ಅಂತೂ ಎಣ್ಣೆ ದರ ಏರಿಕೆ ಆಯ್ತು!
– ಇಂದಿನಿಂದ ಮದ್ಯದ ದರ ಶೇ.20ರಷ್ಟು ಹೆಚ್ಚಳ
– ಬಿಯರ್ 10%, ಇತರ ಮದ್ಯಗಳ ಬೆಲೆ 20%ರಷ್ಟು ಏರಿಕೆ
NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರ ಬಜೆಟ್ನಲ್ಲಿ ಅಬಕಾರಿ ಸುಂಕವನ್ನು ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಮದ್ಯದ ಬೆಲೆ ಶೇ.20ರಷ್ಟು ಏರಿಕೆ ಆಗಿದೆ. ರಾಜ್ಯದಲ್ಲಿ ಹೊಸ ಬೆಲೆಯಲ್ಲಿ ಶುಕ್ರವಾರದಿಂದ ಮದ್ಯ ಮಾರಾಟವಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದಂತೆ ಮದ್ಯದ ಅಬಕಾರಿ ಸುಂಕವನ್ನು ಹೆಚ್ಚಿಸಲಾಗಿದೆ. ಮದ್ಯದ ಬೆಲೆಯನ್ನು ಸರ್ಕಾರಿ ಆದೇಶದ ಪ್ರಕಾರ ಗುರುವಾರ ಮಧ್ಯರಾತ್ರಿಯಿಂದ ಈ ದರ ಹೆಚ್ಚಳ ಜಾರಿಗೆ ಬರಲಿದೆ. ಆದರೆ, ರಾಜ್ಯದ ಕೆಲ ಜಿಲ್ಲೆಗಳ
ರಿಟೇಲ್ ಮದ್ಯ ಮಾರಾಟದ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳಲ್ಲಿ ಗುರುವಾರ ರಾತ್ರಿಯೇ ಹೆಚ್ಚಿನ ದರವನ್ನು ಗ್ರಾಹಕರಿಂದ ವಸೂಲಿ ಮಾಡಿದ ಪ್ರಕರಣಗಳೂ ವರದಿಯಾಗಿವೆ. ಸರ್ಕಾರ ಬಜೆಟ್ನಲ್ಲಿ ಬ್ರಾಂದಿ, ವಿಸ್ಕಿ, ಜಿನ್, ರಮ್ ಮತ್ತು ಅಂಥಹ ಇತರ ಮದ್ಯಗಳ ಸುಂಕವನ್ನು ಶೇ.20ರಷ್ಟು ಏರಿಕೆ ಹಾಗೂ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಶೇ.10ರಷ್ಟು ಹೆಚ್ಚಿಸಿದ್ದನ್ನು ತಿಳಿಸಿತ್ತು. ಹೀಗಾಗಿ ಹಾಲಿ ದರಕ್ಕೆ ಹೋಲಿಸಿದಾಗ ಶೇ.10ರಷ್ಟು ಬಿಯರ್ ದರ ಹೆಚ್ಚಳವಾಗಲಿದೆ.
ಇದನ್ನೂ ಓದಿ : ಛೇ.. ಎಂಥಾ ನೀಚ ಕೃತ್ಯ…ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ ಗ್ಯಾಂಗ್ ರೇಪ್!
HOW TO APPLY : NEET-UG COUNSELLING 2023
1 Comment
good news website in malnad