- ಬೆಳಗಾವಿತಲ್ಲಿ ಘಟನೆ: ಲಘು ಲಾಠಿ ಪ್ರಹಾರ
ನಮ್ಮೂರ್ ಎಕ್ಸ್ಪ್ರೆಸ್ ನ್ಯೂಸ್ ನೆಟ್ವರ್ಕ್
ಬೆಳಗಾವಿ: ರಸ್ತೆಯಲ್ಲಿ ಒಂಟಿಯಾಗಿ ನಿಂತಿದ್ದ ರೌಡಿ ಶೀಟರ್ಗೆ ಹತ್ತಕ್ಕೂ ಹೆಚ್ಚು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹಿಗ್ಗಾಮಗ್ಗಾ ಹೊಡೆದು ಕೊಲೆಗೈದ ಘಟನೆ ನಗರದಲ್ಲಿ ಸೋಮವಾರ ಸಂಭವಿಸಿದೆ.
ರೌಡಿಶೀಟರ್ ಶಹಬಾಜ್ ಎಂಬುವನೇ ಹತ್ಯೆಯಾದವ. ರಸ್ತೆಯಲ್ಲಿ ಒಂಟಿಯಾಗಿ ನಿಂತಿದ್ದ ಶಹಬಾಜನ ಮೇಲೆ ಹತ್ತಕ್ಕೂ ಹೆಚ್ಚು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ನಡೆಸಿದ್ದರಿಂದ ಆತ ಕ್ಷಣಾರ್ಧದಲ್ಲಿ ರಕ್ತದ ಮಡವಿನಲ್ಲಿ ಬಿದ್ದುಕೊಂಡಿದ್ದ. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಪೆÇಲೀಸರು ಮಾರಣಾಂತಿಕ ಗಾಯಗೊಂಡಿದ್ದ ರೌಡಿಶೀಟರ್ನನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾನೆ. ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಯುವಕರ ತಂಡ ಜಿಲ್ಲಾ ಆಸ್ಪತ್ರೆ ಬಳಿ ಜಮಾಯಿಸಿತು. ಯುವಕರನ್ನು ಚದುರಿಸಲು ಪೆÇಲೀಸರು ಲಘು ಲಾಠಿ ಪ್ರಹಾರ ನಡೆಸಿದ ಪ್ರಸಂಗವೂ ನಡೆಯಿತು.
ಕೊಲೆಗೆ ನಿಖರವಾದ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಹತ್ಯೆಯಾದ ರೌಡಿಶೀಟರ್ ಹಲವರೊಂದಿಗೆ ದ್ವೇಷಕಟ್ಟಿಕೊಂಡಿದ್ದನಲ್ಲದೆ, ಸಣ್ಣಪುಟ್ಟ ಪ್ರಕರಣಗಳು ಭಾಗಿಯಾಗಿ ದುಂಡಾರ್ವತನೆ ಪ್ರದರ್ಶಿಸುತ್ತಿದ್ದ ಎಂದು ಹೇಳಲಾಗಿದೆ.