ಈ ವಾರ ಮಳೆ ಕೊಂಚ ಇಳಿಮುಖ?
– ಮಲೆನಾಡಲ್ಲಿ ಬಿಡದೇ ಸುರಿಯುತ್ತಿರುವ ಮಳೆ
– ಕರಾವಳಿ ಜಿಲ್ಲೆಗಳಲ್ಲಿ ಕೊಂಚ ವಿಶ್ರಾಂತಿ
– ಶಾಲಾ ಕಾಲೇಜುಗಳು ಎಂದಿನಂತೆ ಓಪನ್
– ಕಾರ್ಕಳದಲ್ಲಿ ಮತ್ತೋರ್ವ ಮಹಿಳೆ ಬಲಿ
NAMMUR EXPRESS NEWS
ಬೆಂಗಳೂರು: ರಾಜ್ಯದ ಮಲೆನಾಡಲ್ಲಿ ಒಂದೇ ಸಮನೆ ಮಳೆ ಸುರಿಯುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಕಳೆದ ವಾರದಿಂದ ಆರ್ಭಟಿಸುತ್ತಿರುವ ಮಳೆ ಸ್ವಲ್ಪಮಟ್ಟಿಗೆ ಇಳಿಮುಖವಾಗಿದೆ. ಹೀಗಾಗಿ ಶಾಲಾ ಮಕ್ಕಳಿಗೆ ಎಂದಿನಂತೆ ತರಗತಿಗಳು ನಡೆಯಲಿದೆ.
ಮಲೆನಾಡಲ್ಲಿ ಈ ಸಲ ಮಳೆ ಹಗಲು ವೇಳೆ ಹೆಚ್ಚು ಸುರಿಯುತ್ತಿದ್ದು ರಾತ್ರಿ ಕೊಂಚ ತಣ್ಣಗಾಗುತ್ತಿರುವುದು ವಿಶೇಷ.
ಸತತ ಮಳೆಯಿಂದಾಗಿ ಕರಾವಳಿಯಲ್ಲಿ ನೆರೆ ಹಾವಳಿಯಿಂದಾಗಿ ಅನೇಕ ಜನರನ್ನು ಬಲಿ ತೆಗೆದುಕೊಂಡಿದೆ. ಹೀಗಾಗಿ ಈ ಪ್ರದೇಶದ ಜನರು ಎಚ್ಚರಿಕೆ ಇರುವಂತೆ ಹೇಳಿದೆ. ಒಂದೇ ವಾರದಲ್ಲಿ ಮಳೆ ಸುರಿದು ಬಹುತೇಕ ನದಿ ಕೊಳ್ಳಗಳು ತುಂಬಿವೆ.
ಕಾರ್ಕಳದಲ್ಲಿ ನದಿಗೆ ಬಿದ್ದು ಮಹಿಳೆ ಸಾವು
ಕಾರ್ಕಳ ತಾಲೂಕು ನಲ್ಲೂರು ಗ್ರಾಮದಲ್ಲಿ ಮಹಿಳೆಯೊಬ್ಬಳು ನೀರುಪಾಲಾಗಿದ್ದಾರೆ. ನಡಾಯಿಪ ನಿವಾಸಿ ಬೇಬಿಶೆಟ್ಟಿ (55) ಮೇಯಲು ಬಿಟ್ಟ ದನ ಹೊಡೆದುಕೊಂಡು ಬರಲು ಹೋಗಿದ್ದ ವೇಳೆ ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದ ಘಟನೆ ಸಂಭವಿಸಿದೆ.
ಮೃತರು ಪತಿ ಮತ್ತು ನಾಲ್ವರ ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ
ಸ್ವಲ್ಪ ಕಡಿಮೆಯಾಗುತ್ತಾ ಮಳೆ?
ಶನಿವಾರದಿಂದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ ಇಳಿಮುಖವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈಗಾಗಲೇ ಬೆಳಿಗ್ಗೆಯಿಂದಲೇ ಮಳೆ ಕೊಂಚ ಕಡಿಮೆ ಆಗಿದೆ.
ದಕ್ಷಿಣ ಒಳನಾಡಿನಲ್ಲಿ ಶೇ.46, ಉತ್ತರ ಒಳನಾಡಿನಲ್ಲಿ ಶೇ.57 ಹಾಗೂ ಕರಾವಳಿ ಭಾಗದಲ್ಲಿ ಶೇ.58ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆದರೆ ಕೋಲಾರದಲ್ಲಿ ಶೇ.10, ಮೈಸೂರು ಶೇ.15, ಮಂಡ್ಯ ಶೇ.40, ಶಿವಮೊಗ್ಗ ಶೇ.14, ಹಾಸನ ಶೇ.54, ಚಿಕ್ಕಮಗಳೂರು ಶೇ.21, ಕೊಡಗು ಶೇ.33ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾದ ವರದಿಯಾಗಿದೆ.
ಇದನ್ನೂ ಓದಿ : ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷವರೆಗೆ ಸಾಲ!
HOW TO APPLY : NEET-UG COUNSELLING 2023