ಕುಡಿದ ನಶೆಯಲ್ಲಿ ಮಚ್ಚು ಬೀಸಿದ ಪ್ರಮುಖ ಆರೋಪಿ ಹೆಂಡ್ತಿ ಮನೆಯಲ್ಲಿ ಅರೆಸ್ಟ್!
– ಹಾವೇರಿಯಲ್ಲಿ ಪತ್ನಿ ಮನೆಯಲ್ಲಿ ಕದ್ದು ಕುಳಿತಿದ್ದ
– ಶಿವಮೊಗ್ಗದಲ್ಲಿ ಮತ್ತೊಂದು ವೇಶ್ಯಾವಾಟಿಕೆ ಪ್ರಕರಣ ಬಯಲು
– ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಎರಡನೇ ಬಾರಿ ನೋಟಿಸ್!
NAMMUR EXPRESS NEWS
ತೀರ್ಥಹಳ್ಳಿ: ಕುಡಿದ ನಶೆಯಲ್ಲಿ ಪಟ್ಟಣದಲ್ಲೇ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿ ತಲ್ವಾರ್ ಬೀಸಿ ಹಲ್ಲೆ ನಡೆಸಿದ್ದ ಘಟನೆ ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಇದೀಗ ಹಾವೇರಿಯಲ್ಲಿ ತೀರ್ಥಹಳ್ಳಿ ಪೊಲೀಸರಿಗೆ ತನ್ನ ಪತ್ನಿ ಮನೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ.
ಲಾಂಗ್ ಬೀಸಿದ ಪ್ರಕರಣದ ಕಿಂಗ್ ಪಿನ್ ಚೋರ್ ಸಮೀರ್ ತೀರ್ಥಹಳ್ಳಿಯಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಕಳ್ಳತನ ಪ್ರಕರಣದಲ್ಲಿ ಈಗಾಗಲೇ ಒಮ್ಮೆ ಅರೆಸ್ಟ್ ಆಗಿದ್ದ.
ಏನಿದು ಘಟನೆ?:
ಜೀವಿತ್ , ಅಪ್ರೋಜ್, ಸಾದಿಕ್ ಮತ್ತು ರಾಘವೇಂದ್ರ ಎಂಬ ಯುವಕರು ತಮ್ಮ ಸ್ನೇಹಿತನೊಬ್ಬ ಅನಾರೋಗ್ಯದಿಂದ ಬಳಲುತ್ತಿದ್ದು, ಆತನನ್ನ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ ಮಧ್ಯಾಹ್ನ 1-30 ರ ವೇಳೆಯಲ್ಲಿ ಆಸ್ಪತ್ರೆಯ ಪಕ್ಕದಲ್ಲಿರುವ ಬಾರಿಗೆ ಹೋಗಿದ್ದಾರೆ.ಬಾರ್ ನಿಂದ ಈ ನಾಲ್ವರು ಹೊರ ಬರುತ್ತಿದ್ದ ವೇಳೆ ಸ್ನೇಹಿತರೊಂದಿಗೆ ಬಂದ ಸಮೀರ್ ಮತ್ತು ಆತನ ಸ್ನೇಹಿತರು ಅಫ್ರೋಜ್ ಗೆ ಅವ್ಯಾಚ್ಯ ಶಬ್ದಗಳೊಂದಿಗೆ ಬೈದು ಜಗಳವಾಡಿದ್ದಾರೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಇಬ್ಬರನ್ನೂ ವಾಪಾಸ್ ಕಳುಹಿಸಿದ್ದಾರೆ.
ಇದಾದ ಸ್ವಲ್ಪ ಸಮಯದ ನಂತರ ಮತ್ತೆ ಅಫ್ರೋಜ್ ಚೋರ್ ಸಮೀರ್ ಗೆ ಕರೆ ಮಾಡಿ ಮಧ್ಯಾಹ್ನ ಆಸ್ಪತ್ರೆಯ ಬಳಿಯಿದ್ದ ಬಾರಿನಲ್ಲಿ ನನ್ನನ್ನ ಬೈದಿದ್ದೇಕೆ ಎಂದು ಪ್ರಶ್ನಿಸಿದ್ದಾನೆ. ನಂತರ ಚೋರ್ ಸಮೀರ್ ಎಲ್ಲಿದೀಯ ಎಂದು ವಾಪಾಸ್ ಕೇಳಿದ್ದಾನೆ.
ಆಗುಂಬೆ ಬಸ್ ನಿಲ್ದಾಣದ ಬಾರ್ ಬಳಿ ಇದ್ದೇನೆ ಎಂದು ಅಫ್ರೋಜ್ ಹೇಳಿದ್ದಕ್ಕೆ ಏಕಾಏಕಿ ಚೋರ್ ಸಮೀರ್ ಬಾರ್ ಬಳಿ ಬಂದು ಅಫ್ರೋಜ್ ಗೆ ಆವಾಜ್ ಹಾಕಿದ್ದು, ನಂತರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಫ್ರೋಜ್ ಮತ್ತು ಆತನ ಸ್ನೇಹಿತರನ್ನು ಸಫನ್ ಮತ್ತು ಇತರೆ ನಾಲ್ವರ ಜೊತೆ ಬಂದ ಚೋರ್ ಸಮೀರ್ ರಸ್ತೆ ಉದ್ದಕ್ಕೂ ಅಟ್ಟಾಯಿಸಿಕೊಂಡು ಮಚ್ಚು ಬೀಸಿದ್ದಾನೆ.
ಈ ಸಮಯದಲ್ಲಿ ಅಪ್ರೋಜ್ ತಲೆಗೆ ಗಾಯವಾಗಿದೆ. ಈ ವೇಳೆ ಜೀವಿತ್ ಗೂ ಗಾಯವಾಗಿದೆ. ಅವರನ್ನು ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ, ಹಲ್ಲೆ ನೆಡೆಸಿದ್ದ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದ್ದಂತೆ ತೀರ್ಥಹಳ್ಳಿ ಪೊಲೀಸರು ಗಲಾಟೆ ನಡೆಸಿದ 5 ಮಂದಿಯನ್ನು ಬಂಧಿಸಿದ್ದು ಇದೀಗ ಮತ್ತೋರ್ವ ಸಿಕ್ಕಿ ಬಿದ್ದಿದ್ದಾನೆ.
ಮನೆಯಲ್ಲೇ ವೇಶ್ಯವಾಟಿಕೆ: ಇಬ್ಬರ ವಿರುದ್ಧ ಕೇಸ್!
ಶಿವಮೊಗ್ಗದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದು ಮಹಿಳೆಯನ್ನ ಕೂಡಿ ಹಾಕಿ ವೇಶ್ಯಾವಾಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸ್ಪಾ ಮತ್ತು ಬ್ಯೂಟಿ ಪಾರ್ಲರ್ ನಲ್ಲಿ ವೇಶ್ಯವಾಟಿಕೆ ನಡೆಯುತ್ತಿರುವ ಬೆನ್ನಲ್ಲೇ ಪೊಲೀಸರು ಈ ಪಾರ್ಲರ್ ಗಳ ಮೇಲೆ ದಾಳಿನಡೆಸಿ ಮಹಿಳೆಯರನ್ನ ರಕ್ಷಿಸಿದ್ದರು. ಈ ಪಾರ್ಲರ್ ಗಳ ಮೇಲೆ ದಾಳಿಯಲ್ಲಿ ಮೂರನೇ ವ್ಯಕ್ತಿಗಳ ಹೆಸರು ಕೇಳಿ ಬರುತ್ತಿದ್ದು ಅವರ ಕುಮ್ಮಕ್ಕಿನಿಂದಲೇ ದಾಳಿ ನಡೆದಿದೆ ಎನ್ನಲಾಗುತ್ತದೆ ಆದರೂ ಇದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವ ದೂರು ದಾಖಲಾಗಿಲ್ಲ.
29 ವರ್ಷದ ವಯಸ್ಸಿನ ಮಹಿಳೆಗೆ ಕಷ್ಟ ಮತ್ತು ಹಣದ ಅವಶ್ಯಕತೆಯಿದ್ದ ಪರಿಣಾಮ ಗಂಡನಿಗೆ ಗೊತ್ತಾಗದಂತೆ ಬೆಂಗಳೂರಿನ ನಿವಾಸಿಯೊಬ್ಬಳ ಸಹಾಯದೊಂದಿಗೆ ಈ ಮೂರು ಊರುಗಳಿಗೆ ಬಂದು ಹಣಸಂಪಾದಿಸಿ ವಾಪಾಸಾಗುತ್ತಿದ್ದಳು. ಜು.08ರಂದು ಬ್ಯೂಟಿಷಿಯನ್ಕೋರ್ಸ್ ಮುಗಿಸಿದ್ದ ಈ ಮಹಿಳೆ ತನ್ನ ಗಂಡನಿಗೆ ಮದುವೆಯೊಂದರಲ್ಲಿ ಮದುಮಗಳಿಗೆ ಅಲಂಕಾರ ಮಾಡಿ ಬರುವುದಾಗಿ ಹೇಳಿ ಶಿವಮೊಗ್ಗಕ್ಕೆ ಬಂದಿದ್ದು ಇಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಳು.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಎರಡನೇ ಬಾರಿ ನೋಟಿಸ್ ನೀಡಿದ ಎನ್ ಐಎ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ ಐಎ) ಆಗಸ್ಟ್ 18ರೊಳಗೆ ಶರಣಾಗುವಂತೆ ಇದೀಗ ಎರಡನೇ ಬಾರಿ ನೋಟಿಸ್ ನೀಡಿದೆ.
ಎನ್ ಐಎ ಕೋರ್ಟ್ ಆದೇಶದಂತೆ ಎನ್ ಐಎ ಅಧಿಕಾರಿಗಳು ದ.ಕ.ಜಿಲ್ಲೆಯ ಪುತ್ತೂರು ಹಾಗೂ ಸುಳ್ಯ ವ್ಯಾಪ್ತಿಯಲ್ಲಿ ಎಚ್ಚರಿಕೆ ನೋಟಿಸ್ ಅಂಟಿಸಿದ್ದಾರೆ, ಅಲ್ಲದೆ ಧ್ವನಿ ವರ್ಧಕ ಮೂಲಕವೂ ಎಚ್ಚರಿಕೆ ನೀಡಿದ್ದಾರೆ.
ಜೂನ್ ನಲ್ಲಿ ಮೊದಲ ಬಾರಿಗೆ ಎನ್ ಐಎ ಅಧಿಕಾರಿಗಳು ಇದೇ ರೀತಿ ಎಚ್ಚರಿಕೆ ನೀಡಿದ್ದರು. ಜೂನ್ 30ರಂದು ಶರಣಾಗುವಂತೆ ಗಡುವು ವಿಧಿಸಿದ್ದರು. ಶರಣಾಗದಿದ್ದರೆ ಆರೋಪಿಗಳ ಮನೆ, ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆ ನೀಡಿರುವ ಎನ್ ಐಎ ತಂಡ, ಆರೋಪಿಗಳ ಸುಳಿವು ನೀಡಿದವರಿಗೆ ನಗದು ಬಹುಮಾನ ಘೋಷಿಸಿದೆ.
ಇದನ್ನೂ ಓದಿ : ತುಂಬಿದ ನದಿಯಲ್ಲಿ ಮರ ಹಿಡಿದು ಜೀವ ಉಳಿಸಿಕೊಂಡ ಅಜ್ಜಿ!
HOW TO APPLY : NEET-UG COUNSELLING 2023