ಕರಾವಳಿ ಬ್ರೇಕಿಂಗ್ ನ್ಯೂಸ್
ಭಾರೀ ಮಳೆ: ಕಾಲುವೆಗೆ ಬಿದ್ದ ಆಟೋ ಚಾಲಕ ಸಾವು!
– ಮಂಗಳೂರಿನಲ್ಲಿ ರಾಜಕಾಲುವೆಗೆ ಬಿದ್ದು ಆಟೋ ಚಾಲಕ
– ಕಾಸರಗೋಡು: ನಿದ್ರೆ ಮಾಡುತ್ತಿದ್ದ ಬಾಲಕಿ ಕಿಡ್ನಾಪ್: ಬಂಧನ
NAMMUR EXPRESS NEWS
ರಾಜ್ಯದಲ್ಲಿ ಮುಂಗಾರು ಮಳೆ ಇನ್ನಷ್ಟೇ ಆರಂಭ ಆಗಬೇಕಿದೆ. ಆದರೆ, ಪೂರ್ವ ಮುಂಗಾರಿನ ಆರ್ಭಟದಲ್ಲೇ ಹಲವು ಜಿಲ್ಲೆಗಳಲ್ಲಿ ಮರ ಬಿದ್ದು, ಕರೆಂಟ್ ಶಾಕ್ ಹೊಡೆದು, ಗೋಡೆ ಕುಸಿದು ಹಾಗೂ ಸಿಡಿನ ಆಘಾತಕ್ಕೆ ಜನರು ಬಲಿಯಾಗುತ್ತಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿಯೂ ಈ ಬಾರಿ ಮಳೆ ಅನಾಹುತ ಜಾಸ್ತಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಮಳೆ ಅನಾಹುತಕ್ಕೆ ಮಂಗಳೂರು ನಗರದಲ್ಲಿ ಮತ್ತೊಂದು ಅಮಾಯಕ ಜೀವ ಬಲಿಯಾಗಿದೆ. ಕೊಟ್ಟಾರ ಅಬ್ಬಕ್ಕ ನಗರದಲ್ಲಿ ರಾಜಕಾಲುವೆಗೆ ಆಟೋ ಉರುಳಿದ ಪರಿಣಾಮ ಚಾಲಕ ದೀಪಕ್ (40) ಮೃತಪಟ್ಟಿದ್ದಾರೆ. ಭಾರೀ ಮಳೆಯಿಂದಾಗಿ ರಾಜಕಾಲುವೆಯು ತುಂಬಿ ಹರಿಯುತ್ತಿದ್ದು ಕಾಲುವೆಗೆ ರಸ್ತೆ ಬದಿಯಲ್ಲಿ ತಡೆಗೋಡೆ ಕೂಡ ಇರಲಿಲ್ಲ. ರಾತ್ರಿವೇಳೆ ನೀರು ನಿಂತಿದ್ದ ರಸ್ತೆಯಲ್ಲಿ ಬಂದ ಚಾಲಕ ಏಕಾಏಕಿ ಗೊತ್ತಾಗದೆ ಕಾಲುವೆಗೆ ಬಿದ್ದು ಕೊಚ್ಚಿ ಹೋಗಿದ್ದಾರೆ. ಮಳೆಗಾಲ ಆರಂಭವಾಗುತ್ತಿದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವ ಮಹಾನಗರ ಪಾಲಿಕೆಯ ನಿರ್ಲಕ್ಷ್ಯ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಏಕೆಂದರೆ, ಮಳೆಗಾಲಕ್ಕೆ ಮೊದಲು ರಾಜ ಕಾಲುವೆ ಹೂಳು ತೆಗೆಯುವುದು, ಮಳೆ ನೀರು ಅಪಾಯ ಉಂಟು ಮಾಡುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ತಡೆಗೋಡೆ ನಿರ್ಮಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಆದರೆ, ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿಗೆ ಇದೀಗ ಆಟೋ ಚಾಲಕರೊಬ್ಬರು ಪ್ರಾಣ ಕಳೆದುಕೊಳ್ಳುವಂತಾಗಿದೆ.
ಮಂಗಳೂರಿನಲ್ಲಿ ಕಳ್ಳತನ: ಇಬ್ಬರು ಅರೆಸ್ಟ್
ಮಂಗಳೂರು ನಗರದ ಕುಲಶೇಖರ ಬಳಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರು ಕೊಡಗು ಜಿಲ್ಲೆ ವಿರಾಜಪೇಟೆಯ ಬೆಳ್ಳುರು ಗ್ರಾಮದ ಸಚಿನ್ ಹಾಗೂ ಕೊಡಗಿನ ಬಾಡಗಾ ಗ್ರಾಮದ ನಿಶಾಂತ್. ಆರೋಪಿಗಳು ಮೇ 11ರಂದು ಕುಲಶೇಖರ ಡೈರಿ ಬಳಿಯ ಮನೆಯೊಂದರ ಹೆಂಚು ತೆಗೆದು ಒಳನುಗ್ಗಿ ಕಳ್ಳತನ ಮಾಡಿದ್ದರು. ಮನೆಯಲ್ಲಿದ್ದ 87.5 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದರು. ತನಿಖೆ ನಡೆಸಿದ್ದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿ 4.29 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಜತೆಗೆ ಕೃತ್ಯಕ್ಕೆ ಬಳಸಿದ್ದ 7 ಲಕ್ಷ ರೂ. ಮೌಲ್ಯದ ಕಾರನ್ನು ಕೂಡ ವಶಪಡಿಸಿಕೊಂಡಿದ್ದಾರೆ.
ಇಬ್ಬರ ಪೈಕಿ ಸಚಿನ್ ವಿರುದ್ಧ ಕೊಡಗು ಜಿಲ್ಲೆ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ಹಗಾಉ ನಿಶಾಂತ್ ವಿರುದ್ಧ ಕೊಡಗು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಮನೆ ಕಳವು ಪ್ರಕರಣ ದಾಖಲಾಗಿದೆ. ಕಂಕನಾಡಿ ನಗರ ಠಾಣೆ ಇನ್ಸ್ಪೆಕ್ಟರ್ ಟಿಡಿ ನಾಗರಾಜ್ ನೇತೃತ್ವದಲ್ಲಿ ತನಿಖೆ ನಡೆದಿತ್ತು.
ಇದರೊಂದಿಗೆ ಕಳೆದ ಒಂದು ತಿಂಗಳಿನಲ್ಲಿ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದ್ದ ಹಲವು ಮನೆಗಳ್ಳತನ ಪ್ರಕರಣದಲ್ಲಿ ಪ್ರಮುಖ ಪ್ರಕರಣವೊಂದನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ಕೂಡ ಕಳೆದ ಎರಡು-ಮೂರು ವಾರಗಳ ನಡುವೆ ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನಲ್ಲಿಯೂ ಸರಣಿ ಮನೆ ಕಳವು ಪ್ರಕರಣ ನಡೆದಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.
ಮನೆಯಲ್ಲಿ ನಿದ್ರಿಸುತ್ತಿದ್ದ ಬಾಲಕಿಯ ಅಪಹರಣ: ಕಾಸರಗೋಡಿನಲ್ಲೊಂದು ನೀಚ ಕೃತ್ಯ
– ಬಾಲಕಿಯ ಚಿನ್ನ ದರೋಡೆಗೈದ್ದು, ಲೈಂಗಿಕ ದೌರ್ಜನ್ಯ ನೀಡಿದ ಆರೋಪಿ ಸೆರೆ
ಕಾಸರಗೋಡು : ಪಡನ್ನಕ್ಕಾಡ್ನ 10 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ದುಷ್ಕರ್ಮಿಯನ್ನು ಸೆರೆ ಹಿಡಿಯುವಲ್ಲಿ ವಿಶೇಷ ತನಿಖಾ ತಂಡ ಯಶಸ್ವಿಯಾಗಿದೆ. ಆರೋಪಿಯನ್ನು ವಿಶೇಷ ತನಿಖಾ ತಂಡ ಆಂಧ್ರಪ್ರದೇಶದಲ್ಲಿ ಬಂಧಿಸಿದ್ದು, ಬಂಧಿತ ಆರೋಪಿಯನ್ನು ಮಡಿಕೇರಿ ನಾಪೋಕ್ಲುವಿನ ಸಲೀಂ ( ೩೯) ಎಂದು ಗುರುತಿಸಲಾಗಿದೆ.
ಸ್ವಂತವಾಗಿ ಮೊಬೈಲ್ ಫೋನ್ ಬಳಸದ ಈತನ ಪತ್ತೆ ಸವಾಲಾಗಿದ್ದು, ಆದರೂ ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಲೆಗೆ ಕೆಡವಲು ಎಸ್.ಐ.ಟಿ ತಂಡ ಯಶಸ್ವಿಯಾಗಿದೆ.
ಮೇ 15 ರಂದು ಮುಂಜಾನೆ ಪಡನಕ್ಕಾಡ್ನಲ್ಲಿರುವ ತನ್ನ ಮನೆಯಲ್ಲಿ ಬಾಲಕಿ ನಿದ್ರಿಸುತ್ತಿದ್ದಾಗ, ಈಕೆಯನ್ನು ಆರೋಪಿ ಅಪಹರಿಸಿದ್ದ. ಆರೋಪಿ ಬಾಲಕಿಯ ಅಜ್ಜ ತೆರೆದಿಟ್ಟಿದ್ದ ಮುಂಭಾಗದ ಬಾಗಿಲಿನ ಮೂಲಕ ಪ್ರವೇಶಿಸಿದ್ದು, ಆಕೆಯ ಚಿನ್ನದ ಕಿವಿಯೋಲೆಗಳನ್ನು ದೋಚಿಕೊಂಡು ಒಂದು ಕಿಲೋಮೀಟರ್ ದೂರದಲ್ಲಿ ಅವಳನ್ನು ಬಿಟ್ಟು ಪರಾರಿಯಾಗಿದ್ದ ವೈದ್ಯಕೀಯ ವರದಿಯ ನಂತರ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿತ್ತು. ಮಗುವಿನ ಕುಟುಂಬ ಸದಸ್ಯರ ಪ್ರಕಾರ, ಮುಂಜಾನೆ 3 ಗಂಟೆ ಸುಮಾರಿಗೆ ಮನೆಯಲ್ಲಿದ್ದ ಹಸುಗಳ ಹಾಲು ್ಕರೆಯಲೆಂದು ಬಾಲಕಿ ಅಜ್ಜನ ಮುಂಬಾಗಿಲನ್ನು ತೆರೆದಿದ್ದರು ಸ್ವಲ್ಪ ಸಮಯದ ನಂತರ ಅವರು ಹಿಂತಿರುಗಿದಾಗ ಆಕೆ ಮಲಗಿದ್ದ ಸ್ಥಳದಲ್ಲಿರಲಿಲ್ಲ. ಅಜ್ಜ ಚಿಲಕ ತೆರೆದರೂ ಬಾಗಿಲು ಮುಚ್ಚಿಟ್ಟು ಹಟ್ಟಿಗೆ ತೆರಳುತ್ತಿದ್ದರು. ಆದರೆ ಲಾಕ್ ಮಾಡುತ್ತಿರಲಿಲ್ಲ. ಸಂತ್ರಸ್ತೆಯ ತಂದೆ, ತಾಯಿ ಮತ್ತು ಸಹೋದರಿ ಸೇರಿದಂತೆ ಕುಟುಂಬದ ಇತರ ಸದಸ್ಯರು ಅದೇ ಮನೆಯ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು .
ದುಷ್ಕರ್ಮಿಯು ಬಾಲಕಿಯನ್ನು ಅಡುಗೆಮನೆಯ ಬಾಗಿಲಿನಿಂದ ಕರೆದೊಯ್ದು ಹತ್ತಿರದ ಗದ್ದೆಯಲ್ಲಿ ತೊರೆದಿದ್ದು , ಲೈಂಗಿಕ ದೌರ್ಜನ್ಯ ನಡೆಸಿ ಬೆದರಿಕೆ ಹಾಕಿದ್ದ. ಸಹಾಯಕ ಹುಡುಗಿ ಹತ್ತಿರದ ಮನೆಯ ಬಾಗಿಲು ತಟ್ಟಿ ಅಲ್ಲಿನ ನಿವಾಸಿಗಳ ಫೋನ್ನಿಂದ ತನ್ನ ತಂದೆಗೆ ಕರೆ ಮಾಡಿದ್ದಳು. ಬಳಿಕ ಬಾಲಕಿ ಮನೆಯವರನ್ನು ಸಂಪರ್ಕಿಸಿದ ಸಮೀಪದ ಮನೆಯವರು ಮಾಹಿತಿ ನೀಡಿದ್ದರು. ಮಎಮಂದಿ ಬಾಲಕಿಯನ್ನು ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು . ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಎಸ್ ಐಟಿ ಗೆ ತನಿಖೆ ಒಪ್ಪಿಸಿದ್ದರು.
ಪ್ರಾಥಮಿಕ ತನಿಖೆಯಲ್ಲಿ ಮನೆಯ ಚಲನವಲದ ತಿಳಿದ ವ್ಯಕ್ತಿಯಿಂದಲೇ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿತ್ತು. ಸಂತ್ರಸ್ತೆ ಬಾಲಕಿಯೂ ಪೊಲೀಸರಿಗೆ ಅಪರಾಧಿಯ ಬಗ್ಗೆ ಕೆಲ ಮಾಹಿತಿ ನೀಡಿದ್ದಳು. ಮಲಯಾಳಂ ಚೆನ್ನಾಗಿ ತಿಳಿದಿದ್ದು ಲುಂಗಿ ಧರಿಸಿದ್ದ ಎನ್ನಲಾಗಿತ್ತು. ಬಾಲಕಿಯನ್ನು ಅಪಹರಿಸಿದ್ದ ದಿನ ಲಭಿಸಿದ್ದ ಸಿಸಿಟಿವಿ ದೃಶ್ಯಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಆರೋಪಿಯ ಚಲನವಲನ ಗಮನಿಸಿದ ತನಿಖಾ ತಂಡ ಆರೋಪಿಯ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿತ್ತು.
ಸ್ವಂತವಾಗಿ ಮೊಬೈಲ್ ಫೋನ್ ಬಳಸದ ಈತ ಬೇರೆಯೊಬ್ಬನ ಮೊಬೈಲ್ ಮೂಲಕ ತನ್ನ ಮನೆಯವರನ್ನು ಸಂಪರ್ಕಿಸಿದ್ದು , ಈ ನಂಬರ್ ಕೇಂದ್ರೀಕರಿಸಿ ತನಿಖೆ ನಡೆಸಿದ ತನಿಖಾ ತಂಡ ಈತನನ್ನು ಆಂದ್ರ ಪ್ರದೇಶದಲ್ಲಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ .