ಮನೆ ಬಿಟ್ಟು ಪರಾರಿಯಾದವಳ ಮರ್ಡರ್!
– ಬಾಳೆಹೊನ್ನೂರು: ಮಕ್ಕಳ ಎದುರೇ ಗೃಹಿಣಿಯ ಭೀಕರ ಹತ್ಯೆ
– ತೀರ್ಥಹಳ್ಳಿ : ತಳುವೆ ಸಮೀಪ ಬೈಕ್ ನಿಂದ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ!
NAMMUR EXPRESS NEWS
ಬಾಳೆಹೊನ್ನೂರು: ಮಕ್ಕಳ ಎದುರೇ ಗೃಹಿಣಿಯ ಭೀಕರ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಕಿಚ್ಚಬ್ಬಿ ಎಂಬಲ್ಲಿ ನಡೆದಿದೆ. ತೃಪ್ತಿ (25) ಹತ್ಯೆಗೊಳಗಾದ ಗೃಹಿಣಿ ಕಳೆದ ಒಂದು ತಿಂಗಳ ಹಿಂದೆ ತೃಪ್ತಿ ಪ್ರಿಯಕರನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ಈ ವಿಚಾರವಾಗಿ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಲಾಗಿತ್ತು. ತದನಂತರ ರಾಜಿ ಮಾತುಕತೆ ನಡೆದು ಆತನೊಂದಿಗೆ ಮಾತು ಬಿಟ್ಟಿದ್ದಳು. ಅದೇ ಸಿಟ್ಟಿಗೆ ತೃಪ್ತಿ ಪ್ರಿಯಕರ ಮಕ್ಕಳ ಎದುರೇ ಇಂದು ಮದ್ಯಾಹ್ನ 12.30 ರ ಸುಮಾರಿಗೆ ಚಾಕುವಿನಿಂದ ಇರಿದು ಕೆರೆಗೆ ತಳ್ಳಿ ಹತ್ಯೆ ಮಾಡಲಾಗಿದೆ. ಇನ್ನು ತೃಪ್ತಿಗೆ ನಾಲ್ಕು ವರ್ಷದ ಗರ್ಭಿಣಿ ಹಾಗೂ ಎರಡು ವರ್ಷದ ಇಬ್ಬರು ಮಕ್ಕಳಿದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ತೀರ್ಥಹಳ್ಳಿ : ತಳುವೆ ಸಮೀಪ ಬೈಕ್ ನಿಂದ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ!
ತೀರ್ಥಹಳ್ಳಿ : ರಸ್ತೆಯಲ್ಲಿ ದನವೊಂದು ಏಕಾಏಕಿ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿದ ಬೈಕ್ ನಿಂದ ಬಿದ್ದ ಸವಾರ ಗಂಭೀರ ಗಾಯಗೊಂಡ ಘಟನೆ ತಳುವೆ ಸಮೀಪ ನಡೆದಿದೆ. ಶನಿವಾರ ಮಧ್ಯಾಹ್ನ ತಾಲೂಕಿನ ತಳುವೆಯ ನರ್ಸರಿ ಬಳಿ ಈ ಅಪಘಾತವಾಗಿದ್ದು ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ. ಭೀಮನಕಟ್ಟೆಯ ನಿವಾಸಿ ಎಂದು ತಿಳಿದು ಬಂದಿದ್ದು ಆತ ಅಡಕೆ ಕೊನೆ ತೆಗೆಯಲು ಹೋಗಿ ವಾಪಾಸ್ ತೀರ್ಥಹಳ್ಳಿಗೆ ಬರುವ ವೇಳೆ ಈ ಅವಘಡ ಸಂಭವಿಸಿದೆ. ಬೈಕ್ ಮುಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಆತನನ್ನು ತೀರ್ಥಹಳ್ಳಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.