ದಸರಾ ಆಚರಣೆಗೆ ಕಾಫಿ ನಾಡಲ್ಲಿ ಸಿದ್ಧತೆ!
– ಶೃಂಗೇರಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ
– ಹೊರನಾಡು ಅನ್ನಪೂರ್ಣೇಶ್ವರಿಗೆ ವಿಶೇಷ ಪೂಜೆ
– ಕೊಪ್ಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ
– ಹರಿಹರ ಪುರ, ರಂಭಾಪುರಿ ಎಲ್ಲಾ ಮಠದಲ್ಲೂ ಕಾರ್ಯಕ್ರಮ
NAMMUR EXPRESS NEWS
ಶೃಂಗೇರಿ: ನವರಾತ್ರಿ ಭಾರತದಾದ್ಯಂತ ಹಿಂದೂಗಳು ಆಚರಿಸುವ ಬಹಳ ದೊಡ್ಡ ಹಬ್ಬ. ರಾಜ್ಯದಲ್ಲೂ ದಸರಾವನ್ನು ನಾಡಹಬ್ಬವನ್ನಾಗಿ ಆಚರಿಸಲಾಗುತ್ತದೆ. ಮೈಸೂರಿನಲ್ಲಿ ನಡೆಯುವ ದಸರಾ ವಿಶ್ವವಿಖ್ಯಾತವಾಗಿದ್ದು ಅದರ ವೀಕ್ಷಣೆಗೆ ದಸರಾ ಆಚರಣೆಗೆ ಮೂಲ ಪ್ರೇರಣೆ ಶೃಂಗೇರಿಯ ಶಾರದಾ ಪೀಠ ಎನ್ನುವ ಕುತೂಹಲಕಾರಿ ಸಂಗತಿ ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ನವರಾತ್ರಿಯ ಸಂದರ್ಭದಲ್ಲಿ ಶೃಂಗೇರಿಯಲ್ಲಿ ನಡೆಯುವ ವೈಭವೋಪೇತ ದಸರಾ ದರ್ಬಾರ್ ಆಚರಣೆಯ ನಡೆಯುತ್ತದೆ. ಶೃಂಗೇರಿ ದೇವಸ್ಥಾನವು ವಿದ್ಯಾಧಿದೇವತೆಯ ನೆಲವೀಡು. ನವರಾತ್ರಿ ಉತ್ಸವದ ಸಂದರ್ಭದಲ್ಲಿ ಇಲ್ಲಿ ಶಾರದೆಗೆ ಚಂಡಿಕಾ ಹೋಮ, ರಥೋತ್ಸವ, ವಿವಿಧ ಅಲಂಕಾರ, ಪೂಜೆ ನಡೆಯುತ್ತದೆ. ಇಲ್ಲಿ ಶಾರದಾ ದೇವಿ ನವರಾತ್ರಿ ಉತ್ಸವಗಳಲ್ಲಿ ಸರಸ್ವತಿ, ದುರ್ಗಾ, ಲಕ್ಷ್ಮೀ ರೂಪದಲ್ಲಿ ಪೂಜಿಸಲ್ಪಡುತ್ತಾಳೆ.
ಹೊರನಾಡಲ್ಲೂ ನವರಾತ್ರಿ ಸಡಗರ
ಶ್ರೀ ಕ್ಷೇತ್ರ ಹೊರನಾಡಿನ ಆದಿಶಕ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅ.15 ರಿಂದ 26 ರವರೆಗೆ ನವರಾತ್ರಿಮಹೋತ್ಸವ ದಲ್ಲಿ ಮಹಾಚಂಡಿಕಾ ಹೋಮ, ಪಟ್ಟಾಭಿಷೇಕೋತ್ಸವ, ಜೀವ-ಭಾವ ಕಾರ್ಯಕ್ರಮ ಹಾಗೂ ಶ್ರೀ ಮಾತಾ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಶರನ್ನವರಾತ್ರಾ ಮಹೋತ್ಸವದ ಪ್ರಯುಕ್ತ ನಿತ್ಯ ಲೋಕ ಕಲ್ಯಾಣಾರ್ಥವಾಗಿ ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. ಇನ್ನು 26 ರಂದು ಚಂಡಿಕಾ ಹೋಮ, ಧರ್ಮಕರ್ತರ ಪಟ್ಟಾಭಿಷೇಕೋತ್ಸವದ ಅಂಗವಾಗಿ ಜೀವ-ಭಾವ ಕಾರ್ಯಕ್ರಮ ಮತ್ತು ಶ್ರೀಮಾತಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ರಂಭಾಪುರಿ ಮಠದಲ್ಲಿ ಸರಳ ನವ ರಾತ್ರಿ
ಚಿಕ್ಕಮಗಳೂರು ಜಿಲ್ಲೆಯ ಪ್ರತಿ ವರ್ಷ ದಂತೆ ಬಾಳೆಹೊನ್ನೂರಿನ ರಂಬಾಪುರಿ ಜಗದ್ಗುರುಗಳವರ ಸಾಂಪ್ರದಾಯಿಕ ಸರಳ ನವರಾತ್ರಿ ದಸರಾ ಸಮಾರಂಭ ಉತ್ಸವ ಆಚರಣೆ ಮಾಡಲಾಗುತ್ತದೆ. ದಸರಾ ಉತ್ಸವದ ಹಿನ್ನಲೆಯಲ್ಲಿ ಪ್ರತಿ ನಿತ್ಯ ಧರ್ಮ ಪೂಜೆ ನಡೆಯುತ್ತಿದೆ.ಧರ್ಮ ಸಮಾರಂಭದಲ್ಲಿ ಪ್ರವಚನವನ್ನು ರಂಭಾಪುರಿ ಸ್ವಾಮೀಜಿ ನೀಡುತ್ತಾರೆ ಹಲವು ಕಾರ್ಯಕ್ರಮಗಳು ನಡೆಯುತ್ತವೆ.
ಕೊಪ್ಪ ನವರಾತ್ರಿಯಲ್ಲಿ ಸಾಂಸ್ಕೃತಿಕ ಕಲರವ
ನವರಾತ್ರಿಯ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಕಾರ್ಯಕ್ರಮ ಅನ್ನಸಂತರ್ಪಣೆ ಹೋಮ ಹವನ ಹಾಗೂ ದೇವಿಗೆ ವಿಶೇಷ ಹೂವಿನ ಅಲಂಕಾರ, ಪೂಜೆ ನಡೆಯುತ್ತದೆ. ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನವರಾತ್ರಿಯಲ್ಲಿ ಪ್ರತೀ ದಿನ ಕುಂಕುಮಾರ್ಚನೆ, ದೇವಿ ಪಾರಾಯಣ, ವಿಶೇಷ ಅಲಂಕಾರ ಮಧ್ಯಾಹ್ನ ಮಹಾಮಂಗಳಾರತಿ,1 ಗಂಟೆಗೆ ಪ್ರಸಾದ ವಿನಿಯೋಗ, ರಾತ್ರಿ 7 ಗಂಟೆಗೆ ಮಹಾಮಂಗಳಾರತಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿದಿನ ವಿಶೇಷ ಪೂಜೆ , ಅಲಂಕಾರ, ನಿತ್ಯ ಪಾರಾಯಣ ಹಾಗೂ ಅನ್ನ ಸಂತರ್ಪಣೆ ಇರುತ್ತದೆ. ಕೊಪ್ಪದ ಹರಿಹರಪುರ, ವಿನಯ್ ಗುರೂಜಿ ಮಠ ಸೇರಿ ಎಲ್ಲಾ ಕಡೆ ಪೂಜೆಗೆ ಸಿದ್ಧತೆ ನಡೆದಿದೆ.
ಕಾಫಿನಾಡಿನೆಲ್ಲೆಡೆ ನವರಾತ್ರಿ ಸಂಭ್ರಮ!
ಚಿಕ್ಕಮಗಳೂರು, ಮೂಡಿಗೆರೆ, ಕಡೂರು, ಎನ್. ಅರ್. ಪುರ, ತರೀಕೆರೆ ಸೇರಿದಂತೆ ಎಲ್ಲೆಡೆ ನವರಾತ್ರಿ ಸಂಭ್ರಮ ಜೋರಾಗಿದೆ.