ಪ್ರವಾಸಕ್ಕೆಂದು ಬಂದು ಪ್ರಪಾತಕ್ಕೆ ಬಿದ್ದು ಸಾವು!
– 3 ಸಾವಿರ ಅಡಿ ಕೆಳಗೆ ಶವ ಪತ್ತೆ: ಏನಿದು ಘಟನೆ?
– ಶಿಕಾರಿಪುರ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ
– ಇಬ್ಬರು ಪ್ರಾಥಮಿಕ ಶಾಲೆ ಶಿಕ್ಷಕರು ಸಸ್ಪೆಂಡ್
NAMMUR EXPRESS NEWS
ಮೂಡಿಗೆರೆ: ರಾಜಧಾನಿಯಿಂದ ಪ್ರವಾಸಕ್ಕೆಂದು ಬಂದು ಕಣ್ಮರೆಯಾಗಿದ್ದ ಯುವಕನ ಶವ 3 ಸಾವಿರ ಅಡಿ ಪ್ರಪಾತದಲ್ಲಿ ಪತ್ತೆಯಾಗಿರುವ ಘಟನೆ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಸಮೀಪ ಇರುವ ರಾಣಿಜರಿ ವ್ಯೂ ಪಾಯಿಂಟ್ ಬಳಿ ನಡೆದಿದೆ. ಬೆಂಗಳೂರು ಮೂಲದ ಯುವಕ ಭರತ್ (30) ಪ್ರವಾಸಕ್ಕೆಂದು ಕಣ್ಮರೆಯಾಗಿದ್ದು, ದುರ್ಗದಹಳ್ಳಿ ಸಮೀಪ ಇರುವ ರಾಣಿಜರಿ ವ್ಯೂಪಾಯಿಂಟ್ ಬಳಿ ಬೈಕ್ ನಿಲ್ಲಿಸಿ ಬೈಕ್ ಹಿಂಬದಿಯಲ್ಲಿ ತನ್ನ ಐಡಿ ಕಾರ್ಡ್ ಸಿಕ್ಕಿಸಿ, ಬ್ಯಾಗನ್ನು ಇಟ್ಟು, ಟೀ ಶರ್ಟ್ ನೇತು ಹಾಕಿ ಯುವಕ ನಾಪತ್ತೆಯಾಗಿದ್ದ. ಈ ಸಂಬಂಧ ಪೊಲೀಸ್ ಇಲಾಖೆ ಹಾಗೂ ಸಮಾಜ ಸೇವಕ ಆರೀಫ್ ಶೋಧ ಕಾರ್ಯ ನಡೆಸಿ, ಕಣ್ಮರೆಯಾದ ಭರತ್ 3 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆಯಾಗಿದೆ. ಆತ್ಮಹತ್ಯೆಯೋ..?, ಆಕಸ್ಮಿಕವೋ ತನಿಖೆಯಿಂದ ತಿಳಿದು ಬರಬೇಕಿದೆ. ಪೊಲೀಸ್ ಇಲಾಖೆ, ಊರಿನ ಗ್ರಾಮಸ್ಥರು, ಧರ್ಮಸ್ಥಳ ಶೌರ್ಯ ವಿಪತ್ತು, ಸಮಾಜ ಸೇವಕ ಆರೀಫ್, ಇದ್ದರು
ವಿದ್ಯಾರ್ಥಿಯರಿಗೆ ಲೈಂಗಿಕ ಕಿರುಕುಳ: ಇಬ್ಬರು ಅಮಾನತು
ಶಿಕಾರಿಪುರ: ಶಾಲಾ ವಿದ್ಯಾರ್ಥಿನಿಯರಿಗೆ ಶಿಕ್ಷಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತು ಮಾಡಲು ಡಿಡಿಪಿಐ ಆದೇಶಿಸಿದ್ದಾರೆ. ಶಿಕಾರಿಪುರ ಸೊಪ್ಪಿನಕೇರಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಹಾಯಕ ಶಿಕ್ಷಕ ಶಾಂತಕುಮಾರ್ ಹಾಗೂ ಮುಖ್ಯ ಶಿಕ್ಷಕ ನಾಗರಾಜ್ ಕೋರಿ ಅವರನ್ನು ಅಮಾನತುಗೊಳಿಸಲಾಗಿದೆ. ಶಿಕ್ಷಕ ಶಾಂತಕುಮಾರ್ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದ್ದು, ಪ್ರಕರಣದ ಬಗ್ಗೆ ದೂರು ನೀಡಿದರೂ ಗಂಭೀರವಾಗಿ ಪರಿಗಣಿಸದೇ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆಪಾದನೆಯಿಂದಾಗಿ ಮುಖ್ಯ ಶಿಕ್ಷಕನನ್ನೂ ಅಮಾನತು ಮಾಡಲಾಗಿದೆ.
ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿತ್ತು. ಈ ನಡುವೆ ಬಂದ ಆರೋಪಗಳ ಅಧಾರದ ಮೇಲೆ ಬಿಇಒ ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಡಿಡಿಪಿಐ ಅವರಿಗೆ ವರದಿ ನೀಡಿದ್ದರು. ಇದರ ಆಧಾರದ ಮೇಲೆ ಕ್ರಮಕೈಗೊಳ್ಳಲಾಗಿದೆ.