ಕಾಡಲ್ಲಿ ಮರದ ಮೇಲೆ ಮಲಗಿ ತಪ್ಪಿಸಿಕೊಳ್ತಿದ್ದ ರೌಡಿ..!
– ಪೊಲೀಸರಿಂದ ಕಳ್ಳನಿಗೆ ಶೂಟ್ ಔಟ್
– ಹತ್ತು ವರ್ಷಗಳಿಂದ ಪೊಲೀಸರಿಗೆ ಯಾಮಾರ್ಸಿದ್ದ ಕಳ್ಳ
– ಶೂಟ್ ಮಾಡಿದ್ದಕ್ಕೆ ಆಸ್ಪತ್ರೆ ಸೇರಿ ಈಗ ಪೊಲೀಸರಿಗೆ ತಲೆನೋವು
NAMMUR EXPRESS NEWS
ಚಿಕ್ಕಮಗಳೂರು: ಕಾಡಲ್ಲಿ ಮರದ ಮೇಲೆ ಮಲಗಿ ತಪ್ಪಿಸಿಕೊಳ್ತಿದ್ದ ರೌಡಿ ಹಾಗೂ ಕುಖ್ಯಾತ ಕ್ರಿಮಿನಲ್ ಒಬ್ಬನನ್ನು ಚಿಕ್ಕಮಗಳೂರು ಪೊಲೀಸರು ಶೂಟ್ ಔಟ್ ಮಾಡಿ ಹಿಡಿದಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಪೊಲೀಸರಿಗೆ ಯಾಮಾರ್ಸಿದ್ದ ಕಳ್ಳ. ಕಾಫಿನಾಡಿನ ಖಾಕಿಗಳಿಗೆ ಬೇಕಾಗಿದ್ದ ಮೋಸ್ಟ್ ವಾಟೆಂಡ್ ಕ್ರಿಮಿನಲ್, 2012ರಿಂದ ಕಾಡಲ್ಲೇ ಮರಗಳ ಮೇಲೆ ಮಲಗಿಕೊಂಡು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿಕೊಂಡು ಓಡಾಡ್ತಿದ್ದ 4 ಹಾಫ್ ಮರ್ಡರ್, 3 ಹಲ್ಲೆ ಪ್ರಕರಣ ಸೇರಿದಂತೆ ಪೊಲೀಸರ ಮೇಲೆ ಹಲ್ಲೆ ಪ್ರಕರಣ ಸೇರಿದಂತೆ ಪೊಲೀಸರ ಮೇಲೆ ಮಾಡಿದ್ದ ಆತನ ಮೇಲೆ ಒಟ್ಟು 9 ಕೇಸ್ಗಳಿದ್ದವು. ಖಚಿತ ಮಾಹಿತಿ ಮೇರೆಗೆ ಅರೆಸ್ಟ್ ಮಾಡಲು ಹೋದಾಗ ಮತ್ತೆ ಖಾಕಿ ಮೇಲೆ ಲಾಂಗ್ ಬೀಸಿದ್ದ. ಆರೋಪಿ ಹೆಸರು ಪೂರ್ಣೇಶ್, ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಮಾಗಲು ಗ್ರಾಮದವನು. ಈತ ಒಂದು ರೀತಿ ಖಾಂಡ್ಯದ ರೌಡಿ. ಈತನ ಮೇಲೆ 4 ಹಾಫ್ ಮರ್ಡರ್, 3 ಅಸಾಲ್ಟ್, ಪೊಲೀಸ್ ಮೇಲೆ ಅಟ್ಯಾಕ್ ಸೇರಿದಂತೆ 9 ಕೇಸ್ಗಳಿದ್ದು, 307 ಕೇಸಲ್ಲಿ ವಾರಂಟ್ ಕೂಡ ಇಶ್ಯು ಆಗಿತ್ತು.
ಆದ್ರೆ, 2012 ರಿಂದ ಕಾಡಲ್ಲಿ ಕಾಡಿನ ಮರಗಳ ಮೇಲೆ ಮಲಗಿ ಪೊಲೀಸರ ಕೈಗೆ ಸಿಗದೆ ಆಟ ಆಡಿಸ್ತಿದ್ದ. ಕಳೆದ ವಾರ ಮನೆಯಲ್ಲಿರೋ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದಾಗ ಪೊಲೀಸರ ಮೇಲೆ ಲಾಂಗ್ ಬೀಸಿದ ಅಂತ ಕಾಲಿನ ಮಂಡಿಗೆ ಫೈರಿಂಗ್ ಮಾಡಿದ್ದರು. ಆದ್ರೆ, ಫೈರಿಂಗ್ ಆದ ಮೇಲೆ ಆತನನ್ನ ನೋಡಿಕೊಳ್ಳಲು ಅವರ ಮನೆಯವರು ಯಾರೂ ಬಾರದ ಕಾರಣ ಓರ್ವ ಇನ್ಸ್ಪೆಕ್ಟರ್, ಓರ್ವ ಪಿ.ಎಸ್.ಐ. ಹಾಗೂ ನಾಲ್ವರು ಪೇದೆಗಳೇ ಆತನ ಯೋಗಕ್ಷೇಮ ನೋಡಿಕೊಳ್ಳುವಂತಾಗಿದೆ. ಇದೀಗ ಇದೇ ಪೊಲೀಸರಿಗೆ ತಲೆನೋವು ಆಗಿದೆ. ಆತನನ್ನ ಬೆಂಗಳೂರಿನ ಆಸ್ಪತ್ರೆಗೇ ಕರೆದೊಯ್ದಿದದ್ದರೂ ಪೋಷಕರಾಗಲಿ,ಸಂಬಂಧಿಕರು ಹೆಂಡ್ತಿ-ಮಕ್ಕಳು ಕೂಡ ಯಾರೂಬಂದಿಲ್ಲ. ಆರೋಪಿ ಪೂರ್ಣೇಶ ತನ್ನ ಹೆಂಡ್ತಿಗೂ ಹೊಡೆದುಬಡಿದು ತವರಿಗೆ ಕಳಿಸಿದ್ದನಂತೆ. ಹಾಗಾಗಿ,ಓರ್ವ ಮಗನಿದ್ದರೂ ಆಕೆ ಕೂಡ ಗಂಡನನ್ನ ನೋಡೋದಕ್ಕೆ ಬಂದಿಲ್ಲ. ಇದೀಗ, ವಾರದಿಂದ ನೋಡಿಕೊಂಡ ಪೊಲೀಸರೇ ಆಪರೇಷನ್ ಮಾಡಿಸಿ, ಪೋಷಕರ ಸ್ಥಾನದಲ್ಲಿ ನಿಂತು ಆರೈಕೆ ಮಾಡುತ್ತಿದ್ದಾರೆ. ಸಿಪಿಐ, ಪಿಎಸ್ಐ, ಪೇದೆಗಳು ಇಂದಿಗೂ ಆತನ ಆರೈಕೆಯಲ್ಲಿದ್ದಾರೆ.