– ಕೊಪ್ಪ ವೈದ್ಯಾಧಿಕಾರಿ ಹುದ್ದೆಯಿಂದ ಡಾ.ಗಾನವಿ ಗೇಟ್ ಪಾಸ್?
– ಚಿನ್ನಾಭರಣ ಕಳವು: ಆರೋಪಿ ಅರೆಸ್ಟ್!
NAMMUR EXPRESS NEWS
ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ನೀಡಿರುವ ದೂರಿನ್ವಯ ಕೊಪ್ಪ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರವನ್ನು ಹಿರಿಯ ತಜ್ಞರಿಗೆ ವಹಿಸುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಇಲ್ಲಿನ ಕೊಪ್ಪ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ ಗಾನವಿ ಅವರು ನಾಲ್ಕು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸಿದ್ದಾರೆ, ಇದೀಗ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ಕೊಪ್ಪ ಸಾರ್ವಜನಿಕ ಆಸ್ಪತ್ರೆಯ ಹಿರಿಯ ತಜ್ಞರಾದ ವೆಂಕಟೇಶ್ ದೂರಿನ್ವಯ 25/10/2023 ರಂದು ವಿಚಾರಣೆ ನಡೆಸಿ ಅರ್ಜಿದಾರರ ಮನವಿಯ ಮೇಲೆ 07 ದಿನಗಳ ಒಳಗೆ ಕ್ರಮವಹಿಸಿ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಚಿನ್ನಾಭರಣ ಕಳವು: ಆರೋಪಿ ಅರೆಸ್ಟ್!
ಆಲ್ದುರು: ಸಮೀಪದ ತೋರಣ ಮಾವು ನಿವಾಸಿ ಯೋಗಿನಿ ರಾಜಶೇಖರ್, ಅವರ ಮನೆಯಲ್ಲಿ ಅ.29ರಂದು ತೋಟಕ್ಕೆ ತೆರಳಿದ್ದ ವೇಳೆ ಮನೆಯ ಹಿಂಬಾಗಿಲು ಮುರಿದು ಬೀರುವಿನಲ್ಲಿ ಇಟ್ಟಿದ್ದ 15 ಗ್ರಾಂ ಚಿನ್ನದ ಸರ ಮತ್ತು ಆರ್ಟಿಫಿಷಿಯಲ್ ಸರಗಳನ್ನು ಕಳವು ಮಾಡಿದ್ದ ಪ್ರಕರಣದ ಆರೋಪಿ, ತೋರಣಮಾವು ನಿವಾಸಿ ಶಾಂತಪ್ಪ ಅಲಿಯಾಸ್ ಸಂಪತ್ತಕುಮಾರ ಅಲಿಯಾಸ್ ಪಾಪಿ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಡುಗೆ ವೃತ್ತಿ ಮಾಡುತ್ತಿದ್ದ ಆರೋಪಿ ಕಳವು ಮಾಡಿದ್ದ ಆಭರಣವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ. ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಅಕ್ಷಿತಾ ಕೆ.ಪಿ, ಕೀರ್ತಿ ಕುಮಾರ್, ಸಿಬ್ಬಂದಿ ಭಾಗವಹಿಸಿದ್ದರು.