- ಉಡುಪಿಯ ರಕ್ಷಿತಾ ಆತ್ಮಹತ್ಯೆ ಪ್ರಕರಣದ ರೋಚಕ ಕಥೆ
ಉಡುಪಿ: ಓದುವ ವಯಸ್ಸಲ್ಲಿ ಮನೆ ಬಿಟ್ಟು ಫ್ಯಾಷನ್, ಸಾಮಾಜಿಕ ಜಾಲತಾಣಗಳ ಗೀಳಿಗೆ ಬಿದ್ದಿದ್ದ ಕುಕ್ಕೆಹಳ್ಳಿ ರಕ್ಷಿತಾ ನಾಯಕ್ ಸಂಶಯಾಸ್ಪದ ಸಾವಿಗೆ ವಿವಾಹಿತ ಪ್ರಿಯಕರ ಪ್ರಶಾಂತ್ ಕುಂದರ್ ತನ್ನ ಪತ್ನಿಯನ್ನು ತೊರೆದು ತನ್ನ ಜತೆ ವಾಸ ಮಾಡಿಲ್ಲ ಎಂಬುದೇ ಕಾರಣ ಎಂದು ಹೇಳಲಾಗಿದೆ.
ತೀವ್ರ ಅಸ್ವಸ್ಥಳಾಗಿದ್ದ ರಕ್ಷಿತಾಳನ್ನು ಆಸ್ಪತ್ರೆ ಸೇರಿಸಿ ಪರಾರಿಯಾಗಿದ್ದ ಪ್ರಶಾಂತ್ನನ್ನು ವಶಕ್ಕೆ ಪಡೆದ ಉಡುಪಿ ಪೆÇಲೀಸರು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಬಾಯಿಬಿಟ್ಟಿದ್ದಾನೆ. ಇದೀಗ ಹದಿ ಹರೆಯದ ಜೀವನದ ಮೋಜಿಗೆ ಪಾಲಕರು ಪಶ್ಚಾತಾಪ ಪಡುವಂತಾಗಿದೆ.
ಏನಿದು ಘಟನೆ?: ಶನಿವಾರ ಕುಕ್ಕೆಹಳ್ಳಿಯ ರಕ್ಷಿತಾ ನಾಯಕ್ ತಾನು ವಾಸಿಸುತ್ತಿದ್ದ ಬಾಡಿಗೆ ಮನೆಯ ಅಂಬಾಗಿಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಮುನ್ನ, ಪ್ರಿಯಕರ ಪ್ರಶಾಂತ್ ಕುಂದರ್ಗೆ ಫೆÇೀನ್ ಮಾಡಿ, ತನ್ನ ಜತೆ ಸಂಸಾರ ಮಾಡಬೇಕು, ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಸಂಭಾಷಣೆ ಕಡಿತಗೊಳಿಸಿದ್ದಳು. ಪ್ರಶಾಂತ್ ಆಕೆಯಿದ್ದ ಬಾಡಿಗೆ ಮನೆಗೆ ದೌಡಾಯಿಸಿದ್ದು, ಅಷ್ಟರಲ್ಲಿ ಆಕೆ ನೇಣು ಬೀಗಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಪ್ರಶಾಂತ್ ಮನೆಯ ಹಿಂಬಾಗಿಲನ್ನು ಒಡೆದು, ಆಕೆಯನ್ನು ಕುಣಿಕೆಯಿಂದ ಕೆಳಗಿಳಿಸಿ, ನಂತರ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದ. ಅಷ್ಟೊತ್ತಿಗಾಗಲೇ ರಕ್ಷಿತಾ ಪ್ರಾಣ ಹಾರಿಹೋಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಪ್ರಶಾಂತ್ ಆಕೆಯ ಮನೆಯವರಿಗೆ ವಿಷಯ ತಿಳಿಸಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ನಂತರ ಹೆದರಿ ಆಸ್ಪತ್ರೆಯಿಂದ ಕಾಲ್ಕಿತ್ತಿದ್ದ ಎನ್ನಲಾಗಿದೆ.
ಇಂಟೀರಿಯರ್ ಡಿಸೈನ್ ಕೆಲಸ ಮಾಡುತ್ತಿದ್ದ ಪ್ರಶಾಂತ್ಗೆ ಇನ್ಸ್ಟಾಗ್ರಾಮ್ ನಲ್ಲಿ ರಕ್ಷಿತಾ ಪರಿಚಯವಾಗಿದ್ದಳು. ಆಕೆ ಕೂಡ ಇನ್ಸ್ಟಾಗ್ರಾಮ್ನಲ್ಲಿ ಇಂಟೀರಿಯರ್ ಡಿಸೈನ್ ವಸ್ತುಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದಳು. ಪ್ರಶಾಂತ್ ರಕ್ಷಿತಾ ಜತೆ ಅಕ್ರಮ ಸಂಬಂಧ ಹೊಂದಿದ್ದು, ಆಕೆಗಾಗಿ ಬಾಡಿಗೆ ಮನೆಯನ್ನೂ ಕೂಡ ಮಾಡಿಸಿಕೊಟ್ಟಿದ್ದ. ರಕ್ಷಿತಾ ತಾನು ಮಂಗಳೂರಿನ ಪಿಜಿಯಲ್ಲಿ ಇರುವುದಾಗಿ ಹೆತ್ತವರಿಗೆ ಸುಳ್ಳು ಹೇಳಿದ್ದಳು. ಪ್ರಶಾಂತ್ ಪತ್ನಿಗೂ ತನ್ನ ಪತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದಿದ್ದು, ರಕ್ಷಿತಾಗೆ ಫೆÇೀನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಳು ಎನ್ನಲಾಗಿದೆ.