- ಲಸಿಕೆ ನಂಬಿ ಕೂತರೇ ಗೋವಿಂದಾ…
ಲಂಡನ್: ಕರೋನಾ ಶೀಘ್ರ ಹೋಗಲ್ಲ..ಜನರನ್ನು ಬಿಡಲ್ಲ ಎಂಬ ಬ್ರಿಟನ್ ಮೂಲದ ವಿಜ್ಞಾನಿಗಳ ಈ ಅಭಿಪ್ರಾಯ ತೀವ್ರ ಸಂಚಲನ ಸೃಷ್ಟಿಸಿದೆ. ಜಗತ್ತಿನಾದ್ಯಂತ ಕರೊನಾ ಸೋಂಕಿತರ ಸಂಖ್ಯೆ 4 ಕೋಟಿ ಗಡಿದಾಟಿದ ಬೆನ್ನಲ್ಲೇ ವಿಜ್ಞಾನಿಗಳು ಆಘಾತಕಾರಿ ಸುದ್ದಿ ಹೊರಹಾಕಿದ್ದಾರೆ. ಈಗಾಗಲೇ ಎಲ್ಲಾ ದೇಶಗಳು ಕರೋನದಿಂದ ಇಡೀ ವ್ಯವಸ್ಥೆಯನ್ನೇ ತಲೆಕೆಳಗು ಮಾಡಿಕೊಂಡಿವೆ.
ಜಗತ್ತಿನಿಂದ ಕರೋನಾ ವೈರಸ್ ಅಷ್ಟು ಸುಲಭವಾಗಿ ಮರೆಯಾಗಲು ಸಾಧ್ಯವಿಲ್ಲ. ಲಸಿಕೆ ಸಂಶೋಧನೆ ಸಕ್ಸಸ್ ಕಂಡರೂ ಕೊರೊನಾ ವೈರಸ್ ನಿಯಂತ್ರಣ ಸಾಧ್ಯವಷ್ಟೇ ಆದರೆ ನಿರ್ಮೂಲನೆ ಮಾಡಲು ಆಗದು ಎಂದಿದ್ದಾರೆ ತಜ್ಞರು. ಬ್ರಿಟನ್ನಲ್ಲಿ ಕೊರೊನಾ ಲಸಿಕೆ ಸಂಶೋಧನೆ ಭರದಿಂದ ಸಾಗಿದೆ. ಮತ್ತೊಂದು ಕಡೆ ಚಳಿಗಾಲದ ಹಿನ್ನೆಲೆ 2ನೇ ಅಲೆಯ ಹೊಡೆತಕ್ಕೆ ಸಿಲುಕಿ ಬ್ರಿಟನ್ ಸೇರಿದಂತೆ ಯುರೋಪ್ ರಾಷ್ಟ್ರಗಳು ನಲುಗಿ ಹೋಗಿವೆ. ಈ ಸಂದಿಗ್ಧ ಸಂದರ್ಭದಲ್ಲಿ ವಿಜ್ಞಾನಿಗಳು ಶಾಕ್ ಮೇಲೆ ಶಾಕ್ ಕೊಟ್ಟಿದ್ದಾರೆ.
ಈವರೆಗೂ ಯಾವುದೇ ಕೊರೊನಾ ಲಸಿಕೆಗಳು ಅಷ್ಟು ಪ್ರಮಾಣದಲ್ಲಿ ಪ್ರಭಾವ ಬೀರುತ್ತಿಲ್ಲ. ಅಕಸ್ಮಾತ್ ವ್ಯಾಕ್ಸಿನ್ ಸಕ್ಸಸ್ ಆದರೂ ಕೊರೊನಾ ತೊಲಗುತ್ತೆ ಎಂಬುದು ಭ್ರಮೆ, ಲಸಿಕೆ ಮೂಲಕ ಸದ್ಯಕ್ಕೆ ಅದನ್ನ ನಿಯಂತ್ರಿಸಬಹುದು. ಲಸಿಕೆ ಬಂದ ನಂತರವೂ ಹಲವು ವರ್ಷಗಳ ಕಾಲ ಕೊರೊನಾ ಭೂಮಿ ಮೇಲೆ ಇರುತ್ತದೆ ಎಂದು ಎಚ್ಚರಿಸಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆಯಿಂದ ಇದ್ದು ಜೀವ ಉಳಿಸಿಕೊಳ್ಳಿ ಎಂದು ಬ್ರಿಟನ್ ತಜ್ಞರು ಜಗತ್ತಿಗೆ ಸಲಹೆ ನೀಡಿದ್ದಾರೆ.