- ಕರಾವಳಿ, ರಾಜಧಾನಿಯಲ್ಲಿ “ದಸರಾ ಸೊಬಗು”
- ಪ್ರಸಿದ್ಧ ದೇಗುಲಗಳಲ್ಲಿ ಭಕ್ತರ ಸಾಲು ಸಾಲು
- ಬೆಂಗಳೂರಿನ ಎಲ್ಲಾ ಕಡೆ ದಸರಾ ಸಡಗರ..!
ಮಂಗಳೂರು/ಬೆಂಗಳೂರು/ಹುಬ್ಬಳ್ಳಿ: ದಸರಾ ಹಬ್ಬವನ್ನು ಕರಾವಳಿ ಮತ್ತು ಬೆಂಗಳೂರು ಭಾಗದಲ್ಲಿ ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು. ಕರಾವಳಿಯ ಕೊಲ್ಲೂರು, ಕುದ್ರೋಳಿ, ಆನೆಗುಡ್ಡೆ ಸೇರಿದಂತೆ ಎಲ್ಲಾ ಕಡೆ ದಸರಾವನ್ನು ಆಚರಣೆ ಮಾಡಲಾಯಿತು.
ಬೆಂಗಳೂರಿನ ಬನ ಶಂಕರಿ ದೇವಾಲಯ ಸೇರಿದಂತೆ ಎಲ್ಲಾ ದೇಗುಲಗಳು ಮುಂಜಾನೆಯಿಂದ ರಾತ್ರಿವರೆಗೆ ಫುಲ್ ಆಗಿದ್ದವು. ಪ್ರತಿ ಮನೆ ಮನೆಯಲ್ಲೂ ದಸರಾ ಹಬ್ಬ ಆಚರಣೆ ಮಾಡಲಾಯಿತು.
ಉತ್ತರ ಕರ್ನಾಟಕದ ಬಹುತೇಕ ಕಡೆ ಗೊಂಬೆಗಳ ಪ್ರದರ್ಶನ, ಮನೆಯಲ್ಲೂ ಗೊಂಬೆಗಳ ಕೂರಿಸಲಾಗಿತ್ತು. ಪ್ರತಿ ಊರಲ್ಲೂ ದಸರಾ ಮೆರವಣಿಗೆ ಮಾಡಲಾಯಿತು. ಎಲ್ಲಾ ಕಡೆ ಕರೋನಾ ಜಾಗೃತಿ ಮೂಡಿಸಲು ಟ್ಯಾಬ್ಲೋ ಮಾಡಲಾಯಿತು. ಅದರಲ್ಲಿ ಕರೋನಾ ಕುರಿತ ಜಾಗೃತಿ ಮೂಡಿಸಲಾಯಿತು.
ಮೈಸೂರು ದಸರಾದಲ್ಲೂ ಕೂಡ ಈ ಟ್ಯಾಬ್ಲೋ ಪ್ರದರ್ಶನ ಮಾಡಲಾಯಿತು. ಪ್ರತಿ ತಾಲೂಕಲ್ಲೂ ಈ ಕರೋನಾ ಜಾಗೃತಿ ಟ್ಯಾಬ್ಲೋ ಪ್ರದರ್ಶನ ಮಾಡಲಾಯಿತು. ರಾಜ್ಯದಲ್ಲಿ ಎಲ್ಲೂ ದಸರಾ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.