ಹೋಟೆಲ್ ತಿಂಡಿ-ತಿನಿಸು ಇನ್ಮುಂದೆ ದುಬಾರಿ?!
– ತರಕಾರಿ, ಹಾಲು ಬಳಿಕ ಈಗ ಹೋಟೆಲ್ ದರ ಏರಿಕೆ
– ಆ.1ರಿಂದ ನೂತನ ದರ ಜಾರಿ: ಹೋಟೆಲ್ ಸಂಘ
– ಕಾಫಿ-ಟೀ ದರವೂ ಹೆಚ್ಚಳಕ್ಕೆ ನಿರ್ಧಾರ
NAMMUR EXPRESS NEWS
ಬೆಂಗಳೂರು: ತರಕಾರಿ, ಹಾಲು ಬಳಿಕ ಈಗ ಹೋಟೆಲ್ ಊಟ ತಿಂಡಿ, ಕಾಫಿ ಟೀ ಕೂಡ ದುಬಾರಿ ಆಗಲಿದೆ ಮ್ ಈ ಮೂಲಕ ಜನತೆಗೆ ಮತ್ತೊಂದು ಬರೆ ಬಿದ್ದಿದೆ. ಆಗಸ್ಟ್ 1ರಿಂದ ಹಾಲಿನ ದರ ಏರಿಕೆ ಹಿನ್ನೆಲೆ ಹೋಟೆಲ್ ತಿಂಡಿ-ತಿನಿಸು ದರ ಏರಿಕೆಗೆ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ಹೇಳಿಕೆ ನೀಡಿದ್ದಾರೆ.
ತಿಂಡಿ ಜೊತೆಗೆ ಕಾಫಿ-ಟೀ ದರವೂ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಕನಿಷ್ಟ ಶೇ.10ರಷ್ಟು ದರ ಏರಿಕೆ ನಿರ್ಧರಿಸಲಾಗಿದೆ. ಕೆಲ ಹೋಟೆಲ್ ನವರು ಶೇ. 20ರಷ್ಟು ಹೆಚ್ಚಿಸಬೇಕೆಂದು ಅಭಿಪ್ರಾಯಪಡುತ್ತಿದ್ದಾರೆ. ದರ ಹೆಚ್ಚು ಮಾಡಿದರೆ ಗ್ರಾಹಕರಿಗೂ ಕಷ್ಟ ಆಗಲಿದೆ. ಇದೇ ಜುಲೈ 25ರಂದು ಹೋಟೆಲ್ ಮಾಲಿಕರ ಸಂಘದ ಸಭೆಯಲ್ಲಿ ಚರ್ಚೆ ಆಗಲಿದೆ.
ಆಗಸ್ಟ್ 1ರಿಂದಲೇ ಹೋಟೆಲ್ ತಿಂಡಿ, ತಿನಿಸು, ಕಾಫಿ, ಟೀ ದರ ಹೆಚ್ಚಳ ಆಗಲಿದೆ. ಈ ಬಗ್ಗೆ ಜುಲೈ 25ರಂದು ಅಧಿಕೃತವಾಗಿ ಘೋಷಿಸಲಿದ್ದೇವೆ. ಶೇ.10ರಷ್ಟು ದರ ಹೆಚ್ಚು ಮಾಡೋದು ಅನಿವಾರ್ಯವಾಗಿದೆ ಎಂದು ರಾವ್ ಹೇಳಿದ್ದಾರೆ. ಕರ್ನಾಟಕ ಹಾಲು ಮಹಾಮಂಡಲವು ಪ್ರತಿ ಲೀಟರ್ ಹಾಲಿನ ದರವನ್ನು 3 ರು. ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಪರಿಷ್ಕೃತ ದರವು ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ಎಲ್ಲಾ ಮಾದರಿಯ ನಂದಿನಿ ಹಾಲಿನ ದರ ಪ್ರತಿ ಲೀಟರ್ಗೆ 3 ರು. ಹೆಚ್ಚಾಗಲಿದೆ.
ಇದನ್ನೂ ಓದಿ : ಕರಾವಳಿಯಲ್ಲಿ ಕೊರಗಜ್ಜನ ಪವಾಡ.!
HOW TO APPLY : NEET-UG COUNSELLING 2023