ಅಯ್ಯೋ ದೇವರೇ ಕಾಪಾಡು… 5 ದಿನ ಭಾರೀ ಮಳೆ!
– ಪ್ರವಾಹ, ನೆರೆ ಬಗ್ಗೆ ಗಮನ ಕೊಡದ ಸರ್ಕಾರಗಳು
– ಭೂಕುಸಿತ, ಅಪಾಯದ ಸೂಚನೆ ನೀಡಿದ ವಿಪತ್ತು ಪ್ರಾಧಿಕಾರ
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಮಳೆ ಅಬ್ಬರ ರೌದ್ರವತಾರ ತಾಳಿದೆ.
ಕರ್ನಾಟಕದಲ್ಲಿ ನಿರಂತರವಾಗಿ ಮಳೆ ಸುರಿಯಲು ಕಾರಣವಾಗಿರುವ ಅರಬ್ಬಿ ಸಮುದ್ರದಲ್ಲಿ ವೈಪರಿತ್ಯದ ತೀವ್ರ ಇಳಿಕೆ ಆದಂತಿಲ್ಲ. ಹೀಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಮಳೆ ಆರ್ಭಟಿಸುವ ಮುನ್ಸೂಚನೆ ದೊರೆತಿದೆ. ಆದ್ದರಿಂದ ಇನ್ನಷ್ಟು ಅಪಾಯಕಾರಿಯಾಗಲಿದೆ ಮಳೆ.
ಹವಾಮಾನ ಇಲಾಖೆ ಪ್ರಕಾರ, ಕಳೆದ ಎರಡು ದಿನದಲ್ಲಿ ಮುಂಗಾರು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇಳಿಕೆ ಆದಂತೆ ಕಂಡು ಬಂದಿತ್ತು. ಆದರೆ ವೈಪರಿತ್ಯಗಳ ತೀವ್ರತೆ ಹೆಚ್ಚಾಗಿದ್ದು, ಮತ್ತೆ ವಿವಿಧ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳವರೆಗೆ ಸಾಧಾರಣದಿಂದ ಭಾರೀ ಮಳೆ ಆಗುವ ಮುನ್ಸೂಚನೆ ದೊರಕಿದೆ.
ನಿರಂತರ ಸುರಿದ ಮುಂಗಾರು ಮಳೆ ಅಬ್ಬರದಿಂದ ರಾಜ್ಯದ ಬಹುತೇಕ ಎಲ್ಲ ನದಿಗಳು ಉಕ್ಕಿ ಹರಿಯಲು, ಜಲಾಶಯಗಳು ಭರ್ತಿಯಾಗಿವೆ. ತಗ್ಗು ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಯಾಗಿವೆ. ಮಲೆನಾಡು, ಕರಾವಳಿ ಭಾಗದಲ್ಲಿ ಮಳೆಗೆ ಗುಡ್ಡ ಕುಸಿದರೆ, ಉತ್ತರ ಕರ್ನಾಟಕ ಭಾಗದಲ್ಲಿ ನದಿ ತೀರದ ಪ್ರದೇಶಗಳಲ್ಲಿ ಗ್ರಾಮಗಳು ಮುಳುಗಡೆ ಆಗಿವೆ. ನೂರಾರು ಸೇತುವೆಗಳು ನೆಲಕಚ್ಚಿವೆ. ಗುಡ್ಡಗಳು, ಹೆದ್ದಾರಿಗಳು ಕುಸಿದು ಸಂಚಾರ ಅಸ್ತವೆಸ್ತವಾಗಿದೆ. ವಿದ್ಯುತ್ ಕಂಬಗಳು ಧರೆಗುರುಳಿ, ಜನರು ಪಡಬಾರದ ಕಷ್ಟವನ್ನೆಲ್ಲ ಪಟ್ಟಿದ್ದಾರೆ.
ಎಲ್ಲೆಲ್ಲಿ ಭಾರಿ ಮಳೆ, ಸಾಧಾರಣೆ ಮಳೆ?
ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಮತ್ತು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಅಲರ್ಟ್ ಕೊಡಲಾಗಿದೆ.ನಂತರ ಆಗಸ್ಟ್ 4ರವರೆಗೆ ಸಾಧಾರಣದಿಂದ ಭಾರೀ ಮಳೆ ಬರಲಿದೆ. ಇನ್ನೂ ಭಾರಿ ಮಳೆ ಹೊರತುಪಡಿಸಿದ ರಾಜ್ಯದ ಉತ್ತರ ಒಳನಾಡು, ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆ ಮುಂದುವರಿದಿದೆ. ಬಿಟ್ಟು ಬಿಡದಂತೆ ನಿತ್ಯವು ಮಳೆ ದರ್ಶನವಾಗುತ್ತಿದೆ. ಮುಂದಿನ ಐದು ದಿನವು ಆಯಾ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮುಂದುವರಿಯಲಿದೆ. ಭೂಕುಸಿತ, ಅಪಾಯದ ಸೂಚನೆಯನ್ನು ವಿಪತ್ತು ಪ್ರಾಧಿಕಾರ ನೀಡಿದೆ.