ಪ್ಲಾಸ್ಟಿಕ್ ತಿಂದು ಸಾವನ್ನಪ್ಪಿದ ಮೊಸಳೆ!?
– ಮೊಸಳೆ ಉದರದಲ್ಲಿತ್ತು 1 ಕೆಜಿ ಡೈಪರ್, ಪ್ಲಾಸ್ಟಿಕ್ ತ್ಯಾಜ್ಯ
– ದಕ್ಷಿಣ ಕನ್ನಡದ ಕಡಬದಲ್ಲಿ ಘಟನೆ
NAMMUR EXPRESS NEWS
ಕಡಬ: ಮಾನವನ ಅಸಡ್ಡೆಯ ವರ್ತನೆಯು ಮೂಕ ಪ್ರಾಣಿಗಳ ಆರೋಗ್ಯಕ್ಕೆ ದೊಡ್ಡ ಕಂಟಕವಾಗುತ್ತಿದೆ. ನಾವು ರಸ್ತೆಯ ಬದಿಯಲ್ಲಿ ಅಥವಾ ಬಯಲಿನಲ್ಲಿ ಎಸೆಯಲಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೆಚ್ಚಾಗಿ ಈ ಬೀದಿಯಲ್ಲಿ ಓಡಾಡುವ ಹಸುಗಳು ಸೇವಿಸಿ ಮೃತಪಟ್ಟ ಸುದ್ದಿ ಅಗ್ಗಾಗ್ಗೆ ಕೇಳಬಹುದು. ಆದರೆ ಇದೇ ಪ್ಲಾಸ್ಟಿಕ್ ಇತ್ತೀಚೆಗೆ ಜಲಚರಗಳಿಗೂ ಕಂಟಕವಾಗುತ್ತಿದೆ. ಇತ್ತೀಚೆಗೆ ದ.ಕ. ಜಿಲ್ಲೆಯ ಕಡಬದಲ್ಲಿ 3-4 ವರ್ಷದ ಹೆಣ್ಣು ಮೊಸಳೆಯೊಂದು ಮೃತಪಟ್ಟಿತ್ತು. ಬಿಸಿಲ ಝಳಕ್ಕೋ, ಕಾದಾಟದಲ್ಲೋ ಮೊಸಳೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ಇದೀಗ ಮರಣೋತ್ತರ ಪರೀಕ್ಷೆ ಸತ್ಯಾಂಶ ಬಹಿರಂಗವಾಗಿದೆ.
ಕುಮಾರಧಾರಾ ನದಿಯಲ್ಲಿ ಮೊಸಳೆ ಸಾವು!
ಕಡಬ ಸಮೀಪದ ಕೊಡಿಂಬಾಳ ಗ್ರಾಮದ ವ್ಯಾಪ್ತಿಯ ಪುಳಿಕುಕ್ಕು ಎಂಬಲ್ಲಿ ಕುಮಾರಧಾರಾ ನದಿಯಲ್ಲಿ ಮೊಸಳೆ ಸಾವಿಗೆ ತ್ಯಾಜ್ಯ ಸೇವನೆ ಹಾಗೂ ಪ್ಲಾಸ್ಟಿಕ್ ಕಾರಣ ಎಂಬವುದು ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ವೇಳೆ ಮೊಸಳೆಯ ಹೊಟ್ಟೆಯಲ್ಲಿ 1 ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ಪತ್ತೆಯಾಗಿದೆ. ಪ್ಲಾಸ್ಟಿಕ್ನಲ್ಲಿದ್ದ ತ್ಯಾಜ್ಯ ಅಜೀರ್ಣ ವಾದದ್ದು ಮೊಸಳೆಯ ಸಾವಿಗೆ ಕಾರಣವಾಯಿತೇ ಅಥವಾ ಪ್ಲಾಸ್ಟಿಕ್ ಕಾರಣವಾಯಿತೇ ಎಂಬುದು ಇನ್ನಷ್ಟು ತನಿಖೆಯಿಂದ ಹೊರಬರಬೇಕಿದೆ.
ಪ್ಲಾಸ್ಟಿಕ್ ಹಾಗೂ ತ್ಯಾಜ್ಯಕ್ಕೆ ಮೊಸಳೆ ಬಲಿ!
ಈ ವಿಚಾರ ನಿಜಕ್ಕೂ ಆತಂಕಕಾರಿಯಾಗಿದ್ದು, ಇದೇ ಪ್ರಥಮ ಬಾರಿಗೆ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಸೇವನೆಯಿಂದ ಮೊಸಳೆ ಸತ್ತ ಪ್ರಕರಣ ಇದಾಗಿದೆ. ಶುಕ್ರವಾರ ಬೆಳಗ್ಗೆ ಪತ್ತೆಯಾದ ಮೊಸಳೆಯ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಡಬದ ಪಶುವೈದ್ಯಾಧಿಕಾರಿ ಡಾ.ಅಜಿತ್ ಅವರು ಅರಣ್ಯ ಇಲಾಖೆಯ ಏನೆಕಲ್ಲು ನರ್ಸರಿ ಪ್ರದೇಶದಲ್ಲಿ ಮೊಸಳೆಯ ಮರಣೋತ್ತರ ಪರೀಕ್ಷೆಯನ್ನು ಕಡಬದ ಪಶುವೈದ್ಯಾಧಿಕಾರಿ ಡಾ. ಅಜಿತ್ ನಡೆಸಿದರು. ಈ ಸಂದರ್ಭದಲ್ಲಿ ಮೊಸಳೆ ಹೊಟ್ಟೆಯಲ್ಲಿ ಮಕ್ಕಳಿಗೆ ಬಳಸುವ ಪ್ಯಾಡ್ ಮಕ್ಕಳಿಗೆ ಬಳಸುವ ಪ್ಯಾಡ್ ಸೇರಿ ಹಲವು ತ್ಯಾಜ್ಯ ಪತ್ತೆಯಾಗಿದೆ. ಮೊಸಳೆಗಳು ಕೂಡಾ ಅಳಿವಿನಂಚಿನಲ್ಲಿರುವ ಜೀವಿಗಳ ವರ್ಗಕ್ಕೆ ಸೇರುವುದರಿಂದ ಇನ್ನಾದರೂ ನೀರಿನ ಮೂಲಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದನ್ನು ನಿಲ್ಲಿಸುವುದು ಒಳಿತು.