ಕಾವಲುಗಾರನಿಗೆ ಚಾಕು ಇರಿದು ಟೊಮ್ಯಾಟೋ ಕಳ್ಳತನ!
– ಪೊಲೀಸ್ ಠಾಣೆಯ ಪಕ್ಕದ ತರಕಾರಿ ಅಂಗಡಿಯಲ್ಲಿ 40 ಕೆಜಿ ಟೊಮ್ಯಾಟೊ ಕಳ್ಳತನ
– ಶಾಪಿಂಗ್ ಮಾಡಲು ಹಣ ದರೋಡೆ ಪ್ಲಾನ್!
NAMMUR EXPRESS NEWS
ಬೆಂಗಳೂರು : ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಕೀಲರೊಬ್ಬರ ಮೇಲೆ ಯುವಕ, ಯುವತಿ ಸುಖಾ ಸುಮ್ಮನೆ ಹಲ್ಲೆ ಮಾಡಿರುವ ಆಂತಕಕಾರಿ ಘಟನೆ ಮಂಗಳವಾರ ರಾತ್ರಿ ನಡೆದಿದೆ. ವಕೀಲ ಚಂದ್ರು ಎಂಬುವವರ ಮೇಲೆ ನಿಖಿತಾ ಮತ್ತು ಹರೀಶ್ ಎಂಬುವರು ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಾತ್ರಿ ಚಂದ್ರು ಅವರು ಓರಿಯನ್ ಮಾಲ್ ಮುಂಭಾಗ ಬೈಕ್ನಲ್ಲಿ ಬರುತ್ತಿದ್ದರು. ಈ ವೇಳೆ ಆರೋಪಿಗಳಿಬ್ಬರು ಬೈಕ್ನಲ್ಲಿ ಬಂದು ಚಂದ್ರು ಅವರ ಬೈಕ್ ಮುಂದೆ ತಮ್ಮ ಬೈಕ್ ನಿಲ್ಲಿಸಿದ್ದಾರೆ. ಬಳಿಕ ಒಂದು ಲಕ್ಷ ರೂ. ಹಣ ಕೊಡಿ ಶಾಪಿಂಗ್ ಮಾಡಬೇಕು ಎಂದು ಕೇಳಿದ್ದಾರೆ.
ವಕೀಲರಿಗೆ ಇಬ್ಬರು ಯಾವುದೇ ಪರಿಚಯವಿಲ್ಲ. ಅಲ್ಲದೇ ಒಂದು ಲಕ್ಷ ಹಣ ಕೇಳಿದ್ದನ್ನು ನೋಡಿ ಆಘಾತಕ್ಕೆ ಒಳಗಾದ ಚಂದ್ರು ತಕ್ಷಣ ಇಬ್ಬರನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆ ಜೋಡಿ ಚಂದ್ರು ಅವರ ಮೇಲೆಯೇ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಚಂದ್ರು ತಲೆಯ ಭಾಗಕ್ಕೆ ಬಲವಾದ ಏಟು ಬಿದ್ದಿದ್ದು, ಆಬಳಿಕ ಅವರು ಪೊಲೀಸರ ಸಹಾಯ ಪಡೆದುಕೊಂಡರು. ಪೊಲೀಸರು ನಿಖಿತಾ ಹಾಗೂ ಹರೀಶ್ರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಈ ಸಂಬಂಧ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಎನ್.ಸಿ.ಆರ್ ದಾಖಲಾಗಿದೆ.
ಟೊಮ್ಯಾಟೊ ಕಾವಲಿಗಾಗಿ ನಿಂತಿದ್ದವನಿಗೆ ಚಾಕು ಇರಿತ
ಟೊಮ್ಯಾಟೊ ಕಾವಲಿಗಾಗಿ ನಿಂತಿದ್ದ ರಫಿ ಎಂಬವರು ಮೇಲೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ರಾಯಚೂರಿನ ಮಾನ್ವಿ ಪಟ್ಟಣದ ಮಾರ್ಕೆಟ್ನಲ್ಲಿ ನಡೆದಿದೆ.
ಈ ಸಮಯದಲ್ಲಿ ದುಷ್ಕರ್ಮಿಯೊಬ್ಬ ರಫಿ ಜೊತೆ ಮಾತನಾಡುವ ಸಲುವಾಗಿ ತಡರಾತ್ರಿ ವೇಳೆ ಬಂದು ರಫಿಯವರ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು ಎಸ್ಕೆಪ್ ಆಗಿದ್ದಾನೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಗಾಯಾಳು ಸಮೀಪದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಟೊಮ್ಯಾಟೊ ಕಳ್ಳತನಕ್ಕಾಗಿ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಟೊಮ್ಯಾಟೊಗೆ ಚಿನ್ನದ ಬೆಲೆ ಬಂದಿರುವುದರಿಂದ ಕಳ್ಳರ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆ ರೈತರು ರಾತ್ರಿಯಿಡೀ ಟೊಮ್ಯಾಟೊ ಬೆಲೆಯನ್ನು ಕಾಯುವಂತಾಗಿದೆ.
40 ಕೆಜಿ ಟೊಮ್ಯಾಟೊ ಕಳ್ಳತನ
ಚಿಕ್ಕಮಗಳೂರಿನಲ್ಲೂ ಪೊಲೀಸ್ ಠಾಣೆ ಪಕ್ಕವೇ ತರಕಾರಿ ಅಂಗಡಿಯಿಂದ ಸುಮಾರು 40 ಕೆಜಿ ಟೊಮ್ಯಾಟೊ ಕಳ್ಳತನ ಮಾಡಲಾಗಿದೆ.
ಈ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಪೊಲೀಸ್ ಠಾಣೆಯ ಬಳಿ ಇರುವ ತರಕಾರಿ ಅಂಗಡಿಯಲ್ಲಿ ಈ ಕಳ್ಳತನದ ಪ್ರಕರಣ ನಡೆದಿದ್ದು, ಸುಮಾರು 40 ಕೆ.ಜಿ ಟೊಮ್ಯಾಟೊ ಕದ್ದು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ತರಕಾರಿ ಅಂಗಡಿ ಮಾಲೀಕ ನದೀಮ್ ನಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆಲ್ದುರು ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಕುಡಿದು ಲಾಂಗ್ ಬೀಸಿದರು!
HOW TO APPLY : NEET-UG COUNSELLING 2023