ಕೊಪ್ಪ: ಕೃಷಿಕ ಕಾಡಾನೆ ದಾಳಿಗೆ ಬಲಿ!
– ಆನೆ ತುಳಿತದಿಂದ ಮೃತಪಟ್ಟ ಕೃಷಿಕ: ಕುಟುಂಬದ ಆಕ್ರಂದನ
– ಪರಿಹಾರಕ್ಕೆ ಗ್ರಾಮಸ್ಥರ ಪಟ್ಟು: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
NAMMUR EXPRESS NEWS
ಕೊಪ್ಪ: ತಾಲೂಕಿನ ಕುದುರೇಗುಂಡಿ ಸಮೀಪದ ಸೀತೂರು ಎಂಬಲ್ಲಿ ಶನಿವಾರ ಉಮೇಶ್ ಎಂಬ ರೈತ ಕಾಡು ಆನೆ ದಾಳಿಗೆ ಸಿಲುಕಿ ಮೃತ ಪಟ್ಟಿದ್ದಾರೆ. ರೈತರು, ಕೆರೆಗದ್ದೆ ಭಜರಂಗ ದಳದ ಸಂಚಾಲಕರಾಗಿ, ರೈತ ಹೋರಾಟಗಾರ ಆಗಿ ಕೃಷಿಕರು ಆದ ಉಮೇಶ್ ಅವರು ಆನೆ ತುಳಿತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ಬೇಜವಾಬ್ದಾರಿ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇತ್ತೀಚಿಗೆ ಕೊಪ್ಪ ಪಟ್ಟಣ ಸಮೀಪ ಕಂಡಿದ್ದ ಕಾಡಾನೆಗಳು ಇದೀಗ ಮೊದಲ ಬಲಿ ಪಡೆದಿವೆ.
ಜನಪ್ರತಿನಿಧಿ, ಅಧಿಕಾರಗಳ ವಿರುದ್ಧ ಜನರ ಆಕ್ರೋಶ..!!
ಸೀತೂರಿನಲ್ಲಿ ಉಮೇಶ ಎಂಬುವ ವ್ಯಕ್ತಿಯನ್ನು ಕಾಡಾನೆ ತುಳಿದು ಸಾಯಿಸಿದ ಘಟನೆ ಇದೀಗ ನಡೆದಿದೆ.
ಕೆಲವು ದಿನಗಳ ಹಿಂದೆ ಇದೇ ಸೀತೂರಿನಲ್ಲಿ ಆನೆ ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆ ನಷ್ಟ ಮಾಡಿದ ಬಗ್ಗೆ ಮಾಧ್ಯಮಗಳು ವರದಿ ಮಾಡಿ ಕ್ಷೇತ್ರದ ಜನಪ್ರತಿನಿಧಿಗಳ, ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಪರಿಹಾರ ಕೊಡಿಸಿಲಿಲ್ಲ, ಆನೆ ಓಡಿಸುವ ಕಾರ್ಯಕ್ಕೆ ಮುಂದಾಗದ ಪರಿಣಾಮ ಇಂದು ಕಾಡನೆ ಓರ್ವ ವ್ಯಕ್ತಿಯನ್ನ ಬಲಿ ಪಡೆದಿದೆ.
ಶೃಂಗೇರಿ ಕ್ಷೇತ್ರದ ನರಸಿಂಹರಾಜಪುರ, ಬಾಳೆಹೊನ್ನೂರು, ಖಾಂಡ್ಯ ಭಾಗಗಳಲ್ಲಿ ದಿನನಿತ್ಯ ಆನೆ ಉಪಟಳ ಜಾಸ್ತಿಯಾಗುತ್ತಿದ್ದರು ಶಾಸಕರು, ಅರಣ್ಯ ಇಲಾಖೆಯವರು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಒತ್ತುವರಿ ತೆರವು ಮಾಡಿಸಲು ತೋರುವ ಕಾಳಜಿ ಆನೆ ಓಡಿಸಲು, ಪರಿಹಾರ ಕೊಡಿಸಲು ಯಾಕಿಲ್ಲ? ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಿನೇ ದಿನೇ ಮಲೆನಾಡು ಭಾಗದಲ್ಲಿ ಕಾಡಾನೆಗಳ ಕಾಟ ಹೆಚ್ಚಾಗಿದ್ದು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.