ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಆಸ್ಪತ್ರೆಗೆ ದಾಖಲು
– ಯೂಟ್ಯೂಬ್ ಚಾನೆಲ್ ಕಚೇರಿಗೆ ನುಗ್ಗಿ ಲಕ್ಷಾಂತರ ಮೌಲ್ಯದ ಮತ್ತು ಸಾವಿರಾರು ರೂಪಾಯಿ ದೋಚಿದ ವ್ಯಕ್ತಿ
– ತೋಟದಿಂದ ತೆಂಗಿನಕಾಯಿ ತೆಗೆಸುತ್ತಿದ್ದ ಮಹಿಳೆಗೆ ಪಕ್ಕದ ತೋಟದ ಮಾಲಿಕನಿಂದ ಹಲ್ಲೆ, ಜೀವಬೆದಕೆ
NAMMUR EXPRESS NEWS
ಬಂಟ್ವಾಳ: ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕೊಯ್ದ ಗ್ರಾಮದ ಅಣ್ಣಳಿಕೆ ಎಂಬಲ್ಲಿ ಗುರುವಾರ ಸಂಭವಿಸಿದೆ. ಗಾಯಾಳು ಬೈಕ್ ಸವಾರನನ್ನು ಪಿಲಿಮೊಗರು ನಿವಾಸಿ ಸುರೇಶ್ ಎಂದು ಹೆಸರಿಸಲಾಗಿದೆ. ಸುರೇಶ್ ಅವರು ಬೈಕಿನಲ್ಲಿ ತನ್ನ ಸ್ನೇಹಿತ ಪುಷ್ಪಂದ್ರ ಸಿಂಗ್ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದ ವೇಳೆ ಅಣ್ಣಳಿಕೆ ಎಂಬಲ್ಲಿ ಉಮೇಶ್ ಎಂಬವರು ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರ ಸುರೇಶ್ ಅವರು ಗಾಯಗೊಂಡಿದ್ದು ಅವರನ್ನು ತಕ್ಷಣ ಸ್ಥಳೀಯರು ಮಂಗಳೂರು-ಅತ್ತಾವರ ಕೆಎಂಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸಹಸವಾರ ಪುಷ್ಪಂದ್ರ ಸಿಂಗ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಈ ಬಗ್ಗೆ ಗಾಯಾಳು ಸುರೇಶ್ ಅವರ ಸಹೋದರ ರಾಘವೇಂದ್ರ ಪ್ರಭು ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯೂಟ್ಯೂಬ್ ಚಾನೆಲ್ ಕಚೇರಿಗೆ ನುಗ್ಗಿ ಲಕ್ಷಾಂತರ ಮೌಲ್ಯದ ಮತ್ತು ಸಾವಿರಾರು ರೂಪಾಯಿ ದೋಚಿದ ವ್ಯಕ್ತಿ
ಬೆಳ್ತಂಗಡಿ: ಯೂಟ್ಯೂಬ್ ಚಾನೆಲ್ ಕಚೇರಿಗೆ ಬಂದ ವ್ಯಕ್ತಿಯೊಬ್ಬ ಲಕ್ಷಾಂತರ ರೂಪಾಯಿ ಮೌಲ್ಯದ ವೀಡಿಯೋ ಕ್ಯಾಮೆರಾ, ಸಿಸಿ ಟಿವಿ ಹಾಗೂ ಸಾವಿರಾರು ರೂಪಾಯಿ ನಗದು ದೋಚಿದ ಘಟನೆ ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆಯಲ್ಲಿ ಸಂಜೆ ನಡೆದಿದೆ. ಸವಣಾಲು ಗ್ರಾಮದ ನಿವಾಸಿ ಸುದೀಪ್ (24) ಎಂಬವರ ಯೂಟ್ಯೂಬ್ ಚಾನೆಲ್ ಕಚೇರಿಯಲ್ಲಿ ಈ ಕೃತ್ಯ ನಡೆದಿದ್ದು, ಆರೋಪಿಯನ್ನು ಪ್ರತೀಕ್ ಕೋಟ್ಯಾನ್ ಎಂದು ಗುರುತಿಸಲಾಗಿದೆ.
ಸುದೀಪ್ ಅವರು ಸಂತೆಕಟ್ಟೆ ಸುವರ್ಣ ಆಕೇರ್ಡ್ ಸಂಕೀರ್ಣದಲ್ಲಿ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದು, ಗುರುವಾರ ಸಂಜೆ ಆರೋಪಿ ಪ್ರತೀಕ್ ಕೋಟ್ಯಾನ್ ಕಛೇರಿಗೆ ಬಂದು, ಅಲ್ಲಿ ಕೆಲಸ ಮಾಡುತ್ತಿದ್ದ ಕೃಪೇಶ್ ಎಂಬಾತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಛೇರಿಯಲ್ಲಿದ್ದ 4.80 ಲಕ್ಷ ರೂಪಾಯಿ ಮೌಲ್ಯದ ವೀಡಿಯೋ ಕ್ಯಾಮರಾಗಳು, ಸುಮಾರು 7 ಸಾವಿರ ರೂಪಾಯಿ ಮೌಲ್ಯದ ಸಿಸಿ ಕ್ಯಾಮರಾ ಹಾಗೂ ಕ್ಯಾಶ್ ಡ್ರಾಯರಿನಲ್ಲಿದ್ದ ಸುಮಾರು 62 ಸಾವಿರ ರೂಪಾಯಿ ನಗದು ಹಣ ಸಹಿತ ಒಟ್ಟು 5.49 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ದೋಚಿದ್ದಾನೆ. ಈ ಬಗ್ಗೆ ಸುದೀಪ್ ಅವರು ಆರೋಪಿ ಪ್ರತೀಕ್ ಕೋಟ್ಯಾನಗೆ ಕರೆಮಾಡಿ ವಿಚಾರಿಸಿದಾಗ, ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 36/2024 0 504, 506, 392 ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ತೋಟದಿಂದ ತೆಂಗಿನಕಾಯಿ ತೆಗೆಸುತ್ತಿದ್ದ ಮಹಿಳೆಗೆ ಪಕ್ಕದ ತೋಟದ ಮಾಲಿಕನಿಂದ ಹಲ್ಲೆ, ಜೀವಬೆದಕೆ
ಪುತ್ತೂರು: ತೋಟದಿಂದ ತೆಂಗಿನ ಕಾಯಿ ತೆಗೆಸುತ್ತಿದ್ದ ಮಹಿಳೆಗೆ ಪಕ್ಕದ ತೋಟದ ಮಾಲಿಕ ಹಲ್ಲೆ ನಡೆಸಿದ ಬಗ್ಗೆ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ನಿವಾಸಿ ಸಂತ್ರಸ್ತ ಮಹಿಳೆಯು ತನ್ನ ತಂದೆಯ ಮನೆಯಲ್ಲಿ ವಾಸವಿದ್ದು, ತಂದೆಯ ಮರಣಾ ನಂತರ ಅವರ ಅಡಿಕೆ ಮತ್ತು ತೆಂಗಿನ ತೋಟವನ್ನು ನೋಡಿಕೊಳ್ಳುತ್ತಿದ್ದಾರೆ. ಬುಧವಾರ ಸಂಜೆ ಮಹಿಳೆ ತನ್ನ ಸಹೋದರನೊಂದಿಗೆ ತೋಟಕ್ಕೆ ತೆರಳಿ, ಪರಿಚಯದ ನೌಫಲ್ ಎಂಬವರಿಂದ ಎಳ ನೀರು ಹಾಗೂ ತೆಂಗಿನ ಕಾಯಿ ತೆಗೆಸುತ್ತಿದ್ದಾಗ, ಪಕ್ಕದ ತೋಟದವ, ಆರೋಪಿ ಎಂ ಕೆ ಉಮ್ಮರ್ ಎಂಬಾತ ಮಹಿಳೆಯ ಬಳಿಗೆ ಬಂದು ತೆಂಗಿನ ಮರದ ವಿಚಾರದಲ್ಲಿ ತಕರಾರು ತೆಗೆದು ಅವ್ಯಾಚವಾಗಿ ಬೈದು, ಅನುಚಿತವಾಗಿ ವರ್ತಿಸಿದ್ದಾನೆ.
ಈ ಸಂದರ್ಭ ಮಹಿಳೆ ಜೋರಾಗಿ ಕೂಗಿದ್ದು, ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಆಕೆಯ ತಮ್ಮ ಮಹಮ್ಮದ್ ಮುಸ್ತಾಫ್ ಹಾಗೂ ತೆಂಗಿನ ಕಾಯಿ ತೆಗೆಯುತ್ತಿದ್ದ ನೌಫಲ್ ಅಲ್ಲಿಗೆ ಬಂದಿದ್ದು, ಈ ಸಂದರ್ಭ ಆರೋಪಿ ಮಹಿಳೆಗೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡ ಮಹಿಳೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ದ.ಕ ಮಹಿಳಾ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಖ 12/2024 0 447, 354(2), 323, 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.