
ನಾವು ವಿಐಪಿ ಸ್ವಾಮೀಜಿಗಳಲ್ಲ…!
– ಹರಿಹರದ ಪಂಚಮಸಾಲಿ ಪೀಠದ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ಬೇಸರ
– ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜದಿಂದ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ
NAMMUR EXPRESS NEWS
ಹೊಸದುರ್ಗ: ನಾವು ಪಂಚಮಸಾಲಿ ಸಮಾಜದ ಜಾಗೃತಿಗಾಗಿ ಕೆಲಸ ಮಾಡುತ್ತಿದ್ದೆವೆ. ಅದರೂ ಇವರು ವಿಐಪಿ ಸ್ವಾಮಿಗಳು ಸಾಮಾನ್ಯ ಜನರ ಕೈಗೆ ಸಿಗುವುದಿಲ್ಲ ಎನ್ನುವ ಅರೋಪಗಳಿವೆ. ಇಂತಹ ಆರೋಪಗಳನ್ನು ಸ್ವೀಕರಿಸುತ್ತೇನೆ ಎಂದು ಹರಿಹರದ ಪಂಚಮಸಾಲಿ ಪೀಠದ ಶ್ವಾಸಗುರು ಶ್ರೀ ವಚನಾನಂದ ಸ್ವಾಮಿಜಿ ಬೇಸರದ ನುಡಿಗಳನ್ನಾಡಿದ್ದಾರೆ.
ನಗರದ ಜಯದೇವ ಸಭಾಂಗಣದಲ್ಲಿ ಭಾನುವಾರ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.
ಈ ಬಾರಿಯ ಶ್ರಾವಣ ಮಾಸದ ಪೂಜೆಯನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಮಾಡುತ್ತೇನೆ. ನಮಗೆ ಕಾಣಿಕೆ, ಹಾರ, ತುರಾಯಿ ಯಾವುದೂ ಬೇಡ ನಿಮ್ಮ ಭಕ್ತಿ ಮಾತ್ರ ಸಾಕು. ಎಲ್ಲರ ಮನೆಯಲ್ಲಿಯೂ ಪಾದಪೂಜೆ ನಡೆಸುವ ಮೂಲಕ ಸಮುಧಾಯವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತೇನೆ ಎಂದರು.
ಪಂಚಮಸಾಲಿ ಸಮುದಾಯದ ಅಭಿವೃದ್ಧಿಗೆ ಬದ್ಧ
ಸಮುದಾಯದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಅವರು ಸಮಾಜದ ಆಸ್ತಿಯಾಗುತ್ತಾರೆ ಎಂದು ಹರಿಹರದ ಪಂಚಮಸಾಲಿ ಪೀಠದ ಶ್ವಾಸಗುರು ಶ್ರೀ ವಚನಾನಂದ ಸ್ವಾಮಿಜಿ ತಿಳಿಸಿದರು.
ಪಂಚಮಸಾಲಿ ಸಮುಧಾಯದ ಉದ್ದಾರವಾಗಬೇಕು ಎನ್ನುವುದು ನಮ್ಮ ಹಾಗೂ ಶ್ರೀಮಠದ ಆಶಯವಾಗಿದೆ. ಮುಂದಿನ ವರ್ಷ ಚಿತ್ರದುರ್ಗದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹರಿಹರದ ಪೀಠದಲ್ಲಿ ಮಾಡಲು ಮುಂದಾಗಬೇಕು.ಎಲ್ಲರೂ ವರ್ಷಕ್ಕೆ ಒಮ್ಮೆಯಾದರೂ ಪಂಚಮಸಾಲಿ ಪೀಠಕ್ಕೆ ಬೇಟಿ ನೀಡುವ ಪ್ರವೃತ್ತಿ ರೂಡಿಸಿಕೊಳ್ಳಿ. ಮುಂದಿನ ವರ್ಷದಿಂದ ಶೇ 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವ ಸಮುಧಾಯದ ಮಕ್ಕಳನ್ನು ಪಂಚಮಸಾಲಿ ಮಠದ ವತಿಯಿಂದ ಒಂದು ವಾರ ಹರಿದ್ವಾರ ಹಾಗೂ ಋಷಕೇಶಗಳಿಗೆ ಉಚಿತ ಪ್ರವಾಸ ಕರೆದುಕೊಂಡು ಹೋಗುವ ಮೂಲಕ ಆಧ್ಯಾತ್ಮದ ಚಿಂತನೆಗಳನ್ನು ಬಿತ್ತುವ ಕೆಲಸ ಮಾಡುತ್ತೆವೆ ಎಂದರು.
ಪಂಚಮಸಾಲಿ ಸಮಾಜದ ಜಿಲ್ಲಾ ಕಾರ್ಯದರ್ಶಿ ಧನುಶಂಕರ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಧ್ವಿತಿಯ ಪಿಯುಸಿ ಯಲ್ಲಿ ಹೆಚ್ಚು ಅಂಕಗಳಿಸಿದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಂಗ್ರೆಸ್ ಮುಖಂಡ ಬಿ.ಜಿ.ಅರುಣ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಶಿವಪ್ರಕಾಶ್,ತಾಲೂಕಾಧ್ಯಕ್ಷ ಬಿ.ಪಿ.ದಯಾನಂದ್, ಪುಪ್ಪಲತಾ, ಮೃತ್ಯುಂಜಯಪ್ಪ, ಎ.ಎಸ್.ಸಿದ್ದರಾಮೇಶ್, ಉಮಾ ರಮೇಶ್, ಎನ್.ಪ್ರಕಾಶ್, ವಿರೇಶ್ ಇತರರಿದ್ದರು.
ಹೊಸದುರ್ಗದಲ್ಲಿ ಭಾನುವಾರ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಹೆಚ್ಚು ಅಂಕಗಳಿಸಿದ ಮಕ್ಕಳನ್ನು ಸನ್ಮಾನಿಸಲಾಯಿತು.
