- ಜೈಲಿಗೆ ಯಾರೂ ಭೇಟಿ ನೀಡಿಲ್ಲ: ಅಧಿಕಾರಿಗಳ ಮಾಹಿತಿ
- ಕರೋನಾ ಭಯ, ಇನ್ನೊಂದ್ ಕಡೆ ಡ್ರಗ್ಸ್ ಲಿಂಕ್ ಭಯ!
ಬೆಂಗಳೂರು: ರಾಜ್ಯದ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಂಜನಾ ಮತ್ತು ರಾಗಿಣಿ ಬಂಧನಕ್ಕೆ ಒಳಗಾಗಿದ್ದಾರೆ. ಈವರೆಗೆ ಅವರನ್ನು ಭೇಟಿಯಾಗಲು ಪರಪ್ಪನ ಅಗ್ರಹಾರಕ್ಕೆ ಯಾರೂ ಭೇಟಿ ನೀಡಿಲ್ಲ. ಮನೆಯವರನ್ನು ಬಿಟ್ಟು ಇತರರು ಭೇಟಿ ನೀಡಿಲ್ಲ ಎನ್ನಲಾಗಿದೆ. ಡ್ರಗ್ಸ್ ರಾಣಿಯರ ಭೇಟಿಗೆ ಯಾರಿಗೂ ಮನಸ್ಸಿಲ್ಲ..? ಎಂಬುದಕ್ಕಿಂತ ಮುಖ್ಯ ಇಲ್ಲಿ
ಒಂದು ಕಡೆ ಕರೋನಾ ಭಯ, ಇನ್ನೊಂದ್ ಕಡೆ ಡ್ರಗ್ಸ್ ಲಿಂಕ್ ಭಯ!. ಈ ನಟಿಯರನ್ನು ಭೇಟಿ ಮಾಡಿದರೆ ಎಲ್ಲಿ ತಾವು ತಗಲಾಕಿಕೊಳ್ಳುತ್ತೇವೋ ಎಂಬ ಭಯ ಈಗ ಎಲ್ಲರನ್ನೂ ಕಾಡಿದೆ.
ನಟಿಯರ ಭೇಟಿಗೆ ಯಾರೆಲ್ಲ ಭೇಟಿ ನೀಡಿದ್ದಾರೆ ಎಂಬ ಮಾಹಿತಿಯನ್ನು ಕೋರಿ ಟಿ.ನರಸಿಂಹಮೂರ್ತಿ ಎಂಬುವವರು ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಉತ್ತರ ನೀಡಿರುವ ಜೈಲು ಅಧಿಕಾರಿಗಳು, ಈವರೆಗೆ ರಾಗಿಣಿ ಮತ್ತು ಸಂಜನಾರನ್ನು ಯಾರೂ ಭೇಟಿ ಆಗಿಲ್ಲ ಎಂದು ತಿಳಿಸಿದ್ದಾರೆ. ಎಲ್ಲೆಡೆ ಕರೋನಾ ವೈರಸ್ ಹಾವಳಿ ಹೆಚ್ಚಾಗಿದೆ. ಜೈಲಿನಂತಹ ಜಾಗದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕಾಗಿರುವುದು ಅಗತ್ಯ. ಆ ಕಾರಣಕ್ಕಾಗಿ, ಜೈಲಿನಲ್ಲಿರುವವರನ್ನು ಭೇಟಿ ಮಾಡಲು ಹೊರಗಡೆಯಿಂದ ಯಾವುದೇ ವ್ಯಕ್ತಿಗಳಿಗೂ ಅನುಮತಿ ನೀಡಲಾಗುತ್ತಿಲ್ಲ ಎಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಪೆÇಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡ್ರಗ್ಸ್ ಜಾಲದ ಜೊತೆ ನಂಟು ಹೊಂದಿದ್ದಾರೆ ಎಂಬ ಆರೋಪದ ಮೇಲೆ ನಟಿ ರಾಗಿಣಿ ಅವರ ಮನೆ ಮೇಲೆ ದಾಳಿ ಮಾಡಿದ್ದ ಸಿಸಿಬಿ ಅಧಿಕಾರಿಗಳು ಸೆ.4ರಂದು ಅವರನ್ನು ಬಂಧಿಸಿದ್ದರು. ಕೆಲವೇ ದಿನಗಳ ನಂತರ, ಅಂದರೆ ಸೆ.8ರಂದು ಸಂಜನಾ ಮನೆ ಮೇಲೆ ಕೂಡ ದಾಳಿ ಮಾಡಿ, ಅವರನ್ನು ವಶಕ್ಕೆ ಪಡೆಯಲಾಯಿತು. ಈ ಇಬ್ಬರೂ ನಟಿಯರು ಈಗ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಜಾಮೀನು ಪಡೆಯಲು ಮಾಡುತ್ತಿರುವ ಎಲ್ಲ ಪ್ರಯತ್ನಗಳು ವಿಫಲ ಆಗುತ್ತಿವೆ. ಇತ್ತೀಚೆಗೆ ಇದೇ ಕೇಸ್ನಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಆಡಂ ಪಾಷಾ ಬಂಧನ ಕೂಡ ಆಗಿದೆ. ಆದರೆ ಈತನನ್ನು ಯಾವ ಸೆಲ್ನಲ್ಲಿ ಹಾಕುವುದು ಎಂಬುದೂ ಗೊಂದಲ ಇತ್ತಂತೆ. ಇನ್ನು ಡ್ರಗ್ಸ್ ಕೇಸಲ್ಲಿ ಖ್ಯಾತ ನಟಿ ಅನುಶ್ರೀ, ಅಕುಲ್ ಬಾಲಾಜಿ ಸೇರಿದಂತೆ ಹಲವು ನಟ-ನಟಿಯರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಚುನಾವಣೆ, ಮಳೆ ಹಿನ್ನೆಲೆ ಕೆಲವು ದಿನಗಳಿಂದ ಈ ಕೇಸ್ ತಣ್ಣಗಾಗಿದೆ.