- ಜೇಮ್ಸ್ ಚಿತ್ರೀಕರಣದ ವೇಳೆ ಪುನೀತ್ ಕರೋನಾ ಜಾಗೃತಿ
- ನೆಚ್ಚಿನ ನಟನ ಕಂಡು ಖುಷಿಪಟ್ಟ ಕೊಪ್ಪಳ ಅಭಿಮಾನಿಗಳು…
ಕೊಪ್ಪಳ: ಸ್ಯಾಂಡಲ್ವುಡ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಭಾರೀ ಭರವಸೆ ಮೂಡಿಸಿರುವ ಚಿತ್ರ ಇದೀಗ ಸದ್ದು ಮಾಡುತ್ತಿದೆ. ಈ ನಡುವೆ ಪುನೀತ್ ಕರೋನಾ ಜಾಗೃತಿಯನ್ನು ಸಹ ಮೂಡಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಬಳಿ ಬೃಹತ್ ಸೆಟ್ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಹೀಗಾಗಿ ಇನ್ನೂ ಕೆಲ ದಿನಗಳ ಕಾಲ ಚಿತ್ರ ತಂಡ ಗಂಗಾವತಿಯಲ್ಲಿಯೇ ಬೀಡು ಬಿಡಲಿದೆ.ಇದೇ ವೇಳೆ ಸದಾ ಸಾಮಾಜಿಕ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಪುನೀತ್ ಗಂಗಾವತಿ ಗ್ರಾಮೀಣ ಪೆÇಲೀಸ್ ಠಾಣೆಯಿಂದ ಆಯೋಜಿಸಿದ್ದ ಕರೋನಾ ಜಾಥಾದಲ್ಲಿ ಭಾಗವಹಿಸಿ ಜಾಗೃತಿ ಮೂಡಿಸಿದ್ದಾರೆ. ಈ ಮೂಲಕ ಎಲ್ಲಾ ತಾರೆಯರಿಗೆ ಮಾದರಿಯಾಗಿದ್ದಾರೆ.
ಪುನೀತ್ ಅಭಿನಯದ ಜೇಮ್ಸ್ ಚಿತ್ರೀಕರಣ ನಡೆಯುತ್ತಿರುವುದನ್ನು ಅರಿತ ಪೆÇಲೀಸರು ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. “ಇದು ಕೂಡ ನನ್ನ ಕರ್ತವ್ಯ ಎಂದು ಓಕೆ ಎಂದ ಪುನೀತ್ ಕರೋನಾದಿಂದ ಸುರಕ್ಷಿತರಾಗಿರಿ, ಸ್ವಾಸ್ಥ್ಯ ಕಾಪಾಡಿಕೊಳ್ಳಿ, ಮಾಸ್ಕ್ ಧರಿಸಿ…ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಪುನೀತ್ ನೋಡಲು ಅಭಿಮಾನಿಗಳು ಹಾಗೂ ಸುತ್ತಲಿನ ಗ್ರಾಮಗಳ ಜನರ ದಂಡೇ ಸೇರಿತ್ತು. ನೆಚ್ಚಿನ ನಟನನ್ನು ಕಂಡು ಕೇಕೆ, ಶಿಳ್ಳೆ, ಚಪ್ಪಾಳೆ ತಟ್ಟುವ ಮೂಲಕ ಖುಷಿಪಟ್ಟರು. ಪುನೀತ್ ಜೊತೆ ಅನು ಪ್ರಭಾಕರ್ ಸಹ ಕೋವಿಡ್ ಬಗ್ಗೆ ಜನರಿಗೆ ತಿಳಿ ಹೇಳಿದ್ದಾರೆ.