- ಭಾರತೀಯ ಮೂಲದ ಬಾಲಕಿಯಿಂದ ಸಾಧನೆ
- ಅಮೆರಿಕಾದಲ್ಲಿ 25,000 ಡಾಲರ್ ಬಹುಮಾನ ಪಡೆದ ಬಾಲಕಿ!
ಹೌಸ್ಟನ್: ಮಹಾಮಾರಿ ಕರೋನಾ ಇಡೀ ವಿಶ್ವವನ್ನೇ ಕಂಗೆಡಿಸಿದೆ. ಔಷಧ ಕಂಡುಹಿಡಿಯಲು ತಾ ಮುಂದು ಎಂದು ಎಲ್ಲಾ ದೇಶಗಳು ರೇಸ್ಗೆ ಬಿದ್ದಿವೆ. ವೈರಸ್ಗೆ ಲಸಿಕೆ ಕಂಡು ಹಿಡಿಯಲು ಜಗತ್ತಿನಾದ್ಯಂತ ಹಲವು ವಿಜ್ಞಾನಿಗಳು ಶ್ರಮಿಸುತ್ತಿರುವಾಗ ಭಾರತೀಯ ಮೂಲದ 14 ವರ್ಷದ ಅಮೆರಿಕಾ ಸಂಜಾತ ಬಾಲಕಿಯೊಬ್ಬರು ಕರೋನಾಕ್ಕೆ ಸಂಭಾವ್ಯ ಚಿಕಿತ್ಸೆ ಕಂಡುಹಿಡಿಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.
ಅಮೆರಿಕದ ಟೆಕ್ಸಾಸ್ನ ಫ್ರಿಸ್ಕೋನಲ್ಲಿ ನೆಲೆಸಿರುವ ಭಾರತೀಯ ಮೂಲದ ಬಾಲಕಿ ಅನಿಕಾ ಚೆಬ್ರೊಲು ಅವರು ಕೋವಿಡ್-19 ಸಂಭಾವ್ಯ ಚಿಕಿತ್ಸೆ ಒದಗಿಸುವ ಸಂಶೋಧನೆಗಾಗಿ 25,000 ಡಾಲರ್ ಬಹುಮಾನ ಹಾಗೂ 3 ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್ ಗೆದ್ದಿದ್ದಾರೆ. 3 ಎಂ ಚಾಲೆಂಜ್ ವೆಬ್ಸೈಟ್ನ ಪ್ರಕಾರ, ಕರೋನಾ ವೈರಸ್ ಸಾಂಕ್ರಾಮಿಕಕ್ಕೆ ಚಿಕಿತ್ಸೆ ಕಂಡುಹಿಡಿಯುವ ಪ್ರಯತ್ನದ ಭಾಗವಾಗಿ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಅನಿಕಾ ಸಂಶೋಧನೆ ಹೊಸ ಭರವಸೆ ಮೂಡಿಸಿದೆ.