- ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ “ಗ್ರೀನ್ ಸಿಗ್ನಲ್”
- ನ.11ರ ಒಳಗೆ ಚುನಾವಣೆ: ಅಧಿಕಾರ ಸ್ವೀಕಾರ
- ಇನ್ನೂ ಕೆಲವೆಡೆ ಚುನಾವಣೆ ಆಗಿಲ್ಲ: ಜನತೆಗೆ ಸಂಕಷ್ಟ
ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ತೆರವುಗೊಳಿಸಿತ್ತು. ಈ ಮೂಲಕ ಚುನಾವಣೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಇದರ ಬೆನ್ನಲ್ಲೇ ನವೆಂಬರ್ 11ರೊಳಗೆ ಸ್ಥಳೀಯ ಸಂಸ್ಧೆಗಳ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಸುವಂತೆ ರಾಜ್ಯ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆ ರಾಜ್ಯದ ಡಿಸಿ, ಎಸಿ, ತಹಶೀಲ್ದಾರ್ ಗಳಿಗೆ ಆದೇಶ ಹೊರಡಿಸಿದ್ದು, ಹೈಕೋರ್ಟ್ ಸೂಚನೆಯ ಮೇರೆಗೆ ನವೆಂಬರ್ 11ರ ಒಳಗೆ ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸುವಂತೆ ಸೂಚಿಸಿದೆ.
ಹೀಗಾಗಿ ರಾಜ್ಯದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ ಸಂಬಂಧ ನವೆಂಬರ್ 11ರ ಒಳಗೆ ಚುನಾವಣೆ ನಡೆಯಲಿದೆ. ಈ ಮೂಲಕ ಸದ್ಯದಲ್ಲಿಯೇ ಚುನಾವಣಾ ದಿನಾಂಕ ಕೂಡ ಘೋಷಣೆಯಾಗಲಿದೆ ಎಂದು ಹೇಳಲಾಗುತ್ತಿದೆ.