- ಶೂಟಿಂಗ್ನಲ್ಲಿದ್ದಾಗಲೇ ವಿಧಿವಶ: ಅಪಾರ ಅಭಿಮಾನಿಗಳ ಕಣ್ಣೀರು
- ಕಿರಿ ತಲೆಮಾರನ್ನು ಬೆಳೆಸಿದ್ದ ಹಿರಿಯ ನಟ
ಬೆಂಗಳೂರು: ಕನ್ನಡದ ಹಲವಾರು ಧಾರಾವಾಹಿಯಲ್ಲಿ ನಟಿಸಿದ್ದ ಪ್ರಸಿದ್ಧ ನಟ, ಬರಹಗಾರ ಕೃಷ್ಣ ನಾಡಿಗ್ ಶನಿವಾರ ಶೂಟಿಂಗ್ನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿದೆ. ಮೊದಲಿಗೆ ಎದೆನೋವು ಕಾಣಿಸಿಕೊಂಡಿತ್ತು. ನಂತರ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಇದೀಗ ಅವರ ಸಾವು ಕಲಾ ಲೋಕಕ್ಕೆ ನೋವು ತಂದಿದೆ.
“ಮಿಲನ’, ‘ದೇವಿ’, ‘ಪಾರು’ ಮುಂತಾದ ಧಾರಾವಾಹಿಗಳಲ್ಲಿ ಇವರು ನಟಿಸಿದ್ದರು. ಸುಮಾರು ನಾಲ್ಕುದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಟ, ಬರಹಗಾರರಾಗಿ ಗುರುತಿಸಿಕೊಂಡಿದ್ದರು.