- ತಮಿಳುನಾಡಲ್ಲೊಂದು ಹಾಲಿವುಡ್ ಸಿನಿಮಾ ಮಾದರಿ ಕೇಸ್
- 15 ಕೋಟಿ ಮೌಲ್ಯದ ರೆಡ್ ಮಿ ಮೊಬೈಲ್ ದರೋಡೆ
ಕೃಷ್ಣಗಿರಿ: ಸಿನಿಮಾ ಮಾದರಿಯ ದರೋಡೆ ಘಟನೆಯೊಂದು ತಮಿಳುನಾಡು ಕೃಷ್ಣಗಿರಿ ಹೈವೇಯಲ್ಲಿ ನಡೆದಿದೆ. ಹೈವೇಯಲ್ಲಿ ಸಾಗುತ್ತಿದ್ದ ಟ್ರಕ್ ಒಂದನ್ನು ಹೈಜಾಕ್ ಮಾಡಿ 15 ಕೋಟಿ ರೂಪಾಯಿ ಮೌಲ್ಯದ 14,500 ಮೊಬೈಲ್ ಫೆÇೀನ್ಗಳನ್ನ ಲೂಟಿ ಮಾಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಹಾಲಿವುಡ್, ಬಾಲಿವುಡ್ ಸಿನಿಮಾ ಮೀರಿಸುವಂತಿದೆ.
ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಚೆನ್ನೈನಿಂದ ಮುಂಬೈಗೆ ಟ್ರಕ್ವೊಂದು ಬುಧವಾರ ರಾತ್ರಿ ಮೊಬೈಲ್ ಫೆÇೀನ್ಗಳನ್ನು ಹೊತ್ತು ಸಾಗುತ್ತಿತ್ತು. ಸೂಲಗಿರಿ ಮತ್ತು ಕೃಷ್ಣಗಿರಿ ನಡುವೆ ಮೇಲುಮಲೈ ಎಂಬಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅಪರಿಚಿತ ಕಾರ್ ಒಂದು ಲಾರಿಯನ್ನು ಓವರ್ ಟೇಕ್ ಮಾಡಿದೆ. ನಂತರ ಟ್ರಕ್ ಅಡ್ಡಗಟ್ಟಿದ ಗ್ಯಾಂಗ್ ಟ್ರಕ್ ಡ್ರೈವರ್ ಮತ್ತು ಕ್ಲೀನರ್ ಇಬ್ಬರನ್ನೂ ಹಗ್ಗದಿಂದ ಕಟ್ಟಿ ಹಾಕಿದ್ದಲ್ಲದೇ ಅವರನ್ನು ಸ್ವಲ್ಪ ದೂರ ಕಾರಿನಲ್ಲಿ ಕರೆದೊಯ್ದು ರಸ್ತೆ ಬದಿಯಲ್ಲಿ ಬಿಟ್ಟಿದ್ದಾರೆ. ಇನ್ನು ಮೊಬೈಲ್ ಫೆÇೀನ್ಗಳು ತುಂಬಿದ್ದ ಲಾರಿಯನ್ನು 15 ಕಿ.ಮೀ ಚಲಾಯಿಸಿಕೊಂಡು ಹೋಗಿರುವ ಖದೀಮರು ಅಲ್ಲಿ ಬೇರೆ ಟ್ರಕ್ಗೆ ಎಲ್ಲಾ ಮೊಬೈಲ್ ಫೆÇೀನ್ಗಳನ್ನು ಶಿಫ್ಟ್ ಮಾಡಿದ್ದಾರೆ. ಚೆನ್ನೈನ ಪೂನಮಲೈ ಬಳಿ ಇರುವ ರೆಡ್ಮಿ ಮೂಬೈಲ್ ತಯಾರಿಕ ಘಟಕದಲ್ಲಿ ಈ ಮೊಬೈಲ್ಗಳನ್ನ ತಯಾರಿಸಲಾಗಿತ್ತು. ಅಲ್ಲಿಂದ ಮುಂಬೈಗೆ ಡಿಎಚ್ಎಲ್ ಎಕ್ಸ್ಪ್ರೆಸ್ ಏಜೆನ್ಸಿಯ ಕಂಟೇನರ್ ಟ್ರಕ್ ಮೂಲಕ ಸಾಗಿಸಲಾಗುತ್ತಿತ್ತು. ಟ್ರಕ್ನಲ್ಲಿ ಒಟ್ಟು 14,500 ರೆಡ್ಮಿ ಸ್ಮಾರ್ಟ್ಫೆÇೀನ್ಗಳಿದ್ದವು. ಮೊಬೈಲ್ ಸಾಗಾಟದ ಬಗ್ಗೆ ಮೊದಲೇ ತಿಳಿದಿದ್ದ ಲೂಟಿಕೋರರು ಮಧ್ಯರಾತ್ರಿ ಲಾರಿಯನ್ನು ಹೈಜಾಕ್ ಮಾಡಿ 15 ಕೋಟಿ ಮೌಲ್ಯದ ಹೊಸ ಮೊಬೈಲ್ ಫೆÇೀನ್ ದೋಚಿ ಪರಾರಿಯಾಗಿದ್ದಾರೆ. ಲೂಟಿ ಗ್ಯಾಂಗ್ ಪತ್ತೆ ಹಚ್ಚಲು 17 ತಂಡ ರಚಿಸಲಾಗಿದೆ. ಆದರೆ, ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಸೇಲಂ ವಿಭಾಗದ ಡಿಜಿಪಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.