ದತ್ತ ಜಯಂತಿಗೆ ಚಿಕ್ಕಮಗಳೂರು ಹೈ ಅಲರ್ಟ್..!
– ಡಿ.13, 14 ರಂದು ಮದ್ಯ ಮಾರಾಟ ನಿಷೇಧ
– ಡಿ.14 ರಂದು ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಗಿರಿಭಾಗಕ್ಕೆ ತೆರಳಲು ಅವಕಾಶ
– ಭದ್ರಾ ಹಿನ್ನೀರಿಗೆ 14 ಲಕ್ಷ ಮೀನು ಮರಿ ಬಿಟ್ಟ ಶಾಸಕ!
– ಎನ್.ಆರ್ ಪುರ ತಾಲೂಕಿನ ಭದ್ರಾ ಹಿನ್ನೀರು: ರಾಜೇಗೌಡರಿಂದ ಕ್ರಮ
NAMMUR EXPRESS NEWS
ಚಿಕ್ಕಮಗಳೂರು: ಡಿ.12 ರಿಂದ 14 ರವರೆಗೆ ನಡೆಯಲಿರುವ ದತ್ತ ಜಯಂತಿ ಅಂಗವಾಗಿ ಮೂಲ ಸೌಲಭ್ಯಗಳು ಸೇರಿದಂತೆ ಭದ್ರತೆ ಕುರಿತು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಂಡಿದೆ. ಡಿ.12ರಂದು ಸಂಕೀರ್ತನಾ ಯಾತ್ರೆ, 13ರಂದು ಶೋಭಾಯಾತ್ರೆ, 14 ರಂದು ಭಕ್ತರಿಂದ ದತ್ತಪಾದುಕೆ ದರ್ಶನ ಕಾರ್ಯಕ್ರಮ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ, ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಮೂಲ ಸೌಲಭ್ಯಗಳ ವ್ಯವಸ್ಥೆ ಮಾಡಲಾಗುತ್ತಿದೆ.
ಮಳೆ ಕಾರಣದಿಂದ ಗಿರಿಭಾಗದ ಹಲವು ಕಡೆಗಳಲ್ಲಿ ರಸ್ತೆ ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ಲಾಂಗ್ ಚಾರ್ಸಿ ವಾಹನಗಳ ಓಡಾಟಕ್ಕೆ ನಿಷೇಧ ಹಾಕಲಾಗಿದೆ. ದೂರದ ಊರುಗಳಿಂದ ದೊಡ್ಡ ವಾಹನಗಳಲ್ಲಿ ಬರುವ ಭಕ್ತರಿಗೆ ಅಲ್ಲಂಪುರ ಹಾಗೂ ಕೈಮರದಿಂದ ಕೆಎಸ್ಆರ್ಟಿಸಿ ವತಿಯಿಂದ ಮಿನಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಡಿ.14 ರಂದು ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಗಿರಿಭಾಗಕ್ಕೆ ತೆರಳಲು ಅವಕಾಶ ನೀಡಲಾಗಿದೆ. ಡಿ.13, 14 ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು.
ಭದ್ರಾ ಹಿನ್ನೀರಿಗೆ 14 ಲಕ್ಷ ಮೀನು ಮರಿ ಬಿಟ್ಟ ಶಾಸಕ!
ಎನ್ ಆರ್ ಪುರ ತಾಲೂಕಿನ ಮೀನು ಕ್ಯಾಂಪ್ ಬಳಿಯ ಭದ್ರಾ ಹಿನ್ನೀರಿಗೆ ವಿವಿಧ ಜಾತಿಯ 14 ಲಕ್ಷ ಮೀನು ಮರಿಗಳನ್ನು ಶಾಸಕ ಟಿ.ಡಿ ರಾಜೇಗೌಡ ಬಿಟ್ಟರು.