15 ಲಕ್ಷ ಕುಟುಂಬಕ್ಕೆ ಸಿಕ್ಕಲ್ಲ ಅನ್ನಭಾಗ್ಯ ಗ್ಯಾರಂಟಿ ಹಣ!
– ನಿಷ್ಕ್ರಿಯ ಬ್ಯಾಂಕ್ ಖಾತೆ, ಆಧಾರ್ ಲಿಂಕ್, ಇ-ಕೆವೈಸಿ ಸರಿ ಇಲ್ಲ
– ನಿಮ್ಮ ಎಲ್ಲಾ ದಾಖಲೆ ಸರಿ ಇದ್ಯಾ ಚೆಕ್ ಮಾಡ್ಕೊಳಿ!
– ಜೂನ್ ತಿಂಗಳಲ್ಲಿ ಪಡಿತರ ಆಹಾರ ಧಾನ್ಯ ಪಡೆದವರು ಮಾತ್ರ ಅರ್ಹರು?!
NAMMUR EXPRESS NEWS
ಬೆಂಗಳೂರು: ನಿಷ್ಕ್ರಿಯ ಬ್ಯಾಂಕ್ ಖಾತೆ, ತಪ್ಪಾದ ಆಧಾರ್ ಸಂಖ್ಯೆ ಹಾಗೂ ಇ-ಕೆವೈಸಿ ಸೇರಿ ವಿವಿಧ ಕಾರಣಗಳಿಂದ ರಾಜ್ಯದ 15 ಲಕ್ಷಕ್ಕೂ ಅಧಿಕ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿದಾರ ಕುಟುಂಬಗಳು ‘ಅನ್ನಭಾಗ್ಯ’ ಹಣ ಸೌಲಭ್ಯದಿಂದ ವಂಚಿತರಾಗಲಿದ್ದಾರೆ. ಹೌದು. ಇನ್ನು ಹಳ್ಳಿ ಹಳ್ಳಿಗಳಲ್ಲಿ ಈ ಬಗ್ಗೆ ಆಡಳಿತ ಜಾಗೃತಿ ಮೂಡಿಸುವಲ್ಲಿ ವಿಫಲವಾಗಿದೆ. ಹಾಗಾಗಿ ಜನ ಇನ್ನು ದಾಖಲೆ ಸರಿ ಮಾಡಿಸಿಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಏನಿದು ಯೋಜನೆ?:
ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೆ ಈಗಾಗಲೆ 5 ಕೆಜಿ ಅಕ್ಕಿ ವಿತರಿಸುತ್ತಿದ್ದು, ಇನ್ನುಳಿದ 5 ಕೆಜಿ ಅಕ್ಕಿಗೆ ಪ್ರತಿ ಕೆಜಿಗೆ 34 ರೂ.ನಂತೆ 170 ರೂಗಳನ್ನು ಸೋಮವಾರದಿಂದ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಪಡಿತರ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದೆ. ಅನ್ನಭಾಗ್ಯದ ಅಕ್ಕಿಯ ಹಣ ಸಂದಾಯ ಮಾಡಲು ರಾಜ್ಯ ಸರ್ಕಾರ ಪ್ರತ್ಯೇಕವಾಗಿ ಅರ್ಜಿ ಕರೆದಿಲ್ಲ. ಈಗಾಗಲೆ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿ ಇ-ಕೆವೈಸಿ ಪೂರ್ಣಗೊಳಿಸಿದವರ ಮಾಹಿತಿ ಪಡೆದಿದ್ದು, ಆ ದಾಖಲೆಗಳ ಮೂಲಕವೇ ಹಣ ಸಂದಾಯ ಮಾಡುತ್ತಿದೆ. ಆದರೆ ಅರ್ಹರು ಮಾಸಾಂತ್ಯದೊಳಗೆ ಕಡ್ಡಾಯವಾಗಿ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಿಸಬೇಕು. ಜೂನ್ ತಿಂಗಳಲ್ಲಿ ಪಡಿತರ ಆಹಾರ ಧಾನ್ಯ ಪಡೆದವರು ಮಾತ್ರವೇ ಜುಲೈನಲ್ಲಿ ಹಣ ಪಡೆಯಲು ಅರ್ಹರು ಎಂದು ಆಹಾರ ಮತ್ತು ನಾಗರಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ರಾಜ್ಯದ ಅನೇಕ ಪಡಿತರ ಚೀಟಿಗಳಿಗೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯೇ ಆಗಿಲ್ಲ. ಸರ್ಕಾರ ಇ-ಕೆವೈಸಿ ಮಾಡಿಸುವಂತೆ ಜಾಗೃತಿ ಮೂಡಿಸಿದರೂ 15,73,194 ಪಡಿತರ ಚೀಟಿಗಳಿಗೆ ಬ್ಯಾಂಕ್ ಹಾಗೂ ಆಧಾರ್ ಸಂಖ್ಯೆ ಜೋಡಣೆಯಾಗಿಲ್ಲ. ಹೀಗಾಗಿ ಅವರೆಲ್ಲರಿಗೂ ಈ ಬಾರಿಯ ಅನ್ನಭಾಗ್ಯದ ಹಣ ಸಿಗುವ ಗ್ಯಾರಂಟಿಯೇ ಇಲ್ಲ.
ಅರ್ಹರೆಲ್ಲರಿಗೂ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಹೊಸದಾಗಿ ಬ್ಯಾಂಕ್ ತೆರೆದಾದರೂ ಆಧಾರ್ ಲಿಂಕ್ ಮಾಡಿಸಬೇಕು ಎಂದು ಸರ್ಕಾರ ಜು.30ರವರೆಗೆ ಗಡುವು ನೀಡಿದ್ದು, ಅಧಿಕಾರಿಗಳು ಪಡಿತರದಾರರಿಗೆ ಅರಿವು ಮೂಡಿಸುತ್ತಿದ್ದಾರೆ.
ಅರ್ಹ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿಯ ಕುಟುಂಬಗಳ ಮುಖ್ಯಸ್ಥರು ಆಧಾರ್ ಕಾರ್ಡ್ಗೆ ಬ್ಯಾಂಕ್ ಖಾತೆ ಜೋಡಣೆ ಮಾಡಿಸಿದ ಬಳಿಕವೇ ಅನ್ನಭಾಗ್ಯದ ಹಣ ಸಂದಾಯ ಮಾಡಲಾಗುವುದು.
ಕೇಳೋದು ಯಾರನ್ನು?
ಪಡಿತರ, ಆಧಾರ್, ಬ್ಯಾಂಕ್ ಕೆವೈಸಿ ಅಪ್ಡೇಟ್ ಬಗ್ಗೆ ಯಾರನ್ನೂ ಕೇಳುವುದು ಎಂಬ ಗೊಂದಲ ಇದೆ. ಈ ಬಗ್ಗೆ ತಕ್ಷಣ ಪ್ರತಿ ತಾಲೂಕು ಕೇಂದ್ರದಲ್ಲಿ ಈ ಯೋಜನೆಯ ಅನುಷ್ಠಾನಕ್ಕಾಗಿ ಪ್ರತ್ಯೇಕ ನೋಡಲ್ ಅಧಿಕಾರಿ ನೇಮಿಸಬೇಕೆಂಬ ಅಭಿಪ್ರಾಯ ಕೇಳಿ ಬಂದಿದೆ.
ಇದನ್ನೂ ಓದಿ : ಯಾವ ಊರಲ್ಲಿ ಜು.9ಕ್ಕೆ ಅಡಿಕೆ ದರ ಎಷ್ಟು ?
HOW TO APPLY : NEET-UG COUNSELLING 2023