- ಅದಾನಿ ಗ್ರೂಪ್ ಸೇರಿದ ಬಜಪೆ ವಿಮಾನ ನಿಲ್ದಾಣ
- ತಿಂಗಳಾಂತ್ಯದಿಂದ ನಿರ್ವಹಣೆ, ಅಭಿವೃದ್ಧಿ ಹೊಣೆ
ಹೊಸದಿಲ್ಲಿ: ಮಂಗಳೂರು ಬಜಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಯ ಹೊಣೆಯನ್ನು ಅ.31ರಂದು ಅದಾನಿ ಗ್ರೂಪ್ ಕೈಗೆತ್ತಿಕೊಳ್ಳಲಿದೆ.
ನ.2 ಮತ್ತು 11ರಂದು ಕ್ರಮವಾಗಿ ಲಖನೌ ಮತ್ತು ಅಹಮದಾಬಾದ್ ವಿಮಾನ ನಿಲ್ದಾಣದ ನಿರ್ವಹಣೆಯೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಅದಾನಿ ಕಂಪನಿಗೆ ಹಸ್ತಾಂತರವಾಗಲಿದೆ.
ಮೂರು ವಿಮಾನ ನಿಲ್ದಾಣಗಳ ಆಡಳಿತವನ್ನು ವಹಿಸಿಕೊಳ್ಳಲು ಅದಾನಿ ಗ್ರೂಪ್ಗೆ ನವೆಂಬರ್ 12ರ ಗಡುವು ನೀಡಲಾಗಿತ್ತು. 2019ರ ಫೆಬ್ರವರಿಯಲ್ಲಿ ಹರಾಜಿನ ಮೂಲಕ ಈ ಮೂರು ವಿಮಾನ ನಿಲ್ದಾಣಗಳು ಸೇರಿ 6 ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿ ಗ್ರೂಪ್ ಗೆದ್ದುಕೊಂಡಿತ್ತು. ಆದರೆ ಕರೋನಾ ಕಾರಣಕ್ಕೆ ಇದರಲ್ಲಿ ಮೂರು ಏಪೆರ್Çೀಟ್ರ್ಗಳ ನಿರ್ವಹಣೆಯನ್ನು ನಿಗದಿತ ಸಮಯಕ್ಕೆ ಗೌತಮ್ ಅದಾನಿ ಒಡೆತನದ ಕಂಪನಿ ವಹಿಸಿಕೊಂಡಿರಲಿಲ್ಲ. ಈಗಾಗಲೇ ಗುವಾಹಟಿ, ಜೈಪುರ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳ ನಿರ್ವಣೆಯನ್ನು ಅದಾನಿ ಗ್ರೂಪ್ ನಡೆಸುತ್ತಿದೆ. ಇದರ ಜೊತೆಗೆ ಮುಂಬಯಿ ವಿಮಾನ ನಿಲ್ದಾಣದ ನಿರ್ವಹಣೆಯನ್ನೂ ತನ್ನ ವಶಕ್ಕೆ ಪಡೆದುಕೊಳ್ಳಲು ಕಂಪನಿ ಮುಂದಾಗಿದೆ. ಇನ್ನು ನವಿ ಮುಂಬಯಿ ವಿಮಾನ ನಿಲ್ದಾಣದ ನಿರ್ವಹಣಾ ಕಂಪನಿಯ ಹೆಚ್ಚಿನ ಪಾಲನ್ನೂ ಮುಂದಿನ ದಿನಗಳಲ್ಲಿ ಅದಾನಿ ಗ್ರೂಪ್ ಖರೀದಿಸಲಿದೆ. ಇನ್ನೂ ಆರು ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ಧರಿಸಿದೆ. ವಾರಣಾಸಿ, ಅಮೃತಸರ, ಭುವನೇಶ್ವರ, ರಾಯ್ಪುರ್, ಇಂದೋರ್ ಮತ್ತು ತಿರುಚ್ಚಿ ವಿಮಾನ ನಿಲ್ದಾಣಗಳು ಖಾಸಗೀಕರಣಗೊಳ್ಳಲಿರುವ ವಿಮಾನ ನಿಲ್ದಾಣಗಳಾಗಿವೆ. ಮಂಗಳೂರು ವಿಮಾನ ನಿಲ್ದಾಣ ಇನ್ಮುಂದೆ ಹೈಟೆಕ್ ಆಗುವ ಸಾಧ್ಯತೆಗಳಿವೆ.