ಕಾನೂನು ಸಮರದಲ್ಲಿ ಮಾಜಿ ಶಾಸಕ ಜೀವರಾಜ್ ಮೇಲುಗೈ!
– ಸುಪ್ರೀಂ ಕೋರ್ಟ್ ಆದೇಶ ಎತ್ತಿಹಿಡಿದ ಹೈಕೋರ್ಟ್
– ಶಾಸಕ ರಾಜೇಗೌಡ ಸಲ್ಲಿಸಿದ್ದ ಅರ್ಜಿ ವಜಾ: ಶಾಸಕರಿಗೆ ಹಿನ್ನಡೆ ಆಗುತ್ತಾ?
NAMMUR EXPRESS NEWS
ಎನ್.ಆರ್. ಪುರ: ಮಾಜಿ ಶಾಸಕ ಡಿ.ಎನ್.ಜೀವರಾಜ್ ಪ್ರಾರಂಭಿಸಿದ ಕಾನೂನು ಹೋರಾಟದಲ್ಲಿ ಮತ್ತೊಮ್ಮೆ ಜಯ ದೊರಕಿದೆ. ಈ ಹಿಂದಿನ ಚುನಾವಣಾ ಮತ ಎಣಿಕೆ ಸಂದರ್ಭದಲ್ಲಿ ಲೋಪವಾಗಿದೆ ಎಂದು ಜೀವರಾಜ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸದಂತೆ ಶಾಸಕ ಟಿ.ಡಿ ರಾಜೇಗೌಡ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ರಾಜೇಗೌಡರ ಅರ್ಜಿಯನ್ನು ತಿರಸ್ಕರಿಸಿ ಜೀವರಾಜ್ರವರ ವಾದ ಸರಿಯಿದೆ ಈ ವಿಷಯದಲ್ಲಿ ಹೈಕೋರ್ಟ್ ತೀರ್ಮಾನಿಸಲಿ ಎಂದು ಆದೇಶಿಸಿತ್ತು. ನಂತರ ಶಾಸಕ ರಾಜೇಗೌಡ ಹೈಕೋರ್ಟ್ನಲ್ಲಿ ಜೀವರಾಜ್ ಸಲ್ಲಿಸಿದ ಚುನಾವಣಾ ತಕರಾರು ಅರ್ಜಿಯನ್ನು ಪುರಸ್ಕರಿಸದಂತೆ ಹಾಗೂ ರದ್ದು ಮಾಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ರಾಜೇಗೌಡರ ಮನವಿಯನ್ನು ತಿರಸ್ಕರಿಸಿ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.ಹಾಗೂ ಮಾಜಿ ಶಾಸಕ ಡಿ.ಎನ್ ಜೀವರಾಜ್ ವಾದ,ದಾಖಲಾತಿ ಸಮ್ಮತವಾಗಿದೆ ಎಂದು ತೀರ್ಪು ನೀಡಿದೆ. ಈ ಮೂಲಕ ಮಾಜಿ ಶಾಸಕ ಡಿ.ಎನ್ ಜೀವರಾಜ್ಗೆ ಕಾನೂನು ಸಮರದಲ್ಲಿ ಇನ್ನೊಂದು ಹೆಜ್ಜೆ ಜಯ ದೊರೆತಂತಾಗಿದೆ.