ತಡರಾತ್ರಿ ಕಾಡಾನೆ ಹಿಡಿದರು!
– ಮೂಡಿಗೆರೆಯ ಕುಂದೂರು ಸಮೀಪ ಸೆರೆಯಾದ ಕಾಡಾನೆ
– ಕಿಲ್ಲರ್ ಸಲಗ ಇನ್ನು ಸೆರೆ ಸಿಕ್ಕಿಲ್ಲ.. ಹಾಗಾದ್ರೆ ಸಿಕ್ಕಿದ್ದು ಯಾವುದು?
NAMMUR EXPRESS NEWS
ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನಲ್ಲಿ ಆನೆ ದಾಳಿಯಿಂದ ನಾಗರೀಕರು ಸಾವನ್ನಪ್ಪಿರುವ ಪ್ರಕರಣದ ಬಳಿಕ ಆನೆ ಸೆರೆಗೆ ಸಿಎಂ ಸೂಚನೆ ನೀಡಿದ್ದು ಇದೀಗ ತಡರಾತ್ರಿವರೆಗೂ ನಡೆದ ಕಾಡಾನೆ ಸೆರೆ ಕಾರ್ಯಾಚರಣೆಯ ಬಳಿಕ ಆನೆಯೊಂದನ್ನು ಸೆರೆ ಹಿಡಿಯಲಾಗಿದೆ. ಮೂಡಿಗೆರೆಯ ಕುಂದೂರು ಸಮೀಪ ಸೆರೆಯಾದ ಕಾಡಾನೆ ಸೆರೆಯಾಗಿದೆ. ಅರವಳಿಕೆ ಚುಚ್ಚು ಮದ್ದು ನೀಡಿದ್ದ ಇಲಾಖೆ ಆನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ನಾಗರಿಕರನ್ನು ಬಲಿ ಪಡೆದ ಆನೆಯನ್ನು ಬಿಟ್ಟು ಬೇರೆಯೊಂದು ಆನೆಯನ್ನು ಹಿಡಿಯಲಾಗಿದೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ.
ಗುರುವಾರ ಮಧ್ಯಾಹ್ನ ಕುಂದೂರು ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ಬೆನ್ನು ಹತ್ತಿದ್ದ ಸಿಬ್ಬಂದಿ, ನಿರಂತರ ಕಾರ್ಯಾಚರಣೆ ಬಳಿಕ ತಡರಾತ್ರಿ ಒಂಟಿ ಸಲಗವನ್ನು ಹಿಡಿದಿದ್ದಾರೆ.ಆದರೆ, ಇಬ್ಬರನ್ನ ಕೊಂದ ಒಂಟಿ ಸಲಗ ಬಿಟ್ಟು ಬೇರೆ ಆನೆ ಸೆರೆ ಹಿಡಿಯಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಸೆರೆಯಾದ ಕಾಡಾನೆ ಯಾವುದು ಅಂತ ಅರಣ್ಯ ಇಲಾಖೆ ಸ್ಪಷ್ಟನೆ ನೀಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಇನ್ನೂ ಕೂಡ ಅರಣ್ಯ ಇಲಾಖೆ ಕಾರ್ಯಚರಣೆ ಮುಂದುವರೆಸಲಿದೆ ಎಂದು ಹೇಳಲಾಗಿದೆ