- ಕರೋನಾ ಸೋಂಕಿನ ಹೊಡೆತಕ್ಕೆ “ದೀಪಾವಳಿ ಬಂಪರ್”!
- ಬಡ, ಮಧ್ಯಮ ವರ್ಗಕ್ಕೆ ಮತ್ತೊಂದು ಸಿಹಿ ಸುದ್ದಿ?
ನವ ದೆಹಲಿ: ಕರೋನಾದಿಂದ ಇಡೀ ದೇಶದ ಆರ್ಥಿಕ ವ್ಯವಸ್ಥೆ ಹಳ್ಳ ಹಿಡಿದಿದೆ. ಬಡವರ ಬದುಕು ಬೀದಿಪಾಲಾಗಿದೆ. ಈ ನಡುವೆ ಮೋದಿ ಸರ್ಕಾರ ಬಡವರ ಜನ್ ಧನ್ ಖಾತೆಗೆ 1500 ರೂ. ಹಾಕಲು ನಿರ್ಧರಿಸುತ್ತಿದೆ ಎನ್ನಲಾಗಿದೆ.
ದೇಶದಲ್ಲಿ ಉತ್ತಮ ಸ್ಥಿತಿಯಲ್ಲಿದ್ದವರು ಕೂಡ ಈಗ ಕರೋನಾದಿಂದ ಬಡವರಾಗಿ ಹೋಗಿದ್ದಾರೆ. ಹಾಗಾಗಿ ಮೋದಿ ಸರ್ಕಾರ ನವೆಂಬರ್ವರೆಗೆ ಬಡವರಿಗೆ ಆಹಾರ ಧಾನ್ಯ ವಿತರಿಸುವುದಾಗಿ ಘೋಷಿಸಿತ್ತು. ಈಗ ಅದನ್ನ ಮಾರ್ಚ್ 2021ರವರೆಗೆ ವಿಸ್ತರಿಸಬಹುದು ಎಂದು ಹೇಳಲಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಡ ಮಹಿಳೆಯರ ಖಾತೆಗೆ ಮತ್ತೆ 1500 ರೂಪಾಯಿ ಸೇರಿಸಲಿದೆ. ಬಡ ಮತ್ತು ದುರ್ಬಲ ಕುಟುಂಬಗಳ ಜನರಿಗೆ 3ನೇ ಉತ್ತೇಜನ ಪ್ಯಾಕೇಜ್ ಸರ್ಕಾರ ಸಿದ್ಧಪಡಿಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಜನ್ ಧನ್ ಖಾತೆ ತೆರೆಯುವುದು ಹೇಗೆ..?: ಪ್ರಧಾನ ಮಂತ್ರಿ ಜನಧನ್ ಯೋಜನೆಯಡಿ ಶೂನ್ಯ ಬ್ಯಾಲೆನ್ಸ್ ನಲ್ಲಿ ಉಳಿತಾಯ ಖಾತೆ ತೆರೆಯಬಹುದು. ಇದರಲ್ಲಿ ಚೆಕ್ ಸೌಲಭ್ಯ, ವಿಮೆ ಸೇರಿದಂತೆ ಎಲ್ಲಾ ಸೌಲಭ್ಯ ನೀಡಲಾಗುತ್ತದೆ. ನೀವು ಯಾವುದೇ ಬ್ಯಾಂಕ್ ಶಾಖೆಗೆ ಹೋಗಿ ಅಗತ್ಯ ದಾಖಲೆಗಳನ್ನ ನೀಡಿ ನಿಮ್ಮ ಖಾತೆ ತೆರೆಯಬಹುದು.
ಖಾತೆ ತೆರೆಯಲು ಈ ದಾಖಲೆಗಳು ಅಗತ್ಯ..!: ಜನ್ಧನ್ ಖಾತೆ ತೆರೆಯಲು ಆಧಾರ್ ಕಾರ್ಡ್, ಪಾಸ್ಪೆÇೀರ್ಟ್ ಅಥವಾ ಚಾಲನಾ ಪರವಾನಗಿ ನೀವು ಬಳಸಬಹುದು. ಇದರಿಂದ ನಿಮ್ಮ ಕೆವೈಸಿ ಪೂರ್ಣಗೊಳಿಸಬಹುದು. ನಿಮ್ಮ ಬಳಿ ಯಾವುದೇ ದಾಖಲೆಗಳು ಇಲ್ಲದಿದ್ದರೆ, ನೀವು ನಿಮ್ಮ ದೃಢೀಕೃತ ಭಾವಚಿತ್ರ ತೆಗೆದುಕೊಂಡು ಬ್ಯಾಂಕ್ ಅಧಿಕಾರಿ ಮುಂದೆ ಸಹಿ ಹಾಕಿ ನಿಮ್ಮ ಖಾತೆ ತೆರೆಯಬಹುದು. ಜನ್ ಧನ್ ಖಾತೆ ತೆರೆಯಲು ಯಾವುದೇ ರೀತಿಯ ಶುಲ್ಕವಿಲ್ಲ. 10 ವರ್ಷ ಮೇಲ್ಪಟ್ಟವರು ಖಾತೆ ತೆರೆಯಬಹುದು.
ಖಾತೆ ತೆರೆಯುವಾಗ ಈ ಸೌಲಭ್ಯಗಳು ಲಭ್ಯ: ಖಾತೆ ತೆರೆದ ನಂತರ, ರೂಪೇ ಡೆಬಿಟ್ ಕಾರ್ಡ್ ಸೌಲಭ್ಯ ಓವರ್ ಡ್ರಾಫ್ಟ್ ಸೌಲಭ್ಯದೊಂದಿಗೆ ಸಹ ನೀಡಲಾಗುತ್ತದೆ. 1 ಲಕ್ಷ ರೂ.ಗಳ ಅಪಘಾತ ವಿಮೆ ಡೆಬಿಟ್ ಕಾರ್ಡ್ ಲಭ್ಯವಿದೆ. ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ನೇರವಾಗಿ ಖಾತೆಗೆ ವರ್ಗಾಯಿಸಲಾಗುತ್ತದೆ.