ಸಾಲ: ಚಿಕ್ಕಮಗಳೂರ ಅನ್ನದಾತನ ಆತ್ಮಹತ್ಯೆ!
– 40 ದಿನಗಳಲ್ಲಿ ಐವರು ರೈತರು ನೇಣಿಗೆ ಶರಣು
– ಕಡೂರು: ಗಾಂಜಾ ಮತ್ತಿನಲ್ಲಿ ಗನ್ ಹಿಡಿದು ತಿರುಗುತ್ತಿದ್ದ ಯುವಕನ ಬಂಧನ!
NAMMUR EXPRESS NEWS
ಚಿಕ್ಕಮಗಳೂರು: ಬೆಳೆ ಬೆಳೆಯಲು ಮಾಡಿದ್ದ ಸಾಲ ಬಾಧೆ ತಾಳಲಾರದೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದೆ. ರವಿವಾರ ಕಡೂರು ತಾಲೂಕಿನ ತಂಗಲಿ ಗ್ರಾಮದ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡುವೆ ಚಿಕ್ಕಮಗಳೂರು ತಾಲೂಕಿನ ಜೋಡಿ ಲಿಂಗದಹಳ್ಳಿ ಗ್ರಾಮದ ರೈತ ಕೃಷ್ಣನಾಯ್ಕ (55) ಸಾಲ ಭಾದೆ ತಾಳಲಾರದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷ್ಣ ನಾಯ್ಕ ಅವರು 3 ಲಕ್ಷ ರೂ. ಸಾಲ ಮಾಡಿ ರಾಗಿ, ಜೋಳ ಬಿತ್ತನೆ ಮಾಡಿದ್ದರು. ಮಳೆ ಇಲ್ಲದೆ ಬೆಳೆ ನಾಶವಾದ ಹಿನ್ನೆಲೆಯಲ್ಲಿ ಮನನೊಂದು ರೈತ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ 40 ದಿನಗಳಲ್ಲಿ ಕಡೂರು ತಾಲೂಕಿನಲ್ಲಿ ಐದು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ ಮತ್ತಲ್ಲಿ ಗನ್ ಹಿಡಿದು ತಿರುಗುತ್ತಿದ್ದ ಯುವಕ ಅರೆಸ್ಟ್!
ಗಾಂಜಾ ಮತ್ತಿನಲ್ಲಿ ಗನ್ ಹಿಡಿದು ತಿರುಗುತ್ತಿದ್ದ ಯುವಕನನ್ನು ಸ್ಥಳೀಯರ ಸಹಾಯದಿಂದ ಪೊಲೀಸರು ಬಂಧಿಸಿದ್ದಾರೆ.
ಬೀರೂರು ಮೂಲದ ಸಮೀರ್ ಬಂಧಿತ ಆರೋಪಿ, ಸಮೀರ್ ಕಡೂರು ಪಟ್ಟಣದ ಎಪಿಎಂಸಿ ಮಾರುಕಟ್ಟೆ ಬಳಿ ಗನ್ ಹಿಡಿದು ಜನರಿಗೆ ಹೆದರಿಸುತ್ತಿದ್ದನು. ಪೊಲೀಸರು ಸಮೀ ಬಳಿಯಿಂದ ಒಂದು ಲೋಡೆಡ್ ಗನ್, 10 ಜೀವಂತ ಗಾಂಜಾ ವಶಪಡಿಸಿಕೊಂಡಿದ್ದಾರೆ. ಸಮೀರ್ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣಗುಂಡು, ಎರಡು ಚಾಕು, ಡ್ರಾಗರ್ ಸೇರಿದಂತೆ 40 ಗ್ರಾಂ ದಾಖಲಾಗಿದೆ.