ಮತ್ತೆ ಪಂಜುರ್ಲಿ ಪವಾಡ!
– ಶರತ್ ಶೆಟ್ಟಿ ಕೊಲೆ ಆರೋಪಿ ಕೋರ್ಟ್ ಮುಂದೆ ಶರಣು
– ರಾಜ್ಯದಲ್ಲೇ ಕುತೂಹಲ ಮೂಡಿಸಿದ ಉಡುಪಿ ಘಟನೆ
– ತುಳುನಾಡಿನಲ್ಲಿ ಪಂಜುರ್ಲಿ ದೈವದ ಕಾರಣಿಕ
NAMMUR EXPRESS NEWS
ತುಳುನಾಡಿನ ಆರಾಧ್ಯ ದೈವವಾದ ಪಂಜುರ್ಲಿ ದೈವದ ಕಾರಣಿಕ ಘಟನೆಯೊಂದು ಉಡುಪಿ ಜಿಲ್ಲೆಯಲ್ಲಿ ನಡೆದಿದ್ದು, ದೈವೀ ಭಕ್ತರ ಗಮನಸೆಳೆದಿದೆ. ಕಳೆದ ವರ್ಷ ಅಂದರೆ 2023ರ ಫೆ.5ರಂದು ಪಾಂಗಳದಲ್ಲಿ ನಡೆದಿದ್ದ ಪಾಂಗಳ ಶರತ್ ಶೆಟ್ಟಿ(42)ಯ ಕೊಲೆ ಆರೋಪಿ ಕೋರ್ಟ್ ಮುಂದೆ ಮೇ 23ರಂದು ಶರಣಾಗುವ ಮೂಲಕ ಅಚ್ಚರಿಗೆ ಕಾರಣವಾಗಿದೆ. ಏಕೆಂದರೆ ಶರತ್ ಶೆಟ್ಟಿಯ ಕೊಲೆಯಾದ ಸಂದರ್ಭದಲ್ಲಿ ಅವರ ಕುಟುಂಬದ ಪಂಜುರ್ಲಿ ದೈವದ ಮೊರೆ ಹೋಗಿದ್ದರು. ಅದೇ ಪ್ರಕಾರ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಯೋಗೀಶ್ ಆಚಾರ್ಯ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ.
ಉಡುಪಿಯ ಪಾಂಗಳ ಎಂಬಲ್ಲಿ ಬಬ್ಬುಸ್ವಾಮಿ ದೈವಸ್ಥಾನದ ನೇಮದಲ್ಲಿ ಭಾಗವಹಿಸಿದ್ದ ಶರತ್ ಶೆಟ್ಟಿಯನ್ನು ದುಷ್ಕರ್ಮಿಗಳು ಮಾತುಕತೆಗೆ ಅಂತ ಕರೆದುಕೊಂಡು ಹೋಗಿ ನಂತರ ಹತ್ಯೆ ಮಾಡಿದ್ದರು.
ಈ ಸಂಬಂಧ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈ ಪ್ರಕರಣದ ಪ್ರಮುಖ ಆರೋಪಿ ಯೋಗೀಶ್ ಆಚಾರ್ಯ ತಲೆಮರೆಸಿಕೊಂಡಿದ್ದು ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಶರತ್ ಶೆಟ್ಟಿ ಕುಟುಂಬಸ್ಥರು. 2023ರ ಮಾ.24ರಂದು ಪಾಂಗಳದ ಮನೆಯಲ್ಲಿ ಪಾಂಗಾಳದ ಮನೆಯಲ್ಲಿ ವರ್ತೆ ಪಂಜುರ್ಲಿಗೆ ನೇಮೋತ್ಸವವನ್ನು ಆಯೋಜಿಸಿ, ದೈವದ ಮೊರೆ ಹೋಗಿದ್ದರು. ಈ ಸಂದರ್ಭದಲ್ಲಿ ಪಂಜುರ್ಲಿ ದೈವ, “ಆರೋಪಿಯನ್ನು ಪಾತಾಳದಲ್ಲಿದ್ದರೂ ಹುಡುಕಿ ಮುಂದೆ ನಿಲ್ಲಿಸುತ್ತೇನೆ” ಎಂದು ಅಭಯ ನೀಡಿತ್ತು. ದೈವದ ನುಡಿಯಂತೆ ಈಗ ಆರೋಪಿ ಕೋರ್ಟ್ಗೆ ಶರಣಾಗಿದ್ದು, ಆತನನ್ನು ನ್ಯಾಯಾಲಯವು ಮೇ 30ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ