ಇದು ವಂಚನೆ ಕಾಲವಯ್ಯಾ!
– ನಕಲಿ ಸಿಮ್ ಬಳಸಿ 72 ಲಕ್ಷ ಡ್ರಾ!: ಇದೊಂದು ಹೈಟೆಕ್ ಮೋಸ!
– ಸಿಮ್ ಕಾರ್ಡ್ ಬ್ಲಾಕ್ ಮಾಡಿ ಹಣ ದೋಚಿದ ವಂಚಕರು
– ಸಿಮ್ ಆಕ್ಟಿವೇಷನ್ ಪ್ರಕ್ರಿಯೆ ಹೆಸರಲ್ಲೂ ವಂಚನೆ
NAMMUR EXPRESS NEWS
ಬೆಂಗಳೂರು: ಜೆರಾಕ್ಸ್ ಅಂಗಡಿಯೊಂದರ ಮಾಲೀಕರ ಸಿಮ್ ಕಾರ್ಡ್ ಸ್ಥಗಿತ (ಬ್ಲಾಕ್) ಮಾಡಿಸಿದ್ದ ಸೈಬರ್ ವಂಚಕರು, ನಕಲಿ ದಾಖಲೆಗಳ ಮೂಲಕ ವಹಿವಾಟು ನಡೆಸಿ ಬ್ಯಾಂಕ್ ಖಾತೆಯಲ್ಲಿದ್ದ 1 2 ಲಕ್ಷ ಡ್ರಾ ಮಾಡಿಕೊಂಡಿದ್ದಾರೆ. ಹಣ ಕಳೆದುಕೊಂಡಿರುವ ಮಾಲೀಕ ಶಿವಕುಮಾರ್ ಅವರು ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
‘ಚಿಕ್ಕಸಂದ್ರದ ನಿವಾಸಿ ಶಿವಕುಮಾರ್, ಜೆರಾಕ್ಸ್ ಅಂಗಡಿ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಅವರ ಮೊಬೈಲ್ ನೆಟ್ವರ್ಕ್ ಏಕಾಏಕಿ ಬಂದ್ ಆಗಿತ್ತು. ಈ ಬಗ್ಗೆ ಮೊಬೈಲ್ ಸೇವಾ ಕಂಪನಿ ಸಹಾಯವಾಣಿಗೆ ಕರೆ ಮಾಡಿ ವಿಚಾರಿಸಿದ್ದರು. ಹಳೇ ಸಿಮ್ಕಾರ್ಡ್ ಬ್ಲಾಕ್ ಆಗಿದ್ದು, ಹೊಸ ಸಿಮ್ಕಾರ್ಡ್ ಖರೀದಿಸುವಂತೆ ಪ್ರತಿನಿಧಿ ಸಲಹೆ ನೀಡಿದ್ದರು’ ಎಂದು ಪೊಲೀಸರು ಹೇಳಿದರು.
ಹೊಸ ಸಿಮ್ ಕಾರ್ಡ್ ಖರೀದಿಸಿದ್ದ ಉದ್ಯಮಿ, ಮೊಬೈಲ್ಗೆ ಹಾಕಿದ್ದರು. ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 7.2 ಲಕ್ಷ ಹಣ ಡ್ರಾ ಆದ ಬಗ್ಗೆ ಸಂದೇಶ ಬಂದಿತ್ತು. ಈ ಬಗ್ಗೆ ಶಿವಕುಮಾರ್, ಬ್ಯಾಂಕ್ನಲ್ಲಿ ವಿಚಾರಿಸಿದ್ದರು. ಅಪರಿಚಿತರು ಮೊಬೈಲ್ ಸಂಖ್ಯೆ ಬಳಸಿ ಹಣ ವರ್ಗಾವಣೆ ಮಾಡಿಕೊಂಡಿರುವುದು ಗೊತ್ತಾಗಿತ್ತು. ಬಳಿಕವೇ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ತಿಳಿಸಿದರು.
ವ್ಯವಸ್ಥಿತ ಕೃತ್ಯ: ‘ಚಾಲ್ತಿಯಲ್ಲಿರುವ ಮೊಬೈಲ್ ಸಿಮ್ ಕಾರ್ಡ್ ಬ್ಲಾಕ್ ಮಾಡಿಸುವ ಸೈಬರ್ ವಂಚಕರು, ನಕಲಿ ದಾಖಲೆ ಬಳಸಿ ಹೊಸ ಸಿಮ್ಕಾರ್ಡ್ಗಳನ್ನು ಖರೀದಿಸಿ ವಂಚನೆ ಮಾಡುವುದನ್ನು ವೃತ್ತಿ ಮಾಡಿಕೊಂಡಿದ್ದಾರೆ. ಇದೊಂದು ವ್ಯವಸ್ಥಿತ ಸಂಚು. ಹೊರ ರಾಜ್ಯದಲ್ಲಿರುವ ಆರೋಪಿಗಳು ಕೃತ್ಯ ಎಸಗುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.
ಶಿವಕುಮಾರ್ ಅವರ ಸಿಮ್ಕಾರ್ಡ್ ಬಂದ್ ಮಾಡಿಸಿದ್ದ ಆರೋಪಿಗಳು, ನಕಲಿ ದಾಖಲೆ ನೀಡಿ ಹೊಸ ಸಿಮ್ಕಾರ್ಡ್ ಖರೀದಿಸಿದ್ದಾರೆ. ಬ್ಯಾಂಕ್ಗೆ ಸಂಬಂಧಪಟ್ಟ ದಾಖಲೆಗಳನ್ನೂ ನಕಲಿ ಮಾಡಿ, ಮೊಬೈಲ್ ಸಂಖ್ಯೆಗೆ ಬಂದ ಒಟಿಪಿ (ಒನ್ ಟೈಂ ಪಾಸ್ವರ್ಡ್) ಬಳಸಿ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಇಂಥ ಜಾಲದ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು’ ಎಂದು ಪೊಲೀಸರು ತಿಳಿಸಿದರು.
ಆಕ್ಟಿವೇಷನ್ ನೆಪದಲ್ಲೂವಂಚನೆ:
‘ಬ್ಲಾಕ್ ಆದ ಸಿಮ್ಕಾರ್ಡ್ ಬದಲಿಸಿ, ಹೊಸ ಸಿಮ್ಕಾರ್ಡ್ ಖರೀದಿಸಿ ಬಳಕೆ ಮಾಡುತ್ತಿರುವ ಸಂದರ್ಭದಲ್ಲೂ ವಂಚಕರು ಕರೆ ಮಾಡುತ್ತಾರೆ. ಆಕ್ಟಿವೇಷನ್ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಹೇಳಿ, ಬಳಕೆದಾರರಿಂದ ಒಟಿಪಿ ಪಡೆದು ಬ್ಯಾಂಕ್ ಖಾತೆಯಲ್ಲಿದ್ದ ಹಣ ಡ್ರಾ ಮಾಡಿಕೊಳ್ಳುತ್ತಾರೆ. ಈ ಬಗ್ಗೆಯೂ ಪ್ರಕರಣಗಳು ದಾಖಲಾಗುತ್ತಿವೆ’ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ : ಯಾವ ಊರಲ್ಲಿ ಜು.9ಕ್ಕೆ ಅಡಿಕೆ ದರ ಎಷ್ಟು ?
HOW TO APPLY : NEET-UG COUNSELLING 2023