ಆನ್ಲೈನ್ ಲೋನ್ ಹೆಚ್ಚಾದ ಸಾವು!
– ಟಾರ್ಚರ್ ತಾಳಲಾರದೇ ಟಾಪ್ ವಿದ್ಯಾರ್ಥಿ ಆತ್ಮಹತ್ಯೆ
– ರಾಜ್ಯದಲ್ಲಿ ಆಪ್ ಸಾಲ, ಆಪ್ ಆಟಕ್ಕೆ ಯುವ ಜನತೆ ಸಾವು
– 4 ರಾಜ್ಯಗಳಲ್ಲಿ 8 ಯುವಕರ ಜತೆ ಮದ್ವೆ: ಚಿನ್ನದ ಜತೆ ಪರಾರಿಯಾದ ಲೇಡಿ!
NAMMUR EXPRESS NEWS
ಬೆಂಗಳೂರು: ವಿದ್ಯಾರ್ಥಿಯೋರ್ವ ಆನ್ಲೈನ್ನಲ್ಲಿ ಪಡೆದ ಸಾಲವನ್ನು ಹಿಂದುಗುಗಿಸಲು ಆಗದೆ ಅವರ ಟಾರ್ಚರ್ ತಾಳಲಾರದೇ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಸ್ನೇಹಿತರಿಗೆ ಸಹಾಯ ಮಾಡಲು ಸಾಲ ಪಡೆದು ಸಾಲದ ಸುಳಿಗೆ ಸಿಲುಕಿದ್ದ.
ತೇಜಸ್ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ತಾಯಿಯ ವೇಲ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತೇಜಸ್ ಸ್ನೇಹಿತ ಮಹೇಶನಿಗಾಗಿ ಕೆಲವರಿಂದ ಆನೈನ್ ಮೂಲಕ ಲೋನ್ ಪಡೆದಿದ್ದನು. ಅನಿವಾರ್ಯ ಕಾರಣದಿಂದ ಕಳೆದ 1 ವರ್ಷದಿಂದ ಸ್ನೇಹಿತ ಮಹೇಶ ಸಾಲದ ಇಎಂಐ ಕಟ್ಟಿರಲಿಲ್ಲ. ಇಎಂಐ ಕಟ್ಟದ ಹಿನ್ನೆಲೆಯಲ್ಲಿ ಲೋನ್ ನೀಡಿದವರು ತೇಜಸ್ಸಿಗೆ ಟಾರ್ಚರ್ ನೀಡಿದ್ದು, ಇದರಿಂದ ಮನನೊಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್ನೋಟ್ನಲ್ಲಿ “ನನ್ನ ತಪ್ಪಿಗೆ ಬೇರೆ ದಾರಿಯಿಲ್ಲ, ಸಾಲ ತೀರಿಸಲು ಆಗುವುದಿಲ್ಲ, ಅಪ್ಪ ಅಮ್ಮನನ್ನನ್ನ ಕ್ಷಮಿಸಿ. ಇದು ನನ್ನ ಕೊನೆ ತೀರ್ಮಾನ” ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಕರಣ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
4 ರಾಜ್ಯಗಳಲ್ಲಿ 8 ಯುವಕರ ಜತೆ ಮದ್ವೆ: ಕಿಲಾಡಿ ಲೇಡಿ.!
ಅವಿವಾಹಿತರನ್ನೇ ಟಾರ್ಗೆಟ್ ಮಾಡಿ ವಂಚನೆಯ ಬಲೆಗೆ ಬೀಳಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಯುವತಿಯೊಬ್ಬಳು ಎಂಟು ಮಂದಿಯನ್ನು ಮದುವೆಯಾಗಿ ವಂಚಿಸಿದ ಘಟನೆಯೊಂದರ ಕುರಿತು ವರದಿಯಾಗಿದೆ.
ಈ ಖತರ್ನಾಕ ಯುವತಿಯ ಹೆಸರು ರಶೀದಾ. ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಈಕೆ ಮದುವೆ ವಿಚಾರದಲ್ಲಿ ಯುವಕರನ್ನು ಯಾಮಾರಿಸಿದ್ದಾಳೆ. ಮದುವೆಯಾದ ಕೆಲವೇ ದಿನಗಳಲ್ಲಿ ಹಣ, ಚಿನ್ನಾಭರಣ ದೋಚಿ ಎಸ್ಕೆಪ್ ಆಗುತ್ತಿದ್ದಳು. ಇನ್ಸ್ಟಾಗ್ರಾಂ ಮೂಲಕ ತಮಿಳುನಾಡಿನ ಸೇಲಂ ಜಿಲ್ಲೆಯ ತಾರಮಂಗಲ ಮೂಲದ ಫೈನಾನ್ಶಿಯರ್ ಮೂರ್ತಿ ಎಂಬುವರು ರಶೀದಾಗೆ ಪರಿಚಯವಾಗಿದ್ದರು. ಈ ಪರಿಚಯ ಇಬ್ಬರ ನಡುವೆ ಮಾತುಕತೆಗಳ ತಿರುಗಿತ್ತು. ಬಳಿಕ ಪರಿಚಯ ಪ್ರೀತಿಗೆ ತಿರುಗಿ ರಶೀದಾ ಮೂರ್ತಿಯ ಮುಂದೆ ಮದುವೆ ಪ್ರಸ್ತುತ ಮಾಡಿದ್ದಳು. ಹುಡುಗಿ ನೋಡಲು ಸುಂದರವಾಗಿದ್ದರಿಂದ ಮೂರ್ತಿ ಕೂಡ ಮರು ಮಾತಾಡದೆ ಮದುವೆ ಓಕೆ ಎಂದರು.
ಕಳೆದ ಮಾರ್ಚ್ 30ರಂದು ಇಬ್ಬರ ಮದುವೆ ನಡೆದಿತ್ತು. ಆದರೆ, ಮದುವೆಯಾದ ಕೆಲ ದಿನಗಳ ಬಳಿಕ ರಶೀದಾ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಇತ್ತ ಮೂರ್ತಿ ಮನೆಯಲ್ಲಿ ಹಣ, ಚಿನ್ನಾಭರಣ ಕಾಣೆಯಾದ ಕುರಿತು ತಾನೂ ಮೋಸ ಹೋದೆ ಎಂದು ಅರ್ಥವಾಗಿತ್ತು. ಬಳಿಕ ಸ್ಥಳೀಯ ಠಾಣೆಗೆ ತೆರಳಿದ ಮೂರ್ತಿ ಆಕೆಯ ವಿರುದ್ಧ ದೂರು ನೀಡಿದರು. ದೂರಿನ ಹಿನ್ನೆಲೆ ತನಿಖೆಗಿಳಿದ ಪೊಲೀಸರು ರಶೀದಾಳ ಅಸಲಿ ಮುಖ ಬಯಲಿಗೆಳೆದಿದ್ದಾರೆ.
ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..? ಪ್ರಮುಖ ಮಾರುಕಟ್ಟೆಯಲ್ಲಿ ಏನಿದೆ ದರ?
HOW TO APPLY : NEET-UG COUNSELLING 2023