ಜಲಪಾತ ಸಿನಿಮಾಕ್ಕೆ 50 ದಿನದ ಸಂಭ್ರಮ!
– ಮಲೆನಾಡಿಗರ ಸಿನಿಮಾಕ್ಕೆ ಸಿನಿಮಾ ಪ್ರಿಯರ ಮೆಚ್ಚುಗೆ
– ಚಂದನವನದಲ್ಲಿ ಗೆದ್ದಿತು ಪರಿಸರ ಕಾಳಜಿ ಸಿನಿಮಾ
NAMMUR EXPRESS NEWS
ಕನ್ನಡದ ಮಲೆನಾಡಿನ ಸುಂದರ ಕಥೆಯುಳ್ಳ ಜಲಪಾತ ಸಿನಿಮಾ 50 ದಿನ ಪೂರೈಸಿ ದಾಖಲೆ ಬರೆದಿದೆ. ಈ ಮೂಲಕ ಮಲೆನಾಡಿಗರ ಸಿನಿಮಾಕ್ಕೆ ಸಿನಿಮಾ ಪ್ರಿಯ ಫಿದಾ ಆಗಿದ್ದಾನೆ. ಚಂದನವನದಲ್ಲಿ ಪರಿಸರ ಕಾಳಜಿ ಸಿನಿಮಾ ಗೆದ್ದಿದ್ದು ಇದೀಗ ಇಡೀ ಚಿತ್ರತಂಡ ಸಂತಸದಲ್ಲಿದೆ. ತೀರ್ಥಹಳ್ಳಿ ಮೂಲದ ಇಂಡಸ್ ಹರ್ಬ್ಸ್ ಮುಖ್ಯಸ್ಥರಾದ ಟಿ.ಸಿ.ರವೀಂದ್ರ ತುಂಬರಮನೆ ನಿರ್ಮಿಸಿ, ರಮೇಶ್ ಬೇಗಾರ್ ಶೃಂಗೇರಿ ರಚಿಸಿ ನಿರ್ದೇಶಿಸಿರುವ ಜಲಪಾತ ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಸಿ ರಾಜ್ಯದ ಅನೇಕ ಚಿತ್ರಮಂದಿರದಲ್ಲಿ ತೆರೆ ಕಾಣುತ್ತಿದೆ.
ಎಲ್ಲರೂ ಇಲ್ಲಿ ಹೊಸಬರೇ..!
ಮಲೆನಾಡಿನ ಎಲ್ಲಾ ಚಿತ್ರಮಂದಿರ ಸೇರಿದಂತೆ ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ಎಲ್ಲಾ ಸ್ಕ್ರೀನ್ ಗಳಲ್ಲೂ ಕೂಡ 50 ದಿನ ಪೂರೈಸಿದೆ. ಕನ್ನಡ ಚಿತ್ರರಂಗದಲ್ಲಿ ಈ ಸಿನಿಮಾ ಅದ್ದೂರಿಯಾಗಿ ಯಶಸ್ವಿಯಾಗಿದೆ. ಸಾಲು ಸಾಲು ಬಿಗ್ ಬ್ಯಾನರ್ ಮತ್ತು ಪರ ಭಾಷಾಚಿತ್ರಗಳ ಲಗ್ಗೆಯ ನಡುವೆಯೂ ಹೊಸಬರೇ ತುಂಬಿ ತುಳುಕಿರುವ ಜಲಪಾತ ತನ್ನ ಅಪ್ಪಟ ಮಲೆನಾಡ ಕಥೆಯನ್ನು ಬಿಂಬಿಸಿರುವುದು ಸದಭಿರುಚಿಯ ಮತ್ತು ಪ್ರಾಮಾಣಿಕ ಮೇಕಿಂಗ್ ಅನ್ನು ಎಂದೂ ಕನ್ನಡ ಜನತೆ ಕೈಬಿಡುವುದಿಲ್ಲ ಎಂಬುದನ್ನು ಸಾಬೀತು ಪಡಿಸುತ್ತಿದೆ.
ರಿವ್ಯೂಸ್ ಮತ್ತು ರೇಟಿಂಗ್ ರೇಸ್ ನಲ್ಲೂ ಮುಂದಿರುವ ಜಲಪಾತ ಪರಿಸರ ಕಾಳಜಿ, ಜೀವನ ಮೌಲ್ಯ, ಸಂಬಂಧಗಳ ಶ್ರೇಷ್ಠತೆಯನ್ನು ಮಲೆನಾಡ ಸಂಸ್ಕೃತಿಯಲ್ಲಿ ಕಟ್ಟಿಕೊಡುವ ಸಿನಿಮಾ ಆಗಿದೆ. ಮಲೆನಾಡು ಕಲಾವಿದರಿಗೆ ಇದು ಒಂದು ಅದ್ಭುತವಾದ ಹೆಜ್ಜೆ ಮತ್ತು ಸಂಭ್ರಮದ ಕ್ಷಣ ಎಂದೇ ಹೇಳಬಹುದಾಗಿದೆ. ಬೆಂಗಳೂರಿನ ಗೋಪಾಲನ್ ಸಿನಿಮಾಸ್ ಸಿರ್ಸಿ ಸರ್ಕಲ್, ಚಿಕ್ಕಮಗಳೂರು ನಾಗಲಕ್ಷ್ಮೀ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ.