ದ್ವೇಷಕ್ಕೆ ಬೆಂಕಿ ಹಚ್ಚಿ ಸಾಯಿಸಿದರು!
– ಶಿವಮೊಗ್ಗದಲ್ಲಿ ನಡೆದ ಘಟನೆ: ಏನಿದು ಕೇಸ್
– ಚಿಕ್ಕಮಗಳೂರು ಲಾಯರ್ ಮೇಲೆ ಹಲ್ಲೆ ಕೇಸ್: 4 ಜನ ಪೊಲೀಸ್ ವಿರುದ್ಧ ಪ್ರಕರಣ
NAMMUR EXPRESS NEWS
ಶಿವಮೊಗ್ಗ ಹೊರವಲಯದ ಬೆಳಲಕಟ್ಟೆ ಸನಿಹ ದ್ವೇಷಕ್ಕೆ ವ್ಯಕ್ತಿ ಒಬ್ಬರ ಮೇಲೆ ಬೆಂಕಿ ಹಚ್ಚಿ ಸಾಯಿಸಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಬೆಂಕಿಗೆ ಸಿಲುಕಿದ ವ್ಯಕ್ತಿ ಮಲಗಿ ಒದ್ದಾಡುತ್ತಿದ್ದರು.ಇದು ಸಹೋದರರಿಬ್ಬರ ಕುಟುಂಬದ ನಡುವೆ ಇದ್ದ ಜಮೀನು ವಿವಾದದಲ್ಲಿ ನಡೆದ ಕೊಲೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬೆಳಲಕಟ್ಟೆ ಸನಿಹದ ಒಂದು ಕಿಲೋಮೀಟರ್ ದೂರದಲ್ಲಿ ಬೆಳಿಗ್ಗೆ 8.30 ರ ಸುಮಾರಿಗೆ ಮಹೇಶಪ್ಪ(65) ಸ್ಕೂಟಿ ಬೈಕ್ ನಲ್ಲಿ ಮಗಳ ಮನೆಗೆ ತೆರಳಿದ್ದರು. ಮನೆಯಿಂದ ಹೊರಟ ಕೆಲವೇ ಹೊತ್ತಿನಲ್ಲಿ ಅವರು ಸಹೋದರ ಹಾಗು ಆತನ ಪುತ್ರನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.
ಪೊಲೀಸರ ವಿರುದ್ಧ ದೂರು ದಾಖಲು
ಚಿಕ್ಕಮಗಳೂರು: ಯುವ ವಕೀಲ ಹೆಲ್ಕೆಟ್ ಧರಿಸದ ಕಾರಣ ಪೊಲೀಸರು ಹಲ್ಲೆ ನಡೆಸಿದ್ದನ್ನು ಖಂಡಿಸಿ, ಚಿಕ್ಕಮಗಳೂರು ನಗರ ಠಾಣೆಯಲ್ಲಿ ವಕೀಲರು ಪ್ರತಿಭಟನೆ ನಡೆಸಿದ್ದರು. ಇದೀಗ ವಕೀಲರ ವಿರುದ್ಧ ನಾಲ್ಕು ಪ್ರತ್ಯೇಕ ಎಫ್ ಐಆರ್ ದಾಖಲಾಗಿದೆ. ಚಿಕ್ಕಮಗಳೂರಿನಲ್ಲಿ ಹೆಲ್ಕೆಟ್ ಧರಿಸದ ಕಾರಣಕ್ಕೆ ಪೊಲೀಸರು ವಕೀಲರೊಬ್ಬರನ್ನು ಥಳಿಸಿದ್ದರು. ಈ ಕ್ರಮ ಖಂಡಿಸಿ ವಕೀಲರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಹೈಕೋರ್ಟ್ ಕಲಾಪ ಬಹಿಷ್ಕಾರಕ್ಕೂ ಮುಂದಾಗಿದ್ದರು.
ಹೈಕೋರ್ಟ್ ಸಿಜೆ, ವಕೀಲರನ್ನು ಮನವೊಲಿಸಿದ್ದು, ಕಲಾಪ ಬಹಿಷ್ಕರಿಸುವುದು ಸರಿಯಲ್ಲ ಎಂದು ಹೇಳುವ ಮೂಲಕ, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲು ಸೂಚಿಸಿತ್ತು. ಈ ಹಿನ್ನಲೆಯಲ್ಲಿ 6 ಪೊಲೀಸರ ವಿರುದ್ಧ ಎಫ್ ಐಆರ್ ದಾಖಲಾಗಿ ಆ ಬಳಿಕ ಅವರನ್ನು ಅಮಾನತು ಕೂಡ ಮಾಡಿದ್ದರು.