2 ಟನ್ ಟೊಮೆಟೋ ಹೊತ್ತೊಯ್ದಿದ್ದ ಕಳ್ಳರು!
– ನಾಲ್ವರು ಟೊಮೆಟೋ ಕಳ್ಳರ ಬಂಧನ: ಏನಿದು ಘಟನೆ?
– ಕುಡಿಯಲು ಹೋಗಿದ್ದಾಗ ಕಳ್ಳರು ವಾಹನ ಸಮೇತ ಕಳ್ಳತನ
NAMMUR EXPRESS NEWS
ಬೆಂಗಳೂರು: 2 ಟನ್ ಟೊಮೆಟೋ ಹೊತ್ತೊಯ್ದಿದ್ದ ಕಳ್ಳರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ನಾಲ್ವರು ಟೊಮೇಟೋ ಕಳ್ಳರನ್ನು ಬಂಧಿಸುವಲ್ಲಿ ಆರ್ಎಂಸಿ ಯಾರ್ಡ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ದಿನಾಂಕ ಜುಲೈ 10ರಂದು ರೈತರು ಚಿತ್ರದುರ್ಗದಿಂದ ಆರ್.ಎಂ.ಸಿ ಯಾರ್ಡ್ಗೆ ಟೊಮೆಟೋ ಲೋಡ್ ನಿಲ್ಲಿಸಿ, ಟೀ ಕುಡಿಯಲು ಹೋಗಿದ್ದಾಗ ಕಳ್ಳರು ವಾಹನ ಸಮೇತವಾಗಿ 2 ಟನ್ ಟೊಮೆಟೋ ಹೊತ್ತೊಯ್ದಿದ್ದರು.ಕಾರಿನಲ್ಲಿ ಬಂದಿದ್ದ ಮೂವರು ವಾಹನವನ್ನು ಹೈಜಾಕ್ ಮಾಡಿದ್ದರು.
ಟೊಮೆಟೋ ತುಂಬಿದ್ದ ಗಾಡಿ ಫಾಲೋ ಮಾಡಿ ಬಂದ ಆರೋಪಿಗಳು, ಆರ್.ಎಂ.ಸಿ ಯಾರ್ಡ್ ಬಳಿ ಅಡ್ಡ ಹಾಕಿ ರೈತನಿಗೆ ಅವಾಜ್ ಹಾಕಿದ್ದರು. ಗಾಡಿ ಟಚ್ ಆಗಿದೆ ಎಂದು ನಾಟಕ ಮಾಡಿ ಡ್ರೈವರ್ ಗೆ ಥಳಿಸಿದ್ದು, ನಂತರ ರೈತನ ಮೇಲೂ ಹಲ್ಲೆ ಮಾಡಿ ಹಣ ಕೊಡು ಬೆದರಿಸಿದ್ದರು. ಬಳಿಕ ಆನ್ ಲೈನ್ ಮೂಲಕ ಹಣ ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಾಹನವನ್ನು ಕದ್ದೊಯ್ದಿದ್ದರು.
ನಾಲ್ವರು ಆರೋಪಿಗಳು ಬೆಂಗಳೂರಲ್ಲಿ ವಾಹನವನ್ನು ಕದ್ದು ಬಳಿಕ ಟೊಮೆಟೋವನ್ನು ಚೆನ್ನೈಗೆ ಸಾಗಿಸಿ ಮಾರಾಟ ಮಾಡಿದ್ದಾರೆ. ಬಳಿಕ ಖಾಲಿ ವಾಹನವನ್ನು ಪೀಣ್ಯ ಬಳಿ ನಿಲ್ಲಿಸಿ ಪರಾರಿಯಾಗಿದ್ದರು. ಕಳೆದ 11 ದಿನಗಳಿಂದಲೂ ಈ ಪ್ರಕರಣದ ಹಿಂದೆ ಪೊಲೀಸರು ಬಿದ್ದಿದ್ದು ಸಿಸಿಟಿವಿ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಕರಾವಳಿಯಲ್ಲಿ ಕೊರಗಜ್ಜನ ಪವಾಡ.!
HOW TO APPLY : NEET-UG COUNSELLING 2023