ಶೃಂಗೇರಿಯಲ್ಲಿ ಜಾನಪದ ಕಲೆಗಳ ತರಬೇತಿ
– ಕನ್ನಡ ಜಾನಪದ ಪರಿಷತ್ ವತಿಯಿಂದ ತರಬೇತಿ ಶಿಬಿರ
* ಶೃಂಗೇರಿ ಪಿಎಸ್ಐ ಮೋಹನ್ ಉದ್ಘಾಟನೆ, ಸುಧೀರ್ ಕುಮಾರ್ ಮುರೊಳ್ಳಿಯವರಿಂದ ಉಪನ್ಯಾಸ
* 4 ದಿನಗಳ ಕಾಲ ನಡೆಯಲಿರುವ ತರಬೇತಿ
NAMMUR EXPRESS NEWS
ಶೃಂಗೇರಿ: ಶೃಂಗೇರಿ ತಾಲೂಕಿನ ಶ್ರೀಜೆಸಿಬಿಎಂ ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್ ವತಿಯಿಂದ 4 ದಿನಗಳ ಕಾಲ ಜಾನಪದ ಕಲೆಗಳ ತರಬೇತಿ ಶಿಬಿರ ಯಶಸ್ವಿಯಾಗಿ ನಡೆಯುತ್ತಿದೆ.
ನ.19 ರಂದು ಬೆಳಿಗ್ಗೆ 10 ಗಂಟೆಗೆ ಶೃಂಗೇರಿ ಪೋಲೀಸ್ ಠಾಣೆಯ ಪಿಎಸ್ಐ ಸಿ.ಆರ್ ಮೋಹನ್ ರಾಜಣ್ಣರವರು ಉದ್ಘಾಟಿಸಿದರು.
ಜನಪದದಲ್ಲಿ ಸತ್ವ ತತ್ವ ದರ್ಶನ ಎಂಬ ವಿಷಯವಾಗಿ ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷರಾದ ಓಣಿತೋಟ ರತ್ನಾಕರ್,ಪಟ್ಟಣ ಪಂಚಾಯ್ತಿ ಅಧ್ಯಕ್ಷ ವೇಣುಗೋಪಾಲ್, ಕಾಲೇಜಿನ ಉಪಪ್ರಾಂಶುಪಾಲರಾದ ಎ.ಜಿ ಪ್ರಶಾಂತ್ ಭಾಗವಹಿಸಿದ್ದರು. ನಾಲ್ಕುದಿನದ ಕಾರ್ಯಕ್ರಮದಲ್ಲಿ ಉಮಾ ಚಂದ್ರಶೇಖರ್,ಸುನೀತಾ ಮೋಹನ್ ಪ್ರಭು,ಉದಯ್ ಮೆಣಸೆ,ಜೆಸಿಐ ತಾಲೂಕು ಅಧ್ಯಕ್ಷರಾದ ವಿಎಸ್ಎ ಅಶೋಕ್ರವರುಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಯಾವ್ಯಾವ ಜನಪದ ಕಲೆಗಳ ತರಬೇತಿ..?
ನ.19 ರಂದು ಮೆಣಸೆಯ ಜ್ಞಾನಜ್ಯೋತಿ ಭಜನಾ ಮಂಡಳಿಯಿಂದ ಭಜನಾ ತರಬೇತಿ ಮತ್ತು ಕೌಸ್ತುಭರವರಿಂದ ದೀಪಾವಳಿಯಲ್ಲಿ ಅಂಟಿಗೆ ಪಿಂಟಿಗೆ ಜಾನಪದ ಕಲೆಯ ಬಗ್ಗೆ ಅರಿವು ನಡೆಯಿತು.
ನ.20 ರಂದು ಕಲಾವಿದ ಪ್ರದೀಪ್ ಯಡದಾಳು ಮತ್ತು ಕಣದಮನೆ ಜಗದೀಶ್ ಅವರಿಂದ ಜಾನಪದ ಗೀತೆಗಳನ್ನು ಹಾಡುವ ಕಲೆಯ ತರಬೇತಿಯನ್ನು ನೀಡಲಾಯಿತು.
ನ.21 ಹಾಗೂ 22 ರಂದು ಕಲಾವಿದೆ ಸುನೀತಾ ನವೀನ್ ಗೌಡರವರಿಂದ ಕೋಲಾಟ ನೃತ್ಯ ತರಬೇತಿ ನೀಡಲಾಯಿತು.
ಮುಂದಿನ ದಿನಗಳಲ್ಲಿ ತಾಲೂಕಿನ ವಿವಿಧ ಕಾಲೇಜುಗಳಲ್ಲಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಆಶೀಶ್ ದೇವಾಡಿಗ ತಿಳಿಸಿದ್ದಾರೆ.