ಶೃಂಗೇರಿ: ಕಾರ್ಮಿಕರಿಗೆ ಏಕರೂಪದ ದಿನಗೂಲಿ ನಿಗದಿ
– ಹಂಗಾಮಿ ಕಾರ್ಮಿಕರ ಬೇಕಾಬಿಟ್ಟಿ ಕೂಲಿ ಬೇಡಿಕೆಯಿಂದ ಗುತ್ತಿಗೆದಾರರಿಗೆ ಸಂಕಷ್ಟ
– ಶೃಂಗೇರಿ ಗುತ್ತಿಗೆದಾರರ ಸಭೆಯಲ್ಲಿ ಒಮ್ಮತದ ನಿರ್ಧಾರ
– ಬೇರೆ ರಾಜ್ಯದ ಕಾರ್ಮಿಕರ ಮಾಹಿತಿ ಸಂಗ್ರಹ ಕಡ್ಡಾಯ
NAMMUR EXPRESS NEWS
ಶೃಂಗೇರಿ: ಇನ್ನ್ಮುಂದೆ ಕಾರ್ಮಿಕರಿಗೆ ಗುತ್ತಿಗೆದಾರರು ದಿನಗೂಲಿ ನೀಡುವಾಗ ಏಕರೂಪದ ಕೂಲಿ ನೀಡಲು ನಿರ್ಧರಿಸಲಾಗಿದೆ. ಈ ಸಂಬಂಧ ಕಟ್ಟಡ ಗುತ್ತಿಗೆದಾರರ ಸಂಘದ ಅಧ್ಯಕ್ಷ ಭಾಸ್ಕರ ಪೂಜಾರಿಯವರು ಮಾಹಿತಿ ನೀಡಿದ್ದಾರೆ. ಶೃಂಗೇರಿ ಪಟ್ಟಣದ ಕನ್ನಡ ಭವನದಲ್ಲಿ ಕಟ್ಟಡ ಗುತ್ತಿಗೆದಾರರ ಸಂಘ ಸಭೆ ಏರ್ಪಡಿಸಿ ನಿರ್ಧರಿಸಲಾಗಿದ್ದು, ಇದರನ್ವಯ ಹಂಗಾಮಿ ಕೂಲಿ ಕಾರ್ಮಿಕರು ಬೇಕಾಬಿಟ್ಟಿ ಕೂಲಿ ಕೇಳುತ್ತಿದ್ದಾರೆ, ಇದರಿಂದ ಗುತ್ತಿಗೆದಾರರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಸಂಘವು ಈಗಾಗಲೇ ಕೂಲಿ ನಿಗದಿ ಮಾಡಿರುವುದರಿಂದ ಅದರಂತೆ ಕಾರ್ಮಿಕರೆಲ್ಲರಿಗೂ ಏಕರೂಪ ಸಂಬಳ ನಿಗದಿಪಡಿಸಬೇಕು. ಸಮಯ, ಪುರುಷ ಮತ್ತು ಮಹಿಳಾ ಕಾರ್ಮಿಕರಿಗೆ ನಿಗದಿತ ಕೂಲಿ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೇರೆ ರಾಜ್ಯದ ಕಾರ್ಮಿಕರ ಮಾಹಿತಿ ಸಂಗ್ರಹ ಕಡ್ಡಾಯ
ಇತ್ತೀಚೆಗೆ ಬೇರೆ ರಾಜ್ಯದಿಂದಲೂ ಕಾರ್ಮಿಕರು ಕಟ್ಟಡ, ಮತ್ತಿತರ ಕೆಲಸಕ್ಕೆ ಬರುತ್ತಿದ್ದು, ಕೆಲಸಕ್ಕೆ ಬಂದಾಗ ಅವರ ಬಗ್ಗೆ ಮಾಹಿತಿ, ಆಧಾರ್ ಕಾರ್ಡ್,ಮತ್ತಿತರ ಮಾಹಿತಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಗುರುತು ಪರಿಚಯ ಇಲ್ಲದ ಕಾರ್ಮಿಕರಿಗೆ ಮುಂಗಡ ಹಣ ನೀಡುವುದು ಸರಿಯಲ್ಲ, ಕಾರ್ಮಿಕರನ್ನು ಗುತ್ತಿಗೆದಾರರು ಗೌರವದಿಂದ ನಡೆಸಿ ಕೊಳ್ಳುತ್ತಿದ್ದು ಅದರಂತೆ ಕಾರ್ಮಿಕರು ಸಹ ಗುತ್ತಿಗೆದಾರರ ಹಿತ ಕಾಪಾಡಬೇಕಿದೆ ಎಂದು ಗುತ್ತಿಗೆದಾರರ ಸಂಘದ ಶೂನ್ಯ ರಮೇಶ್ ತಿಳಿಸಿದ್ದಾರೆ.