ಆಭರಣ ಪ್ರಿಯರಿಗೆ ಬಿಗ್ ಶಾಕ್!
– ಚಿನ್ನದ ಬೆಲೆಯಲ್ಲಿ ಏರಿಕೆ: ಬಂಗಾರದ ಬೆಲೆ ಎಷ್ಟು?
– ಚಿನ್ನಾಭರಣಕ್ಕೆ ಡಿಮ್ಯಾಂಡ್: ಚಿನ್ನದಂಗಡಿಗೆ ಜನ
NAMMUR EXPRESS NEWS
ಬೆಂಗಳೂರು: ಅಷಾಢ ಮಾಸ ಮುಗಿಯುತ್ತಿದ್ದಂತೆ ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ.
ಆಷಾಢ ಮಾಸದಲ್ಲಿ ಶುಭ ಸಮಾರಂಭಗಳು ನಡೆಯುವುದ ಕಡಿಮೆ. ಹೀಗಾಗಿ ಚಿನ್ನ ಬೆಳ್ಳಿ ದರ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಇದೀಗ ಆಷಾಢ ಮುಗಿದಿದ್ದು ಈ ಬೆನ್ನಲ್ಲೆ ಆಭರಣಪ್ರಿಯರಿಗೆ ಕಹಿಸುದ್ದಿ ಸಿಕ್ಕಿದ್ದು ಚಿನ್ನದ ಬೆಲೆ ಏರಿಕೆಯಾಗಿದೆ. ಚಿನ್ನ, ಬೆಳ್ಳಿ ಬೆಲೆ ಆಗಾಗ್ಗೆ ಏರಿಕೆ ಇಳಿಕೆಯಾಗುತ್ತಿರುತ್ತದೆ. ಷೇರು ಮಾರುಕಟ್ಟೆಯಲ್ಲಿ ಏರಿಕೆ ಇಳಿಕೆಯ ಆಧಾರದ ಮೇಲೂ ಆಭರಣ – ದರದಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. ಬೆಂಗಳೂರಿನಲ್ಲಿ ಬಂಗಾರ, ಬೆಳ್ಳಿ ಬೆಲೆ ಎಷ್ಟಿದೆ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಆಭರಣ ದರ ಹೇಗಿದೆ ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಇಂದಿನ ಚಿನ್ನ ಬೆಳ್ಳಿ ಬೆಲೆ ವಿವರ ಹೀಗಿದೆ ನೋಡಿ..
ಒಂದು ಗ್ರಾಂ ಚಿನ್ನ :
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 5,510
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 6,010
ಎಂಟು ಗ್ರಾಂ ಚಿನ್ನ:
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 44,080
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 48,080
ಹತ್ತು ಗ್ರಾಂ ಚಿನ್ನ :
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 55,100
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. – 60,100
ನೂರು ಗ್ರಾಂ ಚಿನ್ನ:
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 5,51,000
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 6,01,000
ಬೆಂಗಳೂರು ಹಾಗೂ ಇತರೆ ಕಡೆಗಳಲ್ಲಿ ಇಂದಿನ ಚಿನ್ನದ ಬೆಲೆ ಹೀಗಿದೆ:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 55,100 ಆಗಿದ್ದು ಮಂಗಳವಾರಕ್ಕಿಂತ ಬೆಲೆ ಹೆಚ್ಚಾಗಿದೆ. ಇನ್ನು ದೇಶದ ಪ್ರಮುಖ ಮೆಟ್ರೋಪಾಲಿಟನ್ ನಗರಗಳಾದ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಕ್ರಮವಾಗಿ ಚಿನ್ನದ ಬೆಲೆ ರೂ. 55,360,ರೂ 55,100 ರೂ 55,100 d. ರೂ.ಅದೇ ರೀತಿ, ರಾಷ್ಟ್ರ ರಾಜಧಾನಿ ಹೊಸ ದೆಹಲಿಯಲ್ಲಿ ಚಿನ್ನದ ಬೆಲೆ ಮಂಗಳವಾರ 55,130 ರೂ. ಆಗಿದ್ದು, ದೆಹಲಿ ಹೊರತುಪಡಿಸಿ ಉಳಿದೆಡೆ ಬೆಲೆಯಲ್ಲಿ ಹೆಚ್ಚಾಗಿದೆ.
ಇಂದಿನ ಬೆಳ್ಳಿ ದರ:
ಇನ್ನು ದೇಶದಲ್ಲಿ ಮಂಗಳವಾರಕ್ಕೆ ಹೋಲಿಸಿದರೆ ಬೆಳ್ಳಿ ದರದಲ್ಲಿ ಏರಿಕೆ – ಇಳಿಕೆಯಾಗಿಲ್ಲ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ – ಇಳಿಕೆಯಾದಂತೆಯೂ ಚಿನ್ನ – ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.
ದೇಶಾದ್ಯಂತ ಇಂದು ಬಂಗಾರದ ದರದಲ್ಲಿ ಏರಿಕೆಯಾಗಿದ್ದರೆ, ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 770, ರೂ. 7,700 ಹಾಗೂ ರೂ. 77,000 ಗಳಾಗಿವೆ.
ಇದನ್ನೂ ಓದಿ : ಆಗುಂಬೆ ಘಾಟಿ ಮೇಲೆ ನಿಂತಿದ್ದವನಿಗೆ ಗುದ್ದಿದ ಟ್ರಾಕ್ಟರ್
HOW TO APPLY : NEET-UG COUNSELLING 2023