ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ: ಪಂಜಿನ ಮೆರವಣಿಗೆ!
– ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆಗೆ ಕರೆ
– ಕಾಫಿ ನಾಡಲ್ಲಿ ಪ್ರತಿಭಟನೆ
NAMMUR EXPRESS NEWS
ಮೂಡಿಗೆರೆ: ಬಾಂಗ್ಲಾದೇಶದಲ್ಲಾಗುತ್ತಿರುವ ಹಿಂದೂಗಳ ಮೇಲಿನ ಸತತ ದೌರ್ಜವನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾವತಿಯಿಂದ ಪಂಜಿನ ಮೆರವಣಿಗೆಯ ಪ್ರತಿಭಟನೆಗೆ ಕರೆಕೊಟ್ಟಿದೆ.ಜಿಲ್ಲೆಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಪ್ರತಿಭಟನೆ ನಡೆಯಲಿದ್ದು ಈ ಹಿಂಸಾತ್ಮಕ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದೆ.
ಶನಿವಾರ ಸಂಜೆ ಮೂಡಿಗೆರೆಯ ಬಿಜೆಪಿ ಯುವಮೋರ್ಚಾ ವತಿಯಿಂದ ನಗರದ ಲಯನ್ಸ್ ವೃತ್ತದಲ್ಲಿ ಈ ದೌರ್ಜನ್ಯದ ವಿರುದ್ಧ ಪಂಜಿನ ಪ್ರತಿಭಟನೆಯನ್ನು ನಡೆಸಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ನಾಯಕ ದೀಪಕ್ ದೊಡ್ಡಯ್ಯ,ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಮೂಡಿಗೆರೆ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ,ಯುವ ಮೋರ್ಚಾ ಅಧ್ಯಕ್ಷ ತಾರೇಶ್,ಪ್ರಧಾನಕಾರ್ಯದರ್ಶಿಗಳಾದ ಅಭಿಷೇಕ್ ಜಾವಳಿ,ಶಶಿ ಕೇಲ್ಲೂರು ಸೇರಿದಂತೆ ತಾಲೂಕಿನ ಎಲ್ಲಾ ಕಾರ್ಯಕರ್ತರು ಪಾಲ್ಗೊಂಡು ಪಂಜನ್ನು ಹಿಡಿದು ಸಾಗುವ ಮುಖಾಂತರ ಘಟನೆಯನ್ನು ಖಂಡಿಸಲಾಯಿತು.