ದಲಿತ ಬಾಲಕಿಗೆ ಲೈಂಗಿಕ ಕಿರುಕುಳ: ಪಂಚಾಯತ್ ಬಿಜೆಪಿ ಸದಸ್ಯನ ಬಂಧನ!
– ಉಡುಪಿಯ ಕಾರ್ಕಳದಲ್ಲಿ ಘಟನೆ: ಏನಿದು ಘಟನೆ?
– ಉಡುಪಿಯಲ್ಲಿ PDO ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ
– ನೆಲ್ಯಾಡಿ ಯುವಕ ರಾಜಧಾನಿಯಲ್ಲಿ ಅಪಘಾತಕ್ಕೆ ಬಲಿ!
NAMMUR EXPRESS NEWS
ಉಡುಪಿಯ ಕಾರ್ಕಳದಲ್ಲಿ ದಲಿತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನಲೆಯಲ್ಲಿ ಕಲ್ಯಾ ಗ್ರಾಮ ಪಂಚಾಯತ್ನ ಬಿಜೆಪಿ ಸದಸ್ಯ ಸಂತೋಷ್ ಪುತ್ರನ್ ನನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ದಲಿತ ಸಮುದಾಯದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಹಿನ್ನೆಲೆ ಆರೋಪಿಯ ವಿರುದ್ಧ ಮೇ 28ರಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಮತ್ತು ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಪೊಲೀಸರು ಮೇ 29ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿ ಸಂತೋಷ್ ಪುತ್ರನ್ ನಿಗೆ ನ್ಯಾಯಧೀಶರು ನ್ಯಾಯಾಂಗ ಬಂಧನ ವಿಧಿಸಿದೆ.
ಅಪಘಾತದಲ್ಲಿ ನೆಲ್ಯಾಡಿ ಯುವಕ ಸಾವು
ಬೆಂಗಳೂರಿನ ನೆಲಮಂಗಲದಲ್ಲಿ ಲಾರಿ ಹಾಗೂ ಬೈಕ್ ನಡುವಿನ ಭೀಕರ ಅಪಘಾತದಲ್ಲಿ ನೆಲ್ಯಾಡಿ ಸಮೀಪದ ಎಂಜಿರ ಪರಕ್ಕಳದ ಯುವಕ ಥಾಮಸ್ ಸಾವನ್ನಪ್ಪಿದ್ದಾರೆ. ಥಾಮಸ್ ನರ್ಸಿಂಗ್ ವಿದ್ಯಾರ್ಥಿಯಾಗಿದ್ದು, ಪರಕ್ಕಳದ ಸ್ಕೇರಿಯಾ ಅವರ ಪುತ್ರರಾಗಿದ್ದಾರೆ. ಥಾಮಸ್ ದ್ವಿಚಕ್ರದಲ್ಲಿ ಪ್ರಯಾಣಿಸುತ್ತಿರುವಾಗ ಲಾರಿಯಡಿಗೆ ಬಿದ್ದು ಮೃತಪಟ್ಟಿದ್ದಾರೆ.
ಉಡುಪಿಯಲ್ಲಿ PDO ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ
ಲೋಕಾಯುಕ್ತ ಪೊಲೀಸರು ದಾಳಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಇಬ್ಬರು ಭ್ರಷ್ಟ ಸರ್ಕಾರಿ ನೌಕರರು ಸಿಕ್ಕಿ ಬಿದ್ದಿದ್ದು, ಇದೀಗ ಜೈಲು ಸೇರಿದ್ದಾರೆ. ಭೂದಾಖಲೆ ನೀಡಲು ಲಂಚ ಸ್ವೀಕರಿಸುತ್ತಿದ್ದ ಉಡುಪಿಯ ಉಪ್ಪೂರು ಪಿಡಿಒ ಇನಾಯತ್ ಉಲ್ಲಾ ಬೇಗ್ ಹಾಗೂ ಬಿಲ್ ಕಲೆಕ್ಟರ್ ಸಂಜಯ ಎಂಬ ಈ ಇಬ್ಬರು ಸರ್ಕಾರಿ ಸಿಬ್ಬಂದಿಯು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ರವಿ ಡಿಲಿಮಾ ಅವರಿಂದ 13,300 ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಆರೋಪಿಗಳಿಗೆ ಇದೇರೀತಿ ಹಲವು ಪ್ರಕರಣದಲ್ಲಿ ಸಾರ್ವಜನಿಕರಿಂದ ಲಂಚ ಪಡೆದಿರುವ ಆರೋಪ ಕೇಳಿಬಂದಿದೆ.
ಇಬ್ಬರನ್ನು ಕೂಡ ಬಂಧನದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಕೋರ್ಟ್ ಆರೋಪಿಗಳಿಗೆ ಜೂನ್ 12ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಲೋಕಾಯುಕ್ತ ಎಸ್ಪಿ ನಟರಾಜ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೆ.ಸಿ. ಪ್ರಕಾಶ್ ಅವರ ನೇತೃತ್ವದ ತಂಡದ ಈ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್, ರಫೀಕ್ ಭಾಗವಹಿಸಿದ್ದರು.