆ ಉತ್ತರ ನೀಡಲಾಗಿದೆ. ಜನನ ಮತ್ತು ಮರಣದ ನೋಂದಣಿಗೆ ಆಧಾರ್ ಸಂಖ್ಯೆಯ ಅವಶ್ಯಕತೆ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಸತ್ತವರ ಗುರುತಿಗಾಗಿ ಆಧಾರ್ ನೀಡಬೇಕೆಂದು ಆರ್.ಜಿ.ಐ. 2017ರಲ್ಲಿ ಹೇಳಿತ್ತು. ಆದ್ರೆ 2018ರಲ್ಲಿ ಸುಪ್ರೀಂ ಕೋರ್ಟ್ ಇದಕ್ಕೆ ವಿರುದ್ಧ ತೀರ್ಪುನೀಡಿತ್ತು. ಇದಾದ ನಂತರ 2019ರಲ್ಲಿ ಆರ್.ಜಿ.ಐ. ಎಲ್ಲ ರಾಜ್ಯಗಳಿಗೆ ಸುತ್ತೋಲೆ ಕಳಿಸಿತ್ತು. ಸ್ಥಳೀಯ ನೋಂದಣಿ ಅಧಿಕಾರಿಗಳು ಆಧಾರ್ ಕಡ್ಡಾಯವೆಂದು ಒತ್ತಾಯಿಸುವಂತಿಲ್ಲ. ಸ್ವಯಂಪ್ರೇರಿತರಾಗಿ ಆಧಾರ್ ಸ್ವೀಕರಿಸಬಹುದು. ಆಧಾರ್ ಸಂಖ್ಯೆಯ ಮೊದಲ ಎಂಟು ಅಂಕೆಗಳನ್ನು ಕಪ್ಪು…
ತೀರ್ಥಹಳ್ಳಿ ರಾಮೇಶ್ವರ ದೇಗುಲ ಆವರಣ ಸ್ವಚ್ಛಹಳ್ಳಿ ಹಳ್ಳಿಯೂ ಆಗಲಿ ಸ್ವಚ್ಛ..! ತೀರ್ಥಹಳ್ಳಿ: ಸಮಾಜ ಸೇವೆ, ಅಭಿವೃದ್ಧಿ ಯೋಜನೆಯಲ್ಲಿ ದೇಶದಲ್ಲೇ ಸದಾ ಮುಂದಿರುವ ಧರ್ಮಸ್ಥಳ ಯೋಜನೆ ಇದೀಗ ಎಲ್ಲೆಡೆ ಸ್ವಚ್ಛತೆಯತ್ತ ಹೆಜ್ಜೆ ಇಟ್ಟಿದೆ.ಕರೋನಾ ಕಾರಣದಿಂದ ದೇಗುಲಗಳು, ಸರ್ಕಾರಿ ಜಾಗಗಳು ಕಳೆದ 6 ತಿಂಗಳಿಂದ ಹಾಳು ಬಿದ್ದಂತಿವೆ. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತೀರ್ಥಹಳ್ಳಿ ಘಟಕದ ವತಿಯಿಂದ ದೇವಸ್ಥಾನದ ಆವರಣ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು. ಸುಮಾರು 60 ಜನ ಸದಸ್ಯರು ಭಾಗವಹಿಸಿ ಮಾದರಿಯಾದರು. ಶ್ರೀ ರಾಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸೊಪ್ಪುಗುಡ್ಡೆ, ರಾಘವೇಂದ್ರ, ಸದಸ್ಯ ಕಿಶೋರ್, ಧರ್ಮಸ್ಥಳ ಸಂಘದ ಯೋಜನಾಧಿಕಾರಿಗಳಾದ ಹೇಮಲತಾ, ಸಂಘದ ಸುಬ್ರಮಣ್ಯ ಕನ್ನಂಗಿ ಸೇರಿದಂತೆ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಗುಂಪಿನ ಸದಸ್ಯರು ಭಾಗವಹಿಸಿದ್ದರು.ಪ್ರತಿ ಗ್ರಾಮ, ಎಲ್ಲಾ ದೇಗುಲ ಆಗಲಿ ಕ್ಲೀನ್!: ಕರೋನಾ ಕಾರಣ ಎಲ್ಲೆಡೆ ಅಸ್ವಚ್ಛತೆ ಕಾಣುತ್ತಿದೆ. ಸಮಾಜಕ್ಕೆ ಮಂಕು ಬಡಿದಂಥ ವಾತಾವರಣ ಕಂಡು ಬರುತ್ತಿದೆ.ನೆಗೆಟಿವಿಟಿ ಹೆಚ್ಚಾಗಿದೆ. ಆದ್ದರಿಂದ…
ಶಿವಮೊಗ್ಗ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸ್ಥಾನಅಜಿತ್ ಗೌಡಗೆ ಖಚಾಂಚಿ ಹುದ್ದೆ ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಯುವ ನಾಯಕ ರಕ್ಷಿತ್ ಮೇಗರವಳ್ಳಿ ಆಯ್ಕೆಯಾಗಿದ್ದಾರೆ.ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ತೀರ್ಥಹಳ್ಳಿ ತಾಲೂಕಲ್ಲಿ ಪಕ್ಷ ಸಂಘಟನೆ, ಯುವ ಸಂಘಟನೆಯಲ್ಲಿ ಮಹತ್ವದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದ ರಕ್ಷಿತ್ ಅವರಿಗೆ ಪಕ್ಷ ಮತ್ತಷ್ಟು ಜವಾಬ್ದಾರಿ ವಹಿಸಿದೆ. ಸದಾ ನಗು ಮೊಗದ, ಸಮಾಜಮುಖಿ ಕೆಲಸಗಳ ಮೂಲಕ ಜನರ ಪ್ರೀತಿಗೆ ಪಾತ್ರರಾಗಿರುವ ರಕ್ಷಿತ್ ಕಳೆದ ಬಾರಿ ಜ್ಞಾನೇಂದ್ರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಜೊತೆಗೆ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಗೆಲುವಿಗೆ ಶ್ರಮಿಸಿದ್ದರು.ಪಕ್ಷದ ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಇದೀಗ ಅವರಿಗೆ ಜಿಲ್ಲಾ ಬಿಜೆಪಿ ನಾಯಕರು ಈ ಸ್ಥಾನ ನೀಡಿದ್ದಾರೆ. ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದ ಬಳಿ “ಮೇಗರವಳ್ಳಿ ಎಂಟಪ್ರ್ರೈಸಸ್” ಎಂಬ ಉದ್ಯಮದ ಮಾಲೀಕರಾಗಿರುವ ರಕ್ಷಿತ್ ತೀರ್ಥಹಳ್ಳಿ ಕೋ ಆಪರೇಟಿವ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ತೀರ್ಥಹಳ್ಳಿ ಸೇರಿ ಆಗುಂಬೆ ಹೋಬಳಿಯ ಪ್ರಮುಖ ನಾಯಕರಾಗಿರುವ ರಕ್ಷಿತ್ ಈ ಹಿಂದೆ ಯುವ ಘಟಕದ…