- ಸಿನಿಮಾ ರಿಲೀಸ್ ಮಾಡಿದ್ರೆ ಹಣ ಯಾರ್ ಕೊಡ್ತಾರೆ..?
- ಧೂಳು ಹಿಡಿದ ಚಿತ್ರಮಂದಿರಗಳು!: ಸರ್ಕಾರದಿಂದಲೂ ಮೋಸ?
ಬೆಂಗಳೂರು: ಕರೋನಾ ಮಹಾಮಾರಿ ಎಲ್ಲಾ ಕ್ಷೇತ್ರದ ಮೇಲೂ ಬಲವಾದ ಪೆಟ್ಟು ನೀಡಿದೆ. ಎಷ್ಟರ ಮಟ್ಟಿಗೆ ಎಂದರೆ ಈವರೆಗೆ ಜಗತ್ತು ನೋಡದಷ್ಟು.!. ಅದರಲ್ಲೂ ಮನೋರಂಜನ ಕ್ಷೇತ್ರವಂತೂ ಇನ್ನು ಏಳೋದು ದೊಡ್ಡ ಸಾಹಸವೇ. ಕಳೆದ ಏಳು ತಿಂಗಳ ಬಳಿಕ ಅ.15ರಂದು ಚಿತ್ರಮಂದಿರಗಳು ಓಪನ್ ಆಗಿವೆ. ಇದು ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಸಣ್ಣಪುಟ್ಟ ಸಿನಿಮಾಗಳು ತೆರೆಕಾಣುತ್ತಿವೆ.
ಮಲ್ಟಿಪ್ಲೆಕ್ಸ್ಗಳು ಸೇರಿದಂತೆ ಒಂದಷ್ಟು ಸಿನಿಮಾ ಮಂದಿರಗಳು ಪ್ರದರ್ಶನವನ್ನು ಆರಂಭಿಸಿವೆಯಾದರೂ ಮಾಲೀಕರು ನಿರೀಕ್ಷೆ ಮಾಡಿದಷ್ಟು ಜನ ಚಿತ್ರಮಂದಿರದತ್ತ ಬಂದಿಲ್ಲ. ಎಲ್ಲಾ ಶೋಗಳಲ್ಲೂ ಕುರ್ಚಿ ಖಾಲಿ ಖಾಲಿಯಾಗಿವೆ. ಹಾಗಿದ್ದರೂ ಚಿತ್ರ ಪ್ರದರ್ಶಕರು ದೀಪಾವಳಿಯ ಹೊತ್ತಿಗೆ ಎಲ್ಲವೂ ಸರಿ ಹೋಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. ಜೊತೆಗೆ ಚಿತ್ರಮಂದಿರಗಳ ಮಾಲಿಕರು ಅದೇ ಭರವಸೆಯಲ್ಲಿದ್ದಾರೆ.
ಕರ್ನಾಟಕದ 600 ಸಿಂಗಲ್ ಸ್ಕ್ರೀನ್ಗಳಿಗೆ ಸಿನಿಮಾಗಳ ಸಮಸ್ಯೆ ಎದುರಾಗಿದೆ. ಯಾವುದೇ ನಿರ್ಮಾಪಕರು ಹೊಸ ಸಿನಿಮಾ ರಿಲೀಸ್ ಮಾಡಲು ಮುಂದೆ ಬರುತ್ತಿಲ್ಲ. ಇದರಿಂದಾಗಿ ಸದ್ಯದ ಮಾಹಿತಿ ಪ್ರಕಾರ ಕರ್ನಾಟಕದಾದ್ಯಂತ 20 ಚಿತ್ರ ಮಂದಿರಗಳು ಮಾತ್ರ ಪ್ರದರ್ಶನ ಆರಂಭಿಸಿವೆ. ಮಲ್ಟಿಪ್ಲೆಕ್ಸ್ಗಳು ಶೋಗಳನ್ನು ಕಡಿಮೆ ಮಾಡಿಕೊಂಡು ಎಲ್ಲೆಡೆಯೂ ಪ್ರದರ್ಶನ ಆಂಭಿಸಿವೆ. ಇನ್ನೂ ಕೆಲವು ಕಡೆ ಚಿತ್ರಮಂದಿರಗಳು ಇನ್ನೂ ಓಪನ್ ಆಗಿಲ್ಲ.
ಏಕೆ ಓಪನ್ ಇಲ್ಲ?: ನಿರ್ಮಾಪಕರು ಸಿನಿಮಾ ರಿಲೀಸ್ ಮಾಡಿದರೆ ನಾವು ಚಿತ್ರಮಂದಿರ ಕೊಡಲು ರೆಡಿ ಎಂದು ಪ್ರದರ್ಶಕರು ಹೇಳಿದ್ದಾರೆ. ಆದರೆ ನಿರ್ಮಾಪಕರ ಸಂಘ ಮಾತ್ರ ಡಿಜಿಟಲ್ ಸರ್ವೀರ್ಸ್ ಪೆÇ್ರವೈಡರ್ಗಳತ್ತ ಬೆಟ್ಟು ತೋರಿಸುತ್ತಿದೆ. ಒಬ್ಬ ನಿರ್ಮಾಪಕ ಹಣ ಹೂಡಿ ಸಿನಿಮಾ ಮಾಡಿದರೆ ಮಾತ್ರ ಚಿತ್ರಮಂದಿರ, ಡಿಜಿಟಲ್ ಸರ್ವೀಸ್ ಪೆÇ್ರವೈಡರ್. ಹೀಗೆ ಎಲ್ಲರ ಕೆಲಸಗಳು ನಡೆಯುವುದು. ಹಾಗಿದ್ದ ಮೇಲೆ ಸದ್ಯದ ಪರಿಸ್ಥಿತಿಯಲ್ಲಿ ಅವರು ನಮಗೆ ಸಹಕಾರ ನೀಡಬೇಕು. ಅದನ್ನು ಬಿಟ್ಟು ಶೇ.50ರಷ್ಟು ರಿಯಾಯಿತಿ ನೀಡುತ್ತೇವೆ ಎಂದರೆ ಒಪ್ಪಲಾಗುವುದಿಲ್ಲ. ಮೊದಲು ಅವರು ನಮಗೆ ಪ್ರದರ್ಶನಕ್ಕೆ ಅವಕಾಶ ನೀಡಿ ನಂತರ ಹಣ ಪಡೆಯಲಿ. ಮೊದಲೇ ಹಣ ಕಟ್ಟಿ ಎಂದರೆ ಆಗುವುದಿಲ್ಲ ಎನ್ನುತ್ತದೆ ನಿರ್ಮಾಪಕರ ಸಂಘ.
ನಿರ್ಮಾಪಕರು ಹೇಳಿದ್ದೇನು..?: ಒಬ್ಬ ನಿರ್ಮಾಪಕ ಕೋಟ್ಯಂತರ ರೂಪಾಯಿ ಹಾಕಿ ಸಿನಿಮಾ ಮಾಡಿರುತ್ತಾನೆ. ಅವನಿಗೆ ಚಿತ್ರಮಂದಿರದವರು ಅಡ್ವಾನ್ಸ್ ನೀಡಿ ಸಿನಿಮಾ ತೆಗೆದುಕೊಂಡು ಹೋಗಿ ಹಾಕಿಕೊಳ್ಳಲಿ. ಅದನ್ನು ಬಿಟ್ಟು, ಮೊದಲು ಹಾಕಿ ನಂತರ ಕಲೆಕ್ಷನ್ ನಂತರ ಹಣ ನೀಡುತ್ತೇವೆ ಎಂದರೆ ಕಷ್ಟ. ಈಗಾಗಲೇ ಕೆಲ ನಿರ್ಮಾಪಕರು ಬಡ್ಡಿ ಕಟ್ಟುತ್ತಿದ್ದಾರೆ. ಚಿತ್ರಮಂದಿರದ ಮಾಲೀಕರು ನಿರ್ಮಾಪಕರಿಗೆ ಸ್ಪಂದಿಸಿದರೆ ಸಹಾಯವಾಗುತ್ತದೆ ಎಂದು ನಿರ್ಮಾಪಕರು ಹೇಳುತ್ತಾರೆ.
ಚಿತ್ರ ಮಂದಿರದ ಕಥೆಯೇನು..?: ಚಿತ್ರ ಮಂದಿರದ ಲೈಸೆನ್ಸ್ ನವೀಕರಣದ ಮೊತ್ತವನ್ನು ಸರ್ಕಾರ ಐದು ಸಾವಿರದಿಂದ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಮಾಡಿದೆ. ಇದನ್ನು ಕಡಿಮೆ ಮಾಡಬೇಕು. ಜತೆಗೆ ನಿರ್ಮಾಪಕರು ಶೇರಿಂಗ್ ಪದ್ಧತಿಗೆ ಒಪ್ಪಿಕೊಳ್ಳಬೇಕು ಅಲ್ಲಿಯವರೆಗೂ ನಮ್ಮ ಸಂಘದ ಅಡಿಯಲ್ಲಿರುವ ಚಿತ್ರಮಂದಿರಗಳನ್ನು ತೆರೆಯುವುದಿಲ್ಲ’ ಎಂದು ಕರ್ನಾಟಕ ಪ್ರದರ್ಶಕರ ಮಹಾಮಂಡಳ ಹೇಳಿದೆ.
ಧೂಳು ಹಿಡಿದ ಚಿತ್ರಮಂದಿರಗಳು!: ರಾಜ್ಯದ ವಿವಿಧೆಡೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಚಿತ್ರಮಂದಿರಗಳು ಧೂಳು ಹಿಡಿದಿವೆ. ಅದರ ಖರ್ಚು ಕೂಡ ಈಗ ದುಬಾರಿಯೇ. ಇನ್ನು ಹೊಸ ಬಿಗ್ ಬಜೆಟ್ ಸಿನಿಮಾಗಳು ತೆರೆ ಕಂಡರೆ ಮಾತ್ರ ಓಕೆ. ಅದು ಹೊಸ ವರ್ಷದ ನಂತರದ ಮಾತು ಆಗಬಹುದು. ಜೊತೆಗೆ ಡಿಜಿಟಲ್, ಓಟಿಟಿ ಪ್ಲಾಟ್ಫಾರ್ಮ್ಗಳು ಕೂಡ ಸಿನಿಮಾ ಮಾರುಕಟ್ಟೆಗೆ ಮುಂದಿನ ದಿನಗಳಲ್ಲಿ ತೊಂದರೆ ನೀಡಲಿವೆ.