BREAKING NEWS
ಮುರುಡೇಶ್ವರದಲ್ಲಿ 4, ಕೊಪ್ಪದಲ್ಲಿ 2 ಮಕ್ಕಳು ನೀರುಪಾಲು!?
– ಈಜಲು ಹೋದ ನಾಲ್ಕು ಬಾಲಕರು ದುರ್ಮರಣ
– ಕೊಪ್ಪದಲ್ಲಿ 2 ಮಕ್ಕಳು ಬಾವಿಗೆ ಬಿದ್ದು ಸಾವು!
– ಅಮ್ಮಡಿ ಎಸ್ಟೇಟ್ ಬಳಿಯಿಂದ ಆಟ ಆಡುತ್ತಾ ಕಾಣೆಯಾಗಿದ್ದ ಮಕ್ಕಳು
NAMMUR EXPRESS NEWS
ಮುರುಡೇಶ್ವರ: ಈಜಲು ತೆರಳಿದ್ದ ನಾಲ್ವರು ನೀರು ಪಾಲಾಗಿರುವ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲ ತೀರದಲ್ಲಿ ಈ ಘಟನೆ ನಡೆದಿದೆ. ಶೈಕ್ಷಣಿಕ ಪ್ರವಾಸಕ್ಕೆಂದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೊತ್ತೂರು ಶಾಲೆ ವತಿಯಿಂದ ವಿದ್ಯಾರ್ಥಿಗಳು ಮುರುಡೇಶ್ವರಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ. ನಾಲ್ವರು ಬಾಲಕರು ಸಮುದ್ರದ ಪಾಲಾಗಿದ್ದಾರೆ. ಸುಮಾರು 54 ವಿದ್ಯಾರ್ಥಿಗಳು ಕಡಲ ತೀರದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ನಾಲ್ವರು ಬಾಲಕರು ಕೊಚ್ಚಿಕೊಂಡು ಹೋಗಿದ್ದಾರೆ. ಓರ್ವ ವಿದ್ಯಾರ್ಥಿ ಶವ ಪತ್ತೆಯಾಗಿದ್ದು, ಇನ್ನುಳಿದ ಮೂವರು ವಿದ್ಯಾರ್ಥಿಗಳಿಗೆ ಶೋಧ ಕಾರ್ಯ ನಡೆದಿದೆ.
ಕೊಪ್ಪದಲ್ಲಿ 2 ಮಕ್ಕಳು ಬಾವಿಗೆ ಬಿದ್ದು ಸಾವು!
ಕೊಪ್ಪ: ಕೊಪ್ಪದ ಅಮ್ಮಡಿ ಎಸ್ಟೇಟ್ ಬಳಿಯಿಂದ ಆಟ ಆಡುತ್ತಾ ಬಾವಿ ಬಳಿಗೆ ಹೋಗಿದ್ದ ಇಬ್ಬರು ಮಕ್ಕಳು ಬಾವಿಗೆ ಬಿದ್ದು ಸಾವನ್ನು ಕಂಡಿರುವ ಘಟನೆ ಮಂಗಳವಾರ ನಡೆದಿದೆ. ಹಗಲು ವೇಳೆಗೆ ಇಬ್ಬರೂ ಮಕ್ಕಳು ಕಾಣೆಯಾಗಿದ್ದು, ಎಸ್ಟೇಟ್ ಕೆಲಸಕ್ಕೆ ವಲಸೆ ಬಂದಿರುವ ಹಿಂದಿ ಕುಟುಂಬಕ್ಕೆ ಸೇರಿದವರಾಗಿದ್ದು, 5 ವರ್ಷ ಹಾಗೂ 1 ವರ್ಷದ ಮಕ್ಕಳಾಗಿರುತ್ತಾರೆ. ಸುಮಾರು ಐದು ಗಂಟೆಗಳ ಪ್ರಯತ್ನದ ನಂತರ ಮೃತ ದೇಹವು ಬಾವಿಯ ಚೌಗು ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದು ಅಗ್ನಿ ಶಾಮಕ ದಳದವರು ಹೊರ ತೆಗೆದಿದ್ದು, ಇದೀಗ ಇನ್ನಷ್ಟೇ ಮಾಹಿತಿ ಹೊರ ಬರಬೇಕಿದೆ.